• October 30, 2024

ಸರಳವಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಆರಿಕೋಡಿ ಶ್ರೀ ಚಾಮುಂಡೇಶ್ವರಿ ಸನ್ನಿಧಾನದ ಧರ್ಮದರ್ಶಿಗಳಾದ ಹರೀಶ್ ಆರಿಕೋಡಿ

 ಸರಳವಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಆರಿಕೋಡಿ ಶ್ರೀ ಚಾಮುಂಡೇಶ್ವರಿ ಸನ್ನಿಧಾನದ ಧರ್ಮದರ್ಶಿಗಳಾದ ಹರೀಶ್ ಆರಿಕೋಡಿ

 

ಸಕಲ ಕಷ್ಟಗಳನ್ನು ಅಭಯದ ನುಡಿಯ ಮೂಲಕ ಅದೆಷ್ಟೋ ಲಕ್ಷ ಲಕ್ಷ ಭಕ್ತಾಧಿಗಳ ಮೊಗದಲ್ಲಿ ಮಂದಹಾಸ ಮೂಡಿಸುವ , ಕಾರ್ಣಿಕ ಮೆರೆವ ಆರಿಕೋಡಿ ಶ್ರೀ ಚಾಮುಂಡೇಶ್ವರಿ ದೇವಿ ಸನ್ನಿಧಾನದ ಧರ್ಮದರ್ಶಿಗಳಾದ ಶ್ರೀ ಹರೀಶ್ ಆರಿಕೋಡಿಯವರ ಹುಟ್ಟುಹಬ್ಬವನ್ನು ನಂದಗೋಕುಲ ಗೋ ಶಾಲೆ ಕಳೆಂಜ ಇಲ್ಲಿಗೆ ಭೇಟಿ ನೀಡಿ, ಗೋಶಾಲೆಯ ಗೋಗ್ರಾಸಕ್ಕಾಗಿ 25,000₹ ಗಳನ್ನು ನಂದಗೋಕುಲ ಗೋಶಾಲೆಯ ಅಧ್ಯಕ್ಷರಾದ ಡಾ ದಯಾಕರ ಮುಖಾಂತರ ಗೋಶಾಲೆಗೆ ನೀಡಿದ್ದಾರೆ.

ಗೋಶಾಲೆಯ ಸದಾಕಾಲ ಸಹಾಕರಿಸುವುದಾಗಿ ತಿಳಿಸುತ್ತ, ಕಾರ್ಯಕ್ರಮ ಚಟುವಟಿಕೆಯ ಮೆಚ್ಚುಗೆ ವ್ಯಕ್ತಪಡಿಸಿದರು. ಅವರನ್ನು ಗೋಶಾಲೆಯ ಪರವಾಗಿ ಅಭಿನoದಿಸಲಾಯಿತು. ಸಂದರ್ಭದಲ್ಲಿ ನಂದಗೋಕುಲ ಗೋಶಾಲೆಯ ಅಧ್ಯಕ್ಷರಾದ ಡಾ. ದಯಾಕರ, ಅರಿಕೊಡಿ ಚಾಮುಂಡೇಶ್ವರಿ ದೇವಸ್ಥಾನದ ಸಿಬ್ಬಂದಿಗಳು ಮತ್ತು ನಂದಗೋಕುಲ ಗೋಶಾಲೆ ಸಿಬ್ಬಂದಿಗಳು ಉಪಸ್ಥಿತರಿದ್ದರು

ಅಲ್ಲದೆ ಪ್ರಸಿದ್ಧ ಆಲಯದಲ್ಲಿ ನೆಲೆಸಿದ ಸೌತಡ್ಕ ಶ್ರೀ ಮಹಾಗಣಪತಿ ದೇವಾಲಯಕ್ಕೂ ಭೇಟಿ ನೀಡಿ ಸರಳವಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

ಇವರೊಂದಿಗೆ ಇವರ ಧರ್ಮಪತ್ನಿ, ಹಾಗೂ ಮೊದಲಾದವರು ಜೊತೆಗಿದ್ದರು

Related post

Leave a Reply

Your email address will not be published. Required fields are marked *

error: Content is protected !!