ಉಪ್ಪಿನಂಗಡಿ: 29ನೇ ವರುಷದ ಶ್ರೀ ವಿಶ್ವಕರ್ಮ ಪೂಜಾ ಮಹೋತ್ಸವ: ಕಲಾ ಕ್ಷೇತ್ರದಲ್ಲಿ ಸಾಧನೆಗೈದ ದಯಾನಂದ ಆಚಾರ್ಯ ನೆಲ್ಯಾಡಿ ಇವರಿಗೆ ಗೌರವಾರ್ಪಣೆ
ಉಪ್ಪಿನಂಗಡಿ : ವಿಶ್ವ ಕರ್ಮ ಸಮಾಜ ಸೇವಾ ಸಂಘ(ರಿ.) ಉಪ್ಪಿನಂಗಡಿ ಇದರ ವತಿಯಿಂದ ಇತ್ತೀಚೆಗೆ ಕಲಾ ಕ್ಷೇತ್ರದಲ್ಲಿ ಸುದೀರ್ಘ ಸಾಧನೆ ಮಾಡಿರುವ ಶ್ರೀ ದಯಾನಂದ ಆಚಾರ್ಯ ನೆಲ್ಯಾಡಿ ಇವರನ್ನು 29ನೇ ವರುಷದ ಶ್ರೀ ವಿಶ್ವಕರ್ಮ ಪೂಜಾ ಮಹೋತ್ಸವ ದ ಸಂದರ್ಭದಲ್ಲಿ ರಂಗ ಶ್ರಮಿಕ ಎಂಬ ಬಿರುದನ್ನಿತ್ತು ಗೌರವಿಸಲಾಯಿತು.
ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು, ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳು, ಸರ್ವ ಸದಸ್ಯರು, ಸ್ವಜಾತಿ ಬಾಂಧವರು ಉಪಸ್ಥಿತರಿದ್ದರು.