• October 18, 2024

ಅಡ್ಯನಡ್ಕ ಕರ್ನಾಟಕ ಬ್ಯಾಂಕ್‌ ಕಳವು ಪ್ರಕರಣ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ರಿಂದ ಮೂವರು ಅಂತರಾಜ್ಯ ಕಳ್ಳರ ಬಂಧನ

 ಅಡ್ಯನಡ್ಕ ಕರ್ನಾಟಕ ಬ್ಯಾಂಕ್‌ ಕಳವು ಪ್ರಕರಣ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ರಿಂದ ಮೂವರು ಅಂತರಾಜ್ಯ ಕಳ್ಳರ ಬಂಧನ

 

  ಫೆ.7 ರಂದು ಸಂಜೆ 06.00 ಗಂಟೆಯಿಂದ ಫೆ 8 ರಂದು ಬೆಳಿಗ್ಗೆ 09.30 ಗಂಟೆಯ ಮಧ್ಯದ ಅವಧಿಯಲ್ಲಿ ಬಂಟ್ವಾಳ ತಾಲೂಕು ಕೇಪು ಗ್ರಾಮದ ಅಡ್ಯನಡ್ಕದಲ್ಲಿರುವ ಕರ್ನಾಟಕ ಬ್ಯಾಂಕಿನ ದಕ್ಷಿಣ ದಿಕ್ಕಿನ ಗೋಡೆಯಲ್ಲಿರುವ ಕೀಟಕಿಯ ಸರಳಗಳನ್ನು ಯಾರೋ ಕಳ್ಳರೂ ಯಾವುದೋ ಸಾಧನದಿಂದ ಮುರಿದು ಒಳಪ್ರವೇಶಿಸಿ ಗ್ಯಾಸ್‌ ಕಟರ್‌ನಿಂದ ಸ್ಟ್ರಾಂಗ್‌ ರೂಮಿನ ಬಾಗಿಲ್ಲನ್ನು ತುಂಡರಿಸಿ ಒಳ ಪ್ರವೇಶಿಸಿ 17,28,735 ರೂ ನಗದು ಹಾಗೂ 696.21 ಗ್ರಾಂ ಚಿನ್ನಭರಣ ಮತ್ತು 1,00,000/- ಮೌಲ್ಯದ ಬೆಳ್ಳಿ ಕಳ್ಳತನ ಮಾಡಿದ ಬಗ್ಗೆ ವಿಟ್ಲ ಠಾಣಾ ಅ.ಕ್ರ. 25/2024 ಕಲಂ:457,380 ಬಾಧಂಸಂ ರಂತೆ ಪ್ರಕರಣ ದಾಖಲಾಗಿತ್ತು.

 ಈ ಪ್ರಕರಣದ ಪತ್ತೆ ಬಗ್ಗೆ ವಿಶೇಷ ತಂಡ ರಚಿಸಿ ತನಿಖೆ ಮಾಡಿದ್ದು ಮಾ.10 ರಂದು ಆರೋಪಿಗಳಾದ ಗೂಡಿನ ಬಳಿಯ ಮಹಮ್ಮದ್‌ ರಫೀಕ್್(35) ಬಿಂಗಿನಾನಿ ಮನೆ  ಇಬ್ರಾಹಿಂ ಕಲಂದರ್(41 ದಯಾನಂದ ಎಸ್‌ (37) ಆರೋಪಿಗಳನ್ನು ಬಂಧಿಸಿ ಪ್ರಕರಣಕ್ಕೆ ಸಂಬಂದಿಸಿದಂತೆ  ತನಿಖೆ ನಡೆಸಿ 2,40,700/- ರೂ ನಗದು , ಕಳ್ಳತನದ ಹಣದಿಂದ ಖರೀದಿಸಿದ ಗೃಹಉಪಯೋಗಿ ಸಾಮಗ್ರಿಗಳ ಮೌಲ್ಯ -2 ಲಕ್ಷ ಒಟ್ಟು ರೂ 4,40,700/-  ಹಾಗೂ ರೂ 12,48,218/-ರೂ ಮೌಲ್ಯದ ಚಿನ್ನಾಭರಣ, ಹಾಗೂ ಕಳ್ಳತನಕ್ಕೆ ಉಪಯೋಗಿಸಿದ ಕೆಎ-01-ಎನ್‌ಜಿ-2227ನೇ ನೊಂದಣಿ ನಂಬ್ರದ ಬ್ರೀಝಾ ಕಾರು -01 ಗ್ಯಾಸ್‌ ಕಟರ್‌ ಹಾಗೂ ಇತರೆ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ.
 

ಪ್ರಕರಣದಲ್ಲಿ ಇನ್ನೂ 02 ಜನ ಆರೋಪಿಗಳ ಪತ್ತೆಗೆ ಬಾಕಿ ಇರುತ್ತದೆ

ಸದ್ರಿ ಆರೋಪಿ ಪತ್ತೆಯ ಕಾರ್ಯಾಚರಣೆಯನ್ನು ದ.ಕ ಜಿಲ್ಲಾ ಪೊಲೀಸ್‌ ಅಧೀಕ್ಷಕರಾದ ಮಾನ್ಯ ಶ್ರೀ ಸಿ ಬಿ ರಿಷ್ಯಂತ್‌ ಐ.ಪಿ.ಎಸ್‌ ಮತ್ತು ಹೆಚ್ಚುವರಿ ಪೊಲೀಸ್‌ ಅಧೀಕ್ಷಕರಾದ ಶ್ರೀ ಧರ್ಮಪ್ಪ ಎನ್‌ ಎಂ ಹಾಗೂ ಶ್ರೀ ರಾಜೇಂದ್ರ ಡಿ ಎಸ್‌ ರವರ ಮಾರ್ಗದರ್ಶನದಂತೆ ಬಂಟ್ವಾಳ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಎಸ್.‌ ವಿಜಯ ಪ್ರಸಾದ್‌ ರವರ ನಿರ್ದೇಶನದಂತೆ, ವಿಟ್ಲ ಠಾಣೆಯ ಪ್ರಸನ್ನ ಕುಮಾರ್, ವಿಟ್ಲ ಪೊಲೀಸ್ ಠಾಣಾ ಪೊಲೀಸ್‌ ನಿರೀಕ್ಷಕರಾದ ಶ್ರೀ ನಾಗರಾಜ್‌ ಹೆಚ್‌ ಈ ರವರ ನೇತ್ರತ್ವದಲ್ಲಿ ಪೊಲೀಸ್‌ ಉಪ ನಿರೀಕ್ಷಕರಾದ ನಂದಕುಮಾರ್‌, ಉದಯರವಿ, ಹರೀಶ್‌ ಕುಮಾರ್‌, ವಿದ್ಯಾ ಕೆ.ಜೆ. ಸಿಬ್ಬಂಧಿಗಳಾದ ವೆಂಕಟರಮಣ ಗೌಡ, ಪ್ರವೀಣ್‌ ಮೂರುಗೋಳಿ, ಉದಯ ರೈ, ರಕ್ಷೀತ್‌ ರೈ , ಪ್ರವೀಣ್‌ ರೈ ಪಾಲ್ತಾಡಿ, ಅದ್ರಾಮ, ಕರುಣಾಕರ, ರಾಹುಲ್‌ ರಾವ್‌, ಶ್ರೀಧರ ಸಿ ಎಸ್‌, ಜಗದೀಶ್‌ ಅತ್ತಾಜೆ, ಹೇಮರಾಜ್‌, ಅಶೋಕ್‌, ವಿವೇಕ್‌ ಕೆ., ಕುಮಾರ್‌ ಹೆಚ್.ಕೆ. , ಸಂಪತ್‌, ದಿವಾಕರ್‌, ಸಂತೋಷ್‌ ,ಕುಮಾರ್‌ ಮಾಯಪ್ಪರವರು ಭಾಗವಹಿಸಿರುತ್ತಾರೆ. ಸದ್ರಿ ತಂಡಕ್ಕೆ ಮಾನ್ಯ ಪೊಲೀಸ್‌ ಅಧೀಕ್ಷಕರು ನಗದು ಬಹುಮಾನ ಘೋಷಿಸಿರುತ್ತಾರೆ.

Related post

Leave a Reply

Your email address will not be published. Required fields are marked *

error: Content is protected !!