ಉಜಿರೆಯ ರುಡ್ ಸೆಟ್ ಸಂಸ್ಥೆಯಲ್ಲಿ ಸ್ವ ಉದ್ಯೋಗ ಆಕಾಂಕ್ಷಿಗಳಿಗೆ ತರಬೇತಿ ಕಾರ್ಯಕ್ರಮ
ಧರ್ಮಸ್ಥಳದ ಸಮೀಪವಿರುವ ಉಜಿರೆಯ ರುಡ್ ಸೆಟ್ ಸಂಸ್ಥೆಯಲ್ಲಿ ಸ್ವ ಉದ್ಯೋಗ ಆಕಾಂಕ್ಷಿಗಳಿಗೆ ತರಬೇತಿ ಕಾರ್ಯಕ್ರಮವು ಜರುಗಲಿದ್ದು, ವಾಟ್ಸಪ್ ಮೂಲಕ ಗೂಗಲ್ ಫಾರಂ ಲಿಂಕ್ ಮುಖಾಂತರ ಅರ್ಜಿ ಸಲ್ಲಿಸಬಹುದಾಗಿದೆ.
ಒಕ್ಟೋಬರ್ 15 ರಿಂದ 24 ರವರೆಗೆ 10 ದಿನ ಹಪ್ಪಳ, ಉಪ್ಪಿನಕಾಯಿ ಮತ್ತು ಮಸಾಲ ಪೌಡರ್ ತರಬೇತಿ, 21 ರಿಂದ 30 ರವರೆಗೆ ರಬ್ಬರ್ ಟ್ಯಾಪಿಂಗ್ ತರಬೇತಿ, ನವೆಂಬರ್ 6 ರಿಂದ ಡಿಸೆಂಬರ್ 5 ರವರೆಗೆ ಕಂಪ್ಯೂಟರ್ ಅಕೌಂಟಿಂಗ್, ನವೆಂಬರ್ 11 ರಿಂದ 20 ರವರೆಗೆ ಜೇನು ಕೃಷಿ ತರಬೇತಿ, ಡಿಸೆಂಬರ್ 1 ರಿಂದ 30 ರವೆಗೆ ದ್ವಿ ಚಕ್ರವಾಹನಗಳ ರಿಪೇರಿ, 14 ರಿಂದ 13.1.2024 ರವೆಗೆ ಗೃಹೋಪಯೋಗಿ ವಿದ್ಯುತ್ ಉಪಕರಣಗಳ ರಿಪೇರಿ ತರಬೇತಿಯನ್ನ ನೀಡಲಾಗುತ್ತದೆ.
ವಯೋಮಿತಿ :- 18 ರಿಂದ 45 ವರ್ಷ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಬೇಕಾಗುತ್ತದೆ. ತರಬೇತಿಯ ಅವಧಿಯಲ್ಲಿ ಊಟ ಮತ್ತು ವಸತಿ ಸಂಪೂರ್ಣವಾಗಿ ಉಚಿತವಾಗಿರುತ್ತದೆ ಜೊತೆಗೆ ಸಂಸ್ಥೆಯ ಸಮವಸ್ತ್ರ ಉಚಿತವಾಗಿ ಕೊಡಲಾಗುವುದು. ಬ್ಯಾಂಕಿನಿಂದ ಸಿಗುವ ಸಾಲದ ಬಗ್ಗೆ ಮಾಹಿತಿ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಅಂಚೆ ವಿಳಾಸ : ನಿರ್ದೇಶಕರು, ರುಡ್ ಸೆಟ್ ಸಂಸ್ಥೆ, ಸಿದ್ಧವನ, ಉಜಿರೆ ( ಧರ್ಮಸ್ಥಳದ ಹತ್ತಿರ)-574240
08256-236404, ವಾಟ್ಸಪ್ ನಂ: 6364561982 , ವಾಟ್ಸಪ್ ಮೂಲಕ ಸಹ ಅರ್ಜಿ ಸಲ್ಲಿಸಬಹುದು.
Online website : rudsetujire.com ಇದರಲ್ಲೋ ಅರ್ಜಿ ಸಲ್ಲಿಸಬಹುದು.
ಈ ಗೂಗಲ್ ಫಾರಂ ಲಿಂಕ್ನಲ್ಲಿ ಅರ್ಜಿ ಸಲ್ಲಿಸಬಹದು : https://forms.gle/Z2xPLE1FigamcMBd9