ಪುತ್ತೂರು: ಬರ್ತಡೇ ಖುಷಿಯಲ್ಲಿದ್ದ ಬಾಲಕಿಯನ್ನು ಬಲಿ ಪಡೆದುಕೊಂಡ ಜ್ವರ
ಪುತ್ತೂರು: ಬರ್ತಡೇ ಖುಷಿಯಲ್ಲಿದ್ದ ಬಾಲಕಿಯನ್ನು ಜ್ವರ ಬಲಿ ಪಡೆದುಕೊಂಡ ಘಟನೆ ಸವಣೂರಿನಲ್ಲಿ ನಡೆದಿದೆ.
ಸವಣೂರು ಶಾಂತಿನಗರ ನಿವಾಸಿಯಾಗಿರುವ ಉಮರ್ ಅವರ ಸಹೋದರಿಯ ಎಂಟನೇ ತರಗತಿ ವಿದ್ಯಾರ್ಥಿ ನಿ ಅಫ್ರಿಯಾ ಮೃತ ದುರ್ದೈವಿ.
ಬಾಲಕಿಯ ತಾಯಿ 5 ವರ್ಷದ ಹಿಂದೆ ನಿಧನ ಹೊಂದಿದ್ದರು. ಹೀಗಾಗಿ ಅಫ್ರಿಯಾ ಸಂಬಂಧಿಕರ ಮನೆಯಲ್ಲಿದ್ದಳು. ನಿನ್ನೆ ಬಾಲಕಿಯ ಹುಟ್ಟುಹಬ್ಬವಾಗಿತ್ತು.ಹಾಗಾಗಿ ನನ್ನ ಅಣ್ಣ ಸಂಜೆ ಕೇಕ್ ತರುತ್ತಾನೆ ನೀವೆಲ್ಲರೂ ಮನೆಗೆ ಬರಬೇಕೆಂದು ಊರವರನ್ನೆಲ್ಲ ಆಹ್ವಾನಿಸಿದ್ದಳು.