ಪಟ್ರಮೆ: ವಿಪರೀತ ಹೊಟ್ಟೆನೋವೆಂದು ಬಳಲುತ್ತಿದ್ದ ಯುವತಿ ಚಿಕಿತ್ಸೆ ಫಲಕಾರಿಯಾಗದೆ ಸಾವು
ಪಟ್ರಮೆ: ಹೊಟ್ಟೆನೋವೆಂದು ಆಸ್ಪತ್ರೆಗೆ ದಾಖಲಾಗಿದ್ದ ಪಟ್ರಮೆ ನಿವಾಸಿ ರಕ್ಷಿತ ಎಂಬಾಕೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ಎ.6 ರಂದು ವರದಿಯಾಗಿದೆ.
ಮೃತ ಯುವತಿ ಪಟ್ರಮೆ ಗ್ರಾಮದ ಪಟ್ಟೂರು ನಿವಾಸಿ ಬಾಬು ಎಂಬವರ ಪುತ್ರಿ.
ಎ.5 ರಂದು ವಿಪರೀತ ಹೊಟ್ಟೆನೋವೆಂದು ಬಳಲುತ್ತಿದ್ದ ಈಕೆಯನ್ನು ನೆಲ್ಯಾಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ. ಹೊಟ್ಟೆನೋವಿಗೆ ನಿಖರ ಕಾರಣ ಏನು ಎಂಬುದರ ಮಾಹಿತಿ ಲಭ್ಯವಾಗಬೇಕಾಗಿದೆ.