• December 3, 2024

ನಡ : ಸುಟ್ಟ ರೀತಿಯಲ್ಲಿ ಅಪರಿಚಿತ ಮಹಿಳೆಯ ಪತ್ತೆ ಪ್ರಕರಣ: ಘಟನಾ ಸ್ಥಳದಲ್ಲಿ ಹಲವು ವಸ್ತುಗಳು ಪತ್ತೆ

 ನಡ : ಸುಟ್ಟ ರೀತಿಯಲ್ಲಿ ಅಪರಿಚಿತ ಮಹಿಳೆಯ ಪತ್ತೆ ಪ್ರಕರಣ: ಘಟನಾ ಸ್ಥಳದಲ್ಲಿ ಹಲವು ವಸ್ತುಗಳು ಪತ್ತೆ

 

ನಡ : ಡಿ.12 ರಂದು ಸಂಜೆ ನಡ ಗ್ರಾಮದ ಕೇಳ್ತಾಜೆ ಬಳಿ ಅಪರಿಚಿತ ಮಹಿಳೆ ಶವವೊಂದು ಸುಟ್ಟ ರೀತಿಯಲ್ಲಿ ಕಂಡು ಬಂದಿತ್ತು. ಇಂದು ಡಿ.13 ರಂದು ನಡೆಸಲಾದ ತನಿಖೆಯಲ್ಲಿ ಇಂದು ಸುಟ್ಟ ಶವದ ಹಲವು ಗುರುತುಗಳು ಪತ್ತೆಯಾಗಿದೆ.

ಮೃತದೇಹದಲ್ಲಿ ಎರಡು ಕಾಲು ಉಂಗುರ, ಕೈಯಲ್ಲಿ ನಾಗರ ಹಾವಿನ ರೀತಿಯ ಉಂಗುರ, ಕೈ ಬಲೆಗಳು, ಸುಟ್ಟ ರೀತಿಯಲ್ಲಿ ಚೈನ್ ವಾಚ್, ಕುತ್ತಿಗೆಗೆ ಹಾಕುವ ಶಿವಲಿಂಗಧಾರಣೆ, ಬಟ್ಟೆಯ ಬಟನ್, ಸುಟ್ಟು ಉಳಿದ ಸ್ವಲ್ಪ ಬಟ್ಟೆಗಳು, ತಲೆಗೆ ಹಾಕುವ ಕ್ಲಿಪ್ ಪತ್ತೆಯಾಗಿದೆ.

ಸುಮಾರು 30-40 ವರ್ಷದ ಮಹಿಳೆಯ ಮೃತದೇಹ ಇದಾಗಿದೆ ಎಂದು ಡಾಕ್ಟರ್ ಮಹಾಬಲ ಶೆಟ್ಟಿ ಅವರು ಅಂದಾಜಿಸಿದ್ದಾರೆ. ಘಟನೆ ನಡೆದ ಸ್ಥಳದಲ್ಲಿಯೇ ಮಂಗಳೂರು ದೇರಳಕಟ್ಟೆ ಆಸ್ಪತ್ರೆಯ ಡಾ.ಅನಂತನ್, ಡಾ.ಆಶಿವರ್ಮ, ಪ್ರಕಾಶ್ ಶವಪರೀಕ್ಷೆ ಮಾಡಿದ್ದು, ನಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಶವಗಾರ ಮಂಚೆಕಲ್ಲಿನಲ್ಲಿ ದಫನ ಮಾಡಿದ್ದಾರೆ.

ಮಂಗಳೂರು ಎಫ್‌ಎಸ್ಎಲ್ ನ ಡಾ.ವೀಣಾ ಮತ್ತು ತಂಡ ಹಾಗೂ ಮಂಗಳೂರು ದೇರಳಕಟ್ಟೆ (ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಡಾಕ್ಟರ್ ಮಹಾಬಲ ಶೆಟ್ಟಿ ಮತ್ತು ತಂಡ ತನಿಖೆಯಲ್ಲಿ ಭಾಗಿಯಾಗಿದ್ದರು. ಎಡಿಷನಲ್ ಎಸ್ಪಿ ಕುಮಾರ್ ಚಂದ್ರ, ಇಸ್ಪೆಕ್ಟರ್ ಶಿವಕುಮಾರ್, ಸಬ್ ಇಸ್ಪೆಕ್ಟರ್ ನಂದಕುಮಾರ್ ಎಎಸ್‌ಐ ತಿಲಕ್ ರಾಜ್. ಬೆರಳಚ್ಚುಗಾರರಾದ ಸಚಿನ್ ರೈ ಉದಯ ಭಾಗಿ, ಶ್ವಾನ ದಳ ವಿಭಾಗದ ಗಣೇಶ್, ಸುಂದರ್ ಶೆಟ್ಟಿ ತನಿಖೆ ನಡೆಸಿದ್ದಾರೆ.

Related post

Leave a Reply

Your email address will not be published. Required fields are marked *

error: Content is protected !!