• December 28, 2024

ಯಕ್ಷಭಾರತಿಯಿಂದ ಮನೆ ಮನೆ ತಾಳಮದ್ದಳೆ ಚಾವಡಿಕೂಟ ಆರಂಭ

 ಯಕ್ಷಭಾರತಿಯಿಂದ ಮನೆ ಮನೆ ತಾಳಮದ್ದಳೆ ಚಾವಡಿಕೂಟ ಆರಂಭ

 

ಯಕ್ಷಭಾರತಿ ರಿ ಕನ್ಯಾಡಿ ಬೆಳ್ತಂಗಡಿ ಸಂಸ್ಥೆಯ ದಶಕ ಸಂಭ್ರಮ ಪ್ರಯುಕ್ತ ಮನೆ ಮನೆ ತಾಳಮದ್ದಳೆ ಚಾವಡಿ ಕೂಟ ದ ಪ್ರಥಮ ಕಾರ್ಯಕ್ರಮ ಡಿ.24 ರಂದು ಪುಂಜಾಲಕಟ್ಟೆಯ ಕುರಿಯಾಡಿಯ ಕೆ ರಾಜಾರಾಮ್ ಶೆಟ್ಟಿ ಯವರ ಮನೆ ಸಂಪಿಗೆ ಯಲ್ಲಿ ಶ್ರೀ ಮಹಿಷಮರ್ದಿನಿ ಯಕ್ಷಗಾನ ಸಂಘ ಪಾರಂಕಿ ಮಡಂತ್ಯಾರು ಇದರ ಸಹಕಾರದೊಂದಿಗೆ ನಡೆಯಿತು. ಆಯೋಜಕರಾದ ರಾಜಾರಾಮ್ ಶೆಟ್ಟಿ ಯವರು ದೀಪ ಪ್ರಜ್ವಲಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮನೆಯವರು ಬಂಧು ಮಿತ್ರರು ಉಪಸ್ಥಿತರಿದ್ದರು. ಪ್ರಸ್ತುತಿಯಾದ ವಾಲಿ ಮೋಕ್ಷ ಪ್ರಸಂಗದಲ್ಲಿ
ಭಾಗವತರಾಗಿ ಮಹೇಶ ಕನ್ಯಾಡಿ , ಬಾಲಕೃಷ್ಣ ಭಟ್ ಬಳ್ಳಮಂಜ, ಕಿಶೋರ್ ಶೆಟ್ಟಿ ಮುಡಾಯೂರು
ಚೆಂಡೆ ಮದ್ದಳೆಯಲ್ಲಿ ಚಂದ್ರಶೇಖರ ಆಚಾರ್ಯ ಗುರುವಾಯನಕೆರೆ, ವಿಶ್ವನಾಥ ಆಚಾರ್ಯ ವಾಮದಪದವವು, ದೇವೀಪ್ರಸಾದ್ ಆಚಾರ್ಯ ಮಡಂತ್ಯಾರು , ಯೋಗೀಶ ಆಚಾರ್ಯ ಪಣಕಜೆ, ಕಾರ್ತಿಕ್ ಭಟ್, ಚಕ್ರತಾಳದಲ್ಲಿ ಕೇಶವ ಮಡಂತ್ಯಾರು
ಸಹಕರಿಸಿದರು.

ಮುಮ್ಮೇಳದಲ್ಲಿ ಹನುಮಂತನಾಗಿ ಕಿಶೋರ್ ಗೌಡ ಬಸವನಗುಡಿ, ಸುಗ್ರೀವನಾಗಿ ಪ್ರಭಾಕರ ಪಿ.ಎಮ್, ಶ್ರೀರಾಮನಾಗಿ ಹರಿದಾಸ ಗಾಂಭೀರ ಧರ್ಮಸ್ಥಳ, ವಾಲಿಯಾಗಿ ಸುರೇಶ ಕುದ್ರೆಂತ್ತಾಯ ಉಜಿರೆ, ತಾರೆಯಾಗಿ ಹರ್ಷನಾರಾಯಣ ಶೆಟ್ಟಿ ನೆತ್ತರ ಪಾತ್ರ ನಿರ್ವಹಿಸಿದರು.

ತಾಳಮದ್ದಳೆ ಪ್ರದರ್ಶನಕ್ಕೆ ಅವಕಾಶ ನೀಡಿದ ರಾಜಾರಾಮ್ ಶೆಟ್ಟಿ ಅವರನ್ನು ಸಂಸ್ಥೆಯ ವತಿಯಿಂದ ಶಾಲು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಜಯರಾಮ್ ಶೆಟ್ಟಿ, ಲಕ್ಷ್ಮಣ್ ದಾಸ್ ಕಾರ್ಯಕ್ರಮ ವ್ಯವಸ್ಥಾಪಕರಾಗಿ ಸಹಕಾರ ನೀಡಿದರು.

Related post

Leave a Reply

Your email address will not be published. Required fields are marked *

error: Content is protected !!