• November 21, 2024

ಸನಾತನದ ಸಂತರಾದ ಪೂ. ರಮಾನಂದ ಗೌಡ ಇವರಿಂದ ‘ಜ್ಞಾನಶಕ್ತಿ ಪ್ರಸಾರ ಅಭಿಯಾನ’ಕ್ಕೆ ಚಾಲನೆ

 ಸನಾತನದ ಸಂತರಾದ ಪೂ. ರಮಾನಂದ ಗೌಡ ಇವರಿಂದ  ‘ಜ್ಞಾನಶಕ್ತಿ ಪ್ರಸಾರ ಅಭಿಯಾನ’ಕ್ಕೆ ಚಾಲನೆ

 

ಶಿವಮೊಗ್ಗ : ಸೆಪ್ಟೆಂಬರ್ 9 ರಿಂದ ಡಿಸೆಂಬರ್ 7 ರವರೆಗೆ ಸನಾತನದ ಅದ್ವಿತೀಯ ಮತ್ತು ಸರ್ವಾಂಗಸ್ಪರ್ಶಿ ಗ್ರಂಥಗಳ ಕುರಿತು ದೇಶದಲ್ಲಡೆ ಪ್ರಸಾರ ಮಾಡಿ ಧರ್ಮದ ಮಹಾನತೆಯನ್ನು ಸಾರುವ ದೃಷ್ಟಿಯಿಂದ ಸನಾತನ ಸಂಸ್ಥೆಯಿಂದ ಭಾರತದಾದ್ಯಂತ ವಿಶೇಷ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.

ಪಂಚಮ ವೇದಕ್ಕೆ ಸಮಾನವಾಗಿರುವ ಈ ಗ್ರಂಥಗಳನ್ನು ಮನೆಮನೆಗೆ ತಲುಪಿಸಿ ಪ್ರತಿಯೊಂದು ಜೀವದ ಉದ್ಧಾರ ಮಾಡೋಣ ಎಂದು ಸಂಸ್ಥೆಯ ಧರ್ಮಪ್ರಚಾರಕರಾದ ಪೂ. ರಮಾನಂದ ಗೌಡ ಇವರು ಕರೆ ನೀಡಿದರು. ಅವರು ಅನಂತ ಚತುರ್ದಶಿಯ ಈ ಶುಭದಿನದಂದು ‘ಜ್ಞಾನಶಕ್ತಿ ಪ್ರಸಾರ ಅಭಿಯಾನ’ಕ್ಕೆ ಚಾಲನೆ ಮಾಡಿದರು.

ಪೂಜ್ಯ ರಮಾನಂದ ಗೌಡ ಇವರು ಮಾರ್ಗದರ್ಶನ ಮಾಡುತ್ತಾ ಭಗವದ್ಗೀತೆ, ಮಹಾಭಾರತ ಇವುಗಳು ಈಶ್ವರ ವಾಣಿಯಿಂದ ಸಾಕಾರಗೊಂಡಿವೆ. ಆದ್ದರಿಂದ ಅವು ತುಂಬಾ ಚೈತನ್ಯದಿಂದ ಕೂಡಿವೆ. ಅದೇ ರೀತಿ ಸನಾತನದ ಗ್ರಂಥಗಳು ಸಹ ಈಶ್ವರೀ ಸಂಕಲ್ಪದಿಂದ ಸಾಕಾರಗೊಂಡಿವೆ. ಇವು ಸ್ವಯಂಭೂ ಚೈತನ್ಯದ ಆಗರವಾಗಿದ್ದು ಅದರ ಅಧ್ಯಯನ ಮಾಡುವ ಜೀವಗಳು ಅದನ್ನು ಕೃತಿಯಲ್ಲಿ ತಂದರೆ ಅವರು ಮುಂದೆ ಸಾಧಕರು, ಶಿಷ್ಯರು ಹಾಗೂ ಸಂತರೂ ಆಗಬಹುದು. ಈ ಗ್ರಂಥಗಳಿಂದಾಗಿ ಮನೆಯಲ್ಲಿ ಸಾತ್ತ್ವಿಕ ಸ್ಪಂದನಗಳು ನಿರ್ಮಾಣವಾಗಿ ವಾಸ್ತುಶುದ್ಧಿಯನ್ನೂ ಮಾಡುತ್ತದೆ. ಈ ಗ್ರಂಥಗಳ ಅಧ್ಯಯನದಿಂದ ಅಂತರ್ಮನಸ್ಸಿನಲ್ಲಿ ಸಾಧನೆಯ ಸಂಸ್ಕಾರವಾಗುತ್ತದೆ. ಇದರ ಅಧ್ಯಯನ ಮಾಡಿ ಕೃತಿಯಲ್ಲಿ ತರುವುದೆಂದರೆ ಸಾಧನೆ ಮಾಡುವುದೇ ಆಗಿದೆ. ಇದರಿಂದ ಅವರ ಉದ್ಧಾರವೇ ಆಗುತ್ತದೆ ಎಂದರು.

ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಸಂಕಲ್ಪದಿಂದ ಜುಲೈ 2022 ರ ತನಕ ಕನ್ನಡ, ಮರಾಠಿ, ತಮಿಳು ತೆಲುಗು ಸೇರಿದಂತೆ 11 ಭಾರತೀಯ ಮತ್ತು 6 ವಿದೇಶಿ ಭಾಷೆಗಳಲ್ಲಿ ಒಟ್ಟು 357 ಗ್ರಂಥಗಳು ರಚನೆಯಾಗಿದ್ದು ಇದುವರೆಗೆ 89,97,000 ದಷ್ಟು ಗ್ರಂಥಗಳು ಮುದ್ರಣಗೊಂಡು ವಿತರಣೆಯಾಗಿವೆ. ಎಲ್ಲಾ ಸಾಧಕರು, ಧರ್ಮಪ್ರೇಮಿಗಳು ಮತ್ತು ಹಿತಚಿಂತಕರು ಈ ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕವೂ ಈ ಅಭಿಯಾನದ ಪ್ರಸಾರವನ್ನು ವ್ಯಾಪಕವಾಗಿ ಮಾಡಲಿದ್ದಾರೆ.

Related post

Leave a Reply

Your email address will not be published. Required fields are marked *

error: Content is protected !!