ಮಕ್ಕಳ ಭಾಗ್ಯವೇ ಇಲ್ಲದ ದಂಪತಿಗಳ ಬಾಳಲ್ಲಿ ಮದುವೆಯಾಗಿ 6 ವರ್ಷಗಳ ಬಳಿಕ ಅವಳಿ ಜವಳಿ ಕಂದಮ್ಮಗಳ ಜನನ: ಆರಿಕೋಡಿ ಶ್ರೀ ಚಾಮುಂಡೇಶ್ವರಿ ತಾಯಿಯ ಕಾರ್ಣಿಕ
ಸುಳ್ಯ ತಾಲೂಕಿನ ಗುಂಡಿಯ ಮನೆ ಪ್ರವೀಣ್ ಮತ್ತು ಧನ್ಯಶ್ರೀ ಎಂಬುವವರು ಸುಮಾರು 6 ವರ್ಷಗಳ ಹಿಂದೆ ಮದುವೆಯಾಗಿದ್ದು, ಅವರ ದಾಂಪತ್ಯ ಜೀವನದಲ್ಲಿ ಮಕ್ಕಳ ಭಾಗ್ಯ ಒದಗಿ ಬರಲಿಲ್ಲ.
ಆ ಸಂದರ್ಭದಲ್ಲಿ ಪವಿತ್ರ ಕ್ಷೇತ್ರವಾದ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿ ಯಲ್ಲಿ ಬಂದು ದೇವಿ ಚಾಮುಂಡೇಶ್ವರಿ ಅಮ್ಮನವರ ಅಭಯದ ನುಡಿಯಲ್ಲಿ ವಿಚಾರಣೆ ಮಾಡಿದ್ದಾರೆ.
ಆ ಸಂದರ್ಭದಲ್ಲಿ ಸಮಸ್ಯೆಯನ್ನು ಪರಿಹಾರ ಮಾಡಿ, ನಿಮ್ಮ ದಾಂಪತ್ಯ ಜೀವನದಲ್ಲಿ ಒಂದು ವರ್ಷಗಳ ಒಳಗಡೆ ಮಕ್ಕಳ ಭಾಗ್ಯ ಒದಗಿ ಬರುತ್ತದೆ ಎಂದು ಶ್ರೀದೇವಿ ಆಭಯ ಕೊಟ್ಟಳು. ಕೊಟ್ಟ ಮಾತಿನ ಪ್ರಕಾರವಾಗಿ ಅವರ ದಾಂಪತ್ಯ ಜೀವನದಲ್ಲಿ ಅವಳಿ ಜವಳಿ ಮಕ್ಕಳ ಭಾಗ್ಯ ಒದಗಿ ಬಂತು. ಅವರ ಜೀವನದ ಕತ್ತಲೆಯನ್ನು ದೂರ ಮಾಡಿದ ಶ್ರೀದೇವಿ ಚಾಮುಂಡೇಶ್ವರಿ ಅಮ್ಮನವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.