• December 3, 2024

ವಿಜಯ ರತ್ನ ಪ್ರಶಸ್ತಿ ಪುರಸ್ಕೃತ ಮೋಹನ್ ಕುಮಾರ್ ರವರಿಗೆ ಜೆಸಿಐ ಬೆಳ್ತಂಗಡಿ ಮಂಜುಶ್ರೀ ವತಿಯಿಂದ ಸನ್ಮಾನ

 ವಿಜಯ ರತ್ನ ಪ್ರಶಸ್ತಿ ಪುರಸ್ಕೃತ ಮೋಹನ್ ಕುಮಾರ್ ರವರಿಗೆ ಜೆಸಿಐ ಬೆಳ್ತಂಗಡಿ  ಮಂಜುಶ್ರೀ ವತಿಯಿಂದ ಸನ್ಮಾನ

 

ಉಜಿರೆ: ಉಜಿರೆಯಲ್ಲಿ ಬದುಕು ಕಟ್ಟೋಣ ಬನ್ನಿ ತಂಡವನ್ನ ಕಟ್ಟಿ, ಚಾರ್ಮಾಡಿಯ ಕೊಳಂಬೆ ಎಂಬಲ್ಲಿ ನದಿ ಪ್ರವಾಹಕ್ಕೆ ತುತ್ತಾಗಿ ಮನೆ ಮತ್ತು ತಮ್ಮ ಜೀವನ ಮಾರ್ಗವಾಗಿದ್ದ ಕೃಷಿಯನ್ನ ಕಳೆದುಕ್ಕೊಂಡಿದ್ದ ಕುಟುಂಬಗಳಿಗೆ ಮತ್ತೆ ಅದೇ ಜಾಗದಲ್ಲಿ ತಲೆ ಎತ್ತಿ ನಿಲ್ಲುವಂತೆ ತಮ್ಮ ಸೇವೆಯ ಮೂಲಕ ಮಾಡಿ, ನದಿ ಸ್ವಚ್ಛಗೊಳಿಸುವ ಮೂಲಕ‌ಮನೆ ಮಾತಾಗಿ, ಯಾವುದೆ ಫಲಾಪೇಕ್ಷಾವಿಲ್ಲದೆ ಸಮಾಜಮುಖಿ ಕೆಲಸಗಳನ್ನ ಮಾಡಿ ಮನೆ ಮನ ಸೇರಿರುವ ಲಕ್ಷ್ಮೀ ಗ್ರೂಪ್ ನ ಮೋಹನಣ್ಣ ಎಂದೆ ಅತ್ಮೀಯರಾಗಿರುವ ಶ್ರೀ ಮೋಹನ ರವರಿಗೆ ವಿಜಯ ಸಂಕೇಶ್ವರರವರ ನೇತೃತ್ವದ ವಿಜಯವಾಣಿ ಮತ್ತು ದಿಗ್ವಿಜಯ ಕೊಡುವ ರಾಜ್ಯ ಮಟ್ಟದ ವಿಜಯ ರತ್ನ ಪ್ರಶಸ್ತಿ ಬಂದಿದ್ದು ಇದು ತಾಲೂಕಿಗೆ ಹೆಮ್ಮೆಯಾಗಿದೆ. ಈ ನೆಲೆಯಲ್ಲಿ ಜೆಸಿಐ ಬೆಳ್ತಂಗಡಿ ಮಂಜುಶ್ರೀ ವತಿಯಿಂದ ಶ್ರೀಯುತರನ್ನ ಅತ್ಯಂತ ಗೌರವದಿಂದ ಅಭಿನಂದಿಸಿ ಸನ್ಮಾನಿಸಲಾಯಿತು.

Related post

Leave a Reply

Your email address will not be published. Required fields are marked *

error: Content is protected !!