ಬೆಳ್ತಂಗಡಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆ ಉಜಿರೆಯಲ್ಲಿ ಪದವಿ ಶಿಕ್ಷಣವನ್ನು ಪಡೆದಿರುವ ರಕ್ಷಿತಾ ಎಂ ಬಿ ಇವರು ಭಾರತೀಯ ಸೇನೆಯ ಪ್ಯಾರಾ ಮಿಲಿಟರಿ ಫೋರ್ಸ್ SSCGD ಅಸ್ಸಾಂ ರೈಫಲ್ಸ್ ಗೆ ಆಯ್ಕೆಯಾಗಿದ್ದಾರೆ. ಇವರು ಮೂಲತಃ ಸುಳ್ಯ ತಾಲೂಕಿನ ಐವರ್ನಾಡಿಯವರಾಗಿದ್ದು ಪ್ರಸ್ತುತ ಧರ್ಮಸ್ಥಳದ ಪಾಂಗಾಳದಲ್ಲಿ ವಾಸವಿದ್ದಾರೆ. ಈಕೆ ಭಾಸ್ಕರ ಮಡ್ತಿಲ ಮತ್ತು ಮಮತಾ ದಂಪತಿಗಳ ಸುಪುತ್ರಿ. ಇವರಿಗೆ ಶಾಸಕರಾದ ಹರೀಶ್ ಪೂಂಜರವರು ಶಾಲು ಹೊದಿಸಿ ಗೌರವವನ್ನು ಸಲ್ಲಿಸಿದ್ದಾರೆ.Read More