ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಧರ್ಮಸ್ಥಳದಲ್ಲಿ ಹಿಂದಿ ದಿವಸ್ ಆಚರಣೆ
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಧರ್ಮಸ್ಥಳದಲ್ಲಿ ಹಿಂದಿ ದಿವಸವನ್ನು ಸಂಭ್ರಮ ದಿಂದ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಎಸ್ ಡಿ .ಎಂ .ಪಿ. ಯು ಕಾಲೇಜು ಉಜಿರೆಯ ಮುಖ್ಯ ಹಿಂದಿ ಉಪನ್ಯಾಸಕರಾಗಿರುವ ಡಾಕ್ಟರ್ ಮಲ್ಲಿಕಾರ್ಜುನ್ ಎನ್, ಮುಖ್ಯ ಅತಿಥಿಗಳಾಗಿ ಆಗಮಿಸಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.
ನಮ್ಮ ದೇಶದ ರಾಷ್ಟ್ರ ಭಾಷೆಯನ್ನು ಅತೀ ಹೆಚ್ಚು ಜನರು ಮಾತನಾಡುವುದು ನಮ್ಮೆಲ್ಲರ ಹೆಮ್ಮೆ ಆಗಿದೆ. ಹಾಗಾಗಿ ಅವಕಾಶ ಸಿಕ್ಕಾಗ ಎಲ್ಲರೂ ಹಿಂದಿ ಭಾಷೆಯಲ್ಲಿ ಮಾತನಾಡುವ ಅಭ್ಯಾಸವನ್ನು ಇಟ್ಟುಕೊಳ್ಳುವ ಎಂದು ಸಲಹೆ ನೀಡಿದರು.
ಶಾಲಾ ಮುಖ್ಯೋಪಾಧ್ಯಾಯಿನಿ ಪರಿಮಳ ಎಂ ವಿ ಯವರು ದೇಶದಲ್ಲೆಲ್ಲೆಡೆ ಸಂಚರಿಸುವ ಸಂದರ್ಭದಲ್ಲಿ ಹಿಂದಿ ಭಾಷೆಯು ಬಹಳ ಮುಖ್ಯವಾಗಿ ನಾವು ಚಿಕ್ಕಂದಿನಿಂದಲೆ ಭಾಷೆಯನ್ನು ಕಲಿಯಲು ಪ್ರಾರಂಭಿಸಿದರೆ ಅದು ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತದೆ.ಮಕ್ಕಳಲ್ಲಿ ಹೆಚ್ಚು ಹೆಚ್ಚು ಹಿಂದಿ ಮಾತನಾಡಿ ಅಭ್ಯಾಸ ಮಾಡಲು ತಿಳಿ ಹೇಳಿದರು.
ಈ ದಿನದ ಪ್ರಯುಕ್ತ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು ಇದರಲ್ಲಿ ವಿಜೇತರಾದವರಿಗೆ ಬಹುಮಾನವನ್ನು ಸಹ ಅತಿಥಿಗಳು ನೀಡಿದರು.
ವಿದ್ಯಾರ್ಥಿಗಳು ಹಿಂದಿಯಲ್ಲಿ ತಾವೇ ರಚಿಸಿದ ಕವನ, ಲೇಖನಗಳನ್ನು ಬರೆದು ಶಾಲೆಯ ಬುಲೆಟಿನ್ ಬೋರ್ಡ ನ್ನು ಅಲಂಕರಿಸಿದ್ದರು. ಮಕ್ಕಳು ಹಿಂದಿ ಭಾಷೆಯಲ್ಲಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದರು .
ಕುಮಾರಿ ಚಿನ್ಮಯಿ ರೈ ನಿರೂಪಿಸಿದ ಕಾರ್ಯಕ್ರಮದಲ್ಲಿ, ಕುಮಾರಿ ನಿವೇಧ್ಯ ಸ್ವಾಗತಿಸಿ, ಸಿಂಧೂರ ಧನ್ಯವಾದವನ್ನು ನೀಡಿದರು.ಶಾಲಾ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.