• April 17, 2025

ಇಂದಬೆಟ್ಟು: ಮಹಾತ್ಮ ಗಾಂಧಿಜಯಂತಿ ಪ್ರಯುಕ್ತ ಸ್ವಚ್ಛತಾ ಕಾರ್ಯಕ್ರಮ

 ಇಂದಬೆಟ್ಟು: ಮಹಾತ್ಮ ಗಾಂಧಿಜಯಂತಿ ಪ್ರಯುಕ್ತ ಸ್ವಚ್ಛತಾ ಕಾರ್ಯಕ್ರಮ

 

ಅಕ್ಟೋಬರ್ 2 ಮಹಾತ್ಮ ಗಾಂಧಿಜಯಂತಿ ಪ್ರಯುಕ್ತ ಸ್ವಚ್ಛತಾ ಕಾರ್ಯಕ್ರಮ ಪ್ರಾಥಮಿಕ ಆರೋಗ್ಯ ಕೇಂದ್ರ
ಇಂದಬೆಟ್ಟು ವಿನಲ್ಲಿ ಆರಂಭಗೊಂಡು ಇಂದಬೆಟ್ಟು ಬಸ್ ನಿಲ್ದಾಣ ಪರಿಸರದ ಮೂಲಕ ಗ್ರಾಮ ಪಂಚಾಯತ್ ಕಚೇರಿ ವರೆಗೆ ನಡೆಯಿತು.

ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು ಸದಸ್ಯರು, ಸಿಬ್ಬಂದಿ ವರ್ಗದವರು, ಗ್ರಾಮದ ಯುವ ಸಂಘಟನೆ ನವ ಭಾರತ್ ಗೆಳೆಯರ ಬಳಗ “ರಿ” ಕಲ್ಲಾಜೆ ಇಂದಬೆಟ್ಟು ಇದರ ಪದಾಧಿಕಾರಿಗಳು ಹಾಗೂ ಸದಸ್ಯರು, ಸುಧರ್ಮ ಆಟೋ ಚಾಲಕ ಮಾಲಕರ ಸಂಘದ ಪದಾಧಿಕಾರಿಗಳು, ಸಮೃದ್ಧಿ ಸಂಜೀವಿನಿ ಸಂಘದ ಸದಸ್ಯರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಪ್ರಾಥಮಿಕ ಆರೋಗ್ಯ

ಕೇಂದ್ರದ ಸಿಬ್ಬಂದಿಗಳು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಪ್ರಾಥಮಿಕ ಆರೋಗ್ಯ ಕೇಂದ್ರದ ರಕ್ಷಿತ್ ರವರು ಸ್ವಾಗತಿಸಿದರು, ಪಂಚಾಯತ್ ಕಾರ್ಯದರ್ಶಿ ಗಿರಿಯಪ್ಪ ಗೌಡ ರವರು ವಂದಿಸಿದರು, ಪಂಚಾಯತ್ ವತಿಯಿಂದ ಲಘ ಉಪಹಾರದ ವ್ಯವಸ್ಥೆಯನ್ನು ಮಾಡಲಾಯಿತು.

Related post

Leave a Reply

Your email address will not be published. Required fields are marked *

error: Content is protected !!