6 ವರ್ಷಗಳ ಹಿಂದೆ ಮದುವೆಯಾಗಿದ್ದ ದಂಪತಿಗಳ ಬಾಳಲ್ಲಿ ಮಕ್ಕಳ ಭಾಗ್ಯ ಇಲ್ಲದೆ ಕೊರಗುತ್ತಿದ್ದಾಗ ಮಕ್ಕಳ ಭಾಗ್ಯ ಕರುಣಿಸಿದ ಚಾಮುಂಡೇಶ್ವರಿ ತಾಯಿ
ಬಂಟ್ವಾಳ ತಾಲೂಕು ವಿಟ್ಲ ಮುಡ್ನೂರು ಗ್ರಾಮದ ಅಳಕೆ ಮಜಲು ಪರಿಸರದ ಮುರಳಿ ಮತ್ತು ಸುನಿತ ಎಂಬುವವರು ಸುಮಾರು 6 ವರ್ಷಗಳ ಹಿಂದೆ ಮದುವೆಯಾಗಿದ್ದು, ಅವರ ದಾಂಪತ್ಯ ಜೀವನದಲ್ಲಿ ಮಕ್ಕಳ ಭಾಗ್ಯ ಒದಗಿ ಬರದೇ ಇದ್ದಾಗ, ಎಲ್ಲ ರೀತಿಯ ಪ್ರಯತ್ನ ಮಾಡಿದರೂ ಏನೂ ಪ್ರಯೋಜನ ಸಿಗಲಿಲ್ಲ.
ಆ ಸಂದರ್ಭದಲ್ಲಿ ಪವಿತ್ರ ಕ್ಷೇತ್ರವಾದ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿಗೆ ಬಂದು ಶ್ರೀದೇವಿ ಚಾಮುಂಡೇಶ್ವರಿಯ ಅಭಯದ ನುಡಿಯಲ್ಲಿ ವಿಚಾರಣೆ ಮಾಡಿದರು. ಆ ಸಂದರ್ಭದಲ್ಲಿ ಸಮಸ್ಯೆಯನ್ನು ಪರಿಹಾರ ಮಾಡಿ ನಿಮ್ಮ ದಾಂಪತ್ಯದಲ್ಲಿ ಒಂದು ವರ್ಷದ ಒಳಗೆ ಮಕ್ಕಳ ಭಾಗ್ಯ ಒದಗಿ ಬರುತದೆ ಎಂದು ದೇವಿ ಚಾಮುಂಡೇಶ್ವರಿಯು ಅಭಯ ಕೊಟ್ಟಳು. ಕೊಟ್ಟ ಮಾತಿನ ಪ್ರಕಾರವಾಗಿ ಅವರ ದಾಂಪತ್ಯದಲ್ಲಿ ಮಕ್ಕಳ ಭಾಗ್ಯ ಒದಗಿ ಬಂತು. ಅವರ ದಾಂಪತ್ಯದ ಕತ್ತಲೆಯನ್ನು ಬೆಳಕು ಮಾಡಿದ ಶ್ರೀದೇವಿಗೆ ದಂಪತಿಗಳು ಸಹಿತ ವಿಶೇಷವಾಗಿ ಪೂಜೆಯನ್ನು ಸಲ್ಲಿಸಿದರು.