ಅಪಾಯದಂಚಿನಲ್ಲಿ ವಿದ್ಯುತ್ ಕಂಬ ಹಾಗೂ ಬೃಹತ್ ಗಾತ್ರದ ಮರ: ಅನಾಹುತ ಸೃಷ್ಠಿಯಾಗುವ ಮೊದಲೇ ತೆರವುಗೊಳಿಸುವಂತೆ ಸ್ಥಳಿಯರ ಆಗ್ರಹ
ಗುರುವಾಯನಕೆರೆ -ಕಾರ್ಕಳ ಹೆದ್ದಾರಿ ರಸ್ತೆ ಹಾದು ಹೋಗುವ ವಾಗ ಕಾಣ ಸಿಗುವ ಕಾಪಿನಡ್ಕ ತಿರುವು ಪಕ್ಕ ಸುಮಾರು 50ಮೀಟರ್ ಸಮೀಪ ಬಳಂಜ ಗ್ರಾಮ ಪಂಚಾಯತ್ ಗೊಳಪಟ್ಟ ಹಿಮರಡ್ಡ ಕ್ಕೆ ಹೋಗುವ ರಸ್ತೆಯು
ಇತ್ತೀಚೆಗೆ ಅಗಲೀಕರಣ ವಾಗಿದ್ದು ರಸ್ತೆ ಬದಿ ವಿದ್ಯುತ್ ಕಂಬ ವು ರಸ್ತೆ ಕಡೆ ವಾಲಿ ತಂತಿ ಗಳು ರಸ್ತೆ ಮದ್ಯೆ ಜೋತು ಬೀಳುವ ಬಿದ್ದು ಇಂದು ನಾಳೆ ಬೀಳುವ ಸ್ಥಿತಿ ಯಲ್ಲಿದ್ದು ಸ್ವಲ್ಪ ಮುಂದೆ ಬ್ರಹತ್ ಗಾತ್ರ ದ ಮರವು ಅಪಾಯದಂಚಿನಲ್ಲಿದೆ.
ಇದರ ಬಗ್ಗೆ ಪಂಚಾಯತ್ ಸದಸ್ಯರಿಗೆ, ಮೆಸ್ಕಾಂ ಇಲಾಖೆ ಯ ಲೈನ್ ಮ್ಯಾನ್ ಗೆ ಮಾಹಿತಿ ಕಳೆದ ಒಂದು ತಿಂಗಳಿನ ಹಿಂದೆಯೇ ಮಾಹಿತಿ ನೀಡಿದ್ದು ಅದೂ ಇದು ಅಂತ ಕುಂಟು ನೆಪ ಉತ್ತರ ನೀಡಿ ಇದುವರೆಗೂ ತೆರವು ಗೊಳಿಸುವ ಕೆಲಸ ನಡೆಸಿಲ್ಲ.
ಈ ರಸ್ತೆ ಯಲ್ಲಿ ವಿದ್ಯಾರ್ಥಿಗಳು, ವಾಹನ ಸವಾರರು, ಸಾರ್ವಜನಿಕರು ಹೋಗುವ ರಸ್ತೆ ಯಾಗಿದ್ದು ಹೀಗಾಗಲೇ ಕೆಲವು ಕಡೆ ವಿದ್ಯುತ್ ಅಘಾತ ಗಳಿಂದ ಅನಾಹುತ ಆಗುತ್ತಿದ್ದು ಮೆಸ್ಕಾಂ ಇಲಾಖೆ, ಅರಣ್ಯ ಅಧಿಕಾರಿಗಳಿಗೆ, ಗ್ರಾಮ ಪಂಚಾಯತ್ ಗೆ ಆದಷ್ಟು ಬೇಗ ಈ ವಿದ್ಯುತ್ ಕಂಬ ಹಾಗೂ ಮರವನ್ನು ತೆರವು ಗೊಳಿಸಿ ಮುಂದೆ ಆಗುವ ಅನಾಹುತ ವನ್ನು ತಪ್ಪಿಸಬೇಕೆಂದು ಸ್ಥಳೀಯರು ಆಗ್ರಹಿಸಿಸುತ್ತಿದ್ದಾರೆ.