ಶಾಸಕರ ವಿರುದ್ದ ಕಾಂಗ್ರೆಸ್ ಮುಖಂಡ ರಕ್ಷಿತ್ ಶಿವರಾಂ ನೀಡಿದ ಆರೋಪಕ್ಕೆ ಶಾಸಕ ಹರೀಶ್ ಪೂಂಜರಿಂದ ಸ್ಪಷ್ಟನೆ: ಸುದ್ದಿಗೊಷ್ಠಿ
ಬೆಳ್ತಂಗಡಿ: ಶಾಸಕರ ವಿರುದ್ದ ಕಾಂಗ್ರೆಸ್ ಮುಖಂಡ ರಕ್ಷಿತ್ ಶಿವರಾಂ ನೀಡಿದ ಆರೋಪಕ್ಕೆ ಶಾಸಕ ಹರೀಶ್ ಪೂಂಜ ಇಂದು ಸ್ಪಷ್ಟನೆ ನೀಡಿದ್ದಾರೆ.
ಅವರು ಇಂದು ದಿ ಓಷ್ಯನ್ ಪರ್ಲ್ ಉಜಿರೆಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಹರೀಶ್ ಪೂಜರವರು ಇಂದು ಓಷ್ಯನ್ ಪರ್ಲ್ ನಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ರಕ್ಷಿತ್ ಶಿವರಾಂ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ.
ಐ ಬಿ ಯಲ್ಲಿ ಭ್ರಷ್ಟಾಚಾರದ ಬಗ್ಗೆ ಹೇಳಿಕೆ ನೀಡಿದ ರಕ್ಷಿತ್ ಶಿವರಾಂ ರವರೆ ಬ್ರಿಟಿಷರ ಕಾಲದ ಐ ಬಿಯನ್ನು ಕೆಡವಿದ್ದೀರಿ ಎಂದಿರುವ ನೀವು ಬ್ರಿಟಿಷರ ಬಗ್ಗೆ ಸಹಾನುಭೂತಿ ತೋರಿದ್ದೀರಾ.
ಐ ಬಿ ಯಲ್ಲಿ ನೀರು ಸೋರುತ್ತಿತ್ತು ಮತ್ತು ಗಬ್ಬು ನಾರುತ್ತಿತ್ತು ಬೇರೆ ಊರುಗಳಿಂದ ಬರುತ್ತಿದ್ದ ಯಾತ್ರಿಗಳು ಮತ್ತು ಅಧಿಕಾರಿಗಳಿಗೆ ತಂಗುವುದಕ್ಕೆ ಯೋಗ್ಯ ವಾದ ಕಟ್ಟಡ ನಿರ್ಮಿಸಿದ್ದೇವೆ ಇದರಲ್ಲಿ 60% ನಾನು ಪಡೆದಿಲ್ಲ.
ಬಿಮಲ್ ಕಂಪೆನಿಯೊಂದೆಗೆ ನನ್ನ ಯಾವುದೇ ಶೇರ್ ಇರುವುದಿಲ್ಲ ಮತ್ತು ಇವರಿಂದ ಯಾವುದೇ 1 ರೂಪಾಯಿ ಕಮಿಷನ್ ಪಡೆದು ಕೊಂಡಿಲ್ಲ.
ರಾಷ್ಟ್ರೀಯ ಹೆದ್ದಾರಿಯ ಕೆಲಸ ನಿಧಾನಗತಿ ಬರುವುದಕ್ಕೆ ಕಂಪೆನಿಯ ಫೈನಾನ್ಸಿಯಲ್ ಸಮಸ್ಯೆಯೇ ಕಾರಣ,
ರಾಷ್ಟ್ರೀಯ ಹೆದ್ದಾರಿ ಶಾಸಕರ ಅಧೀನದಲ್ಲಿ ಬರುವುದಿಲ್ಲ. ಸಂಸದರ ಮತ್ತು ಕೇಂದ್ರ ಸರಕಾರದ ಅಡಿಯಲ್ಲಿ ಬರುವ ಕೆಲಸ.
ಸಂಸದರೊಂದಿಗೆ ರಾಷ್ಟ್ರೀಯ ಹೆದ್ದಾರಿಯ ಬಗ್ಗೆ ಅನೇಕ ಸುತ್ತಿನ ಮಾತುಕತೆ ನಡೆಸಿ ಮೊಗ್ರೋಡಿ ಸಂಸ್ಥೆಗೆ ವಹಿಸಿ ಕೊಟ್ಟಿದ್ದೇವೆ.
ಒಂದು ಸಮಯ ಪ್ರವಾಹ ಬಂದಾಗ ನೀವು ಹುಟ್ಟಿದ ಊರು ನೆನಪಾಗಿಲ್ವ ಆ ಸಮಯದಲ್ಲಿ 48 ಲಕ್ಷ ಹಣ ನನ್ನ ದುಡಿಮೆಯಿಂದ ಹಣ ನೀಡಿದ್ದೇನೆ
ನೀವು ಬೆಸ್ಟ್ ಪೌಂಡೇಶನ್ ಕಟ್ಟಿ ದ್ದು ಎಲ್ಲಿಗೆ ಹೋಯಿತು ಎಂದು ಹೇಳಿದರು.