• November 21, 2024

ಧಾರ್ಮಿಕ ಭಾವನೆಗೆ ಧಕ್ಕೆ ತರುವ ‘ಲಂಗೋಟಿ ಮ್ಯಾನ್’ ಚಿತ್ರಕ್ಕೆ ಸೆನ್ಸಾರ್ ಬೋರ್ಡ್ ಅನುಮತಿ ನೀಡಬಾರದು ! – ಹಿಂದೂ ಜನಜಾಗೃತಿ ಸಮಿತಿ

 ಧಾರ್ಮಿಕ ಭಾವನೆಗೆ ಧಕ್ಕೆ ತರುವ ‘ಲಂಗೋಟಿ ಮ್ಯಾನ್’ ಚಿತ್ರಕ್ಕೆ ಸೆನ್ಸಾರ್ ಬೋರ್ಡ್ ಅನುಮತಿ ನೀಡಬಾರದು ! – ಹಿಂದೂ ಜನಜಾಗೃತಿ ಸಮಿತಿ

 

‘ಲಂಗೋಟಿ ಮ್ಯಾನ್` ಕನ್ನಡ ಚಲನಚಿತ್ರದ ಟ್ರೈಲರಿನಲ್ಲಿ ಒಬ್ಬ ಜನೀವಾರಧಾರಿ ಮತ್ತು ಲಂಗೋಟಿ ಹಾಕಿರುವ ಬ್ರಾಹ್ಮಣ ವ್ಯಕ್ತಿಯನ್ನು ಹಾಸ್ಯಸ್ಪದವಾದ ರೀತಿಯಲ್ಲಿ ತೋರಿಸಿರುವುದನ್ನು ಹಿಂದೂ ಜನಜಾಗೃತಿ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಮಿತಿಯ ಬೆಂಗಳೂರು ಜಿಲ್ಲಾ ಸಮನ್ವಯಕರಾದ ಶರತ್ ಕುಮಾರ್ ಇವರು `ಈ ಚಲನಚಿತ್ರದ ಮೂಲಕ ಸಮಾಜದಲ್ಲಿ ಹಿಂದೂಗಳ ಭಾವನೆಗೆ ಧಕ್ಕೆ ತರುವ ಕೆಲಸ ಮಾಡಲಾಗುತ್ತಿದೆ. ಹಾಗಾಗಿ ಸೆನ್ಸಾರ್ ಬೋರ್ಡ್ ಈ ಚಲನಚಿತ್ರಕ್ಕೆ ಅನುಮತಿ ನೀಡಬಾರದು, ಒಂದು ವೇಳೆ ನೀಡಿದ್ದಲ್ಲಿ ಕೂಡಲೇ ಅದನ್ನು ಹಿಂಪಡೆಯಬೇಕು, ಚಲನಚಿತ್ರ ನಿರ್ದೇಶಕರು-ನಿರ್ಮಾಪಕರು ಇದೇ ರೀತಿ ಅನ್ಯ ಧರ್ಮಿಯರ ಸಾಂಸ್ಕೃತಿಕ ಉಡುಪುಗಳನ್ನು ಹಾಸ್ಯಸ್ಪದವಾಗಿ ತೋರಿಸುವ ಧೈರ್ಯವನ್ನು ತೋರಿಸುವರೇ ಎಂದು ಪ್ರಶ್ನಿಸಿದ್ದಾರೆ.

‘ಲಂಗೋಟಿ ಮ್ಯಾನ್’ ಚಲನಚಿತ್ರವನ್ನು ಹಿಂದೂ ಜನಜಾಗೃತಿ ಸಮಿತಿ ಬಹಿಷ್ಕರಿಸುತ್ತದೆ. ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಈ ಚಲನಚಿತ್ರ ವಿರುದ್ಧ ಸೆನ್ಸಾರ್ ಮಂಡಳಿ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಮುಂಬರುವ ಚಲನಚಿತ್ರಗಳಲ್ಲಿ ದೇವರ ಮತ್ತು ಹಿಂದೂಗಳ ಭಾವನೆಗೆ ಧಕ್ಕೆಯಾಗದಂತೆ ನೋಡಬೇಕು’ ಎಂದು ಮನವಿ ಮಾಡಿದರು.

ಸ್ಯಾಂಡಲ್ ವುಡ್ ನಲ್ಲಿ ಕಳೆದ ಕೆಲವು ತಿಂಗಳುಗಳಿಂದ ಧಾರ್ಮಿಕ ಮತ್ತು ಸಾಂಸ್ಕೃತಿಕ ಭಾವನೆಗಳಿಗೆ ಧಕ್ಕೆ ತರುವ ಚಿತ್ರಗಳಿಗೆ ಅನುಮತಿ ನೀಡಲಾಗುತ್ತಿದೆ. ‘ರಾಮನ ಅವತಾರ’ ಈಗ `ಲಂಗೋಟಿ ಮ್ಯಾನ್’ ಈ ಚಿತ್ರಗಳಲ್ಲಿ ಉದ್ದೇಶಪೂರ್ವಕವಾಗಿ ಹಿಂದೂ ದೇವರು ಮತ್ತು ಸಂಸ್ಕೃತಿಯನ್ನು ಗುರಿ ಮಾಡಿ ಹೆಸರಿಸಲಾಗಿದ್ದು, ವಾಸ್ತವದಲ್ಲಿ ಇಂತಹ ವಿವಾದಗಳು ಏಳದಂತೆ ಮುತುವರ್ಜಿ ವಹಿಸಿವುದು ಸೆನ್ಸಾರ್ ಮಂಡಳಿಯ ಜವಾಬ್ದಾರಿಯಾಗಿದೆ. ಈ ರೀತಿಯ ಚಿತ್ರಗಳಿಗೆ ಅನುಮತಿ ನೀಡುವುದೆಂದರೆ ಮಂಡಳಿಯ ಬೇಜವಾಬ್ದಾರಿಯಾಗಿದೆ. ಹಿಂದೂ ಸಮಾಜ ಇದನ್ನು ಎಂದಿಗೂ ಸಹಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Related post

Leave a Reply

Your email address will not be published. Required fields are marked *

error: Content is protected !!