ಕೊಕ್ರಾಡಿ – ನಾರಾವಿ ರಸ್ತೆಯಲ್ಲಿ ಬೈಕ್ ಮರಕ್ಕೆ ಡಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಏ.12 ರಂದು ಮಧ್ಯರಾತ್ರಿ ನಡೆದಿದೆ. ನಾರಾವಿಯಿಂದ ವೇಣೂರು ಕಡೆಗೆ ಬೈಕ್ ಸವಾರ ಪ್ರಶಾಂತ್ ಹೋಗುತ್ತಿದ್ದ ವೇಳೆ ತಿರುವು ರಸ್ತೆಯಲ್ಲಿ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಪ್ರಶಾಂತ್ ಹಾಗೂ ಸಹಸವಾರ ದಿನೇಶ್ ಗಂಭೀರ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಕಲ್ಮoಜ : ಕಲ್ಮoಜ ಗ್ರಾಮ ನಿವಾಸಿ ರಘು (62 ವರ್ಷ )ಅವರು ಅಲ್ಪಕಾಲದ ಅನಾರೋಗ್ಯದಿಂದ ಫೆ 19 ರಂದು ನಿಧನರಾದರು. ಮೃತರು ಪತ್ನಿ ಸುಂದರಿ, ಮಕ್ಕಳಾದ ಧನಂಜಯ, ಮಧುರಾಜ್, ಲೋಹಿತ್, ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜರವರ ಆಪ್ತ ಸಹಾಯಕರಾದ ವಿನೋದ್ ರಾಜ್ , ಹಾಗೂ ನಳಿನಿ, ಬಂಧು ಮಿತ್ರರು, ಕುಟುಂಬಸ್ಥರನ್ನು ಅಗಲಿದ್ದಾರೆ. ಶಾಸಕರಾದ ಹರೀಶ್ ಪೂಂಜರವರು ಹಾಗೂ ವಿವಿಧ ಕ್ಷೇತ್ರದ ಗಣ್ಯರು, ಪಕ್ಷದ ಪ್ರಮುಖರು, ಕಾರ್ಯಕರ್ತರು ಮೃತರ ಮನೆಗೆ ಭೇಟಿ ಅಂತಿಮ ದರ್ಶನ ಪಡೆದರು.Read More
ಬೆಳ್ತಂಗಡಿ ತಾಲೂಕು ಶಿಶಿಲ ಗ್ರಾಮದ ದೇನೋಡಿಯ ಪ್ರಸಿದ್ದ ನಾಟಿ ವೈದ್ಯರಾದ ಉಮೇಶ್ ಪಂಡಿತ್ ರವರು ನಿಧನರಾಗಿದ್ದಾರೆ. ಕೆಲ ಸಮಯದಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಇವರು ಮಂಗಳೂರು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಬೆಳ್ತಂಗಡಿ, ಪುತ್ತೂರು, ಕಡಬ ತಾಲ್ಲೂಕಿನ ಪಟ್ಟಣಗಳಲ್ಲಿ ವಾರವಾರ ಶಿಬಿರ ನಡೆಸಿ ಹಳ್ಳಿ ಮದ್ದಿನ ಮುಖಾಂತರ ಅನೇಕ ಜನರ ಖಾಯಿಲೆಗಳನ್ನು ಗುಣಪಡಿಸಿ, ಅನೇಕ ಅಭಿಮಾನಿಗಳನ್ನು ಹೊಂದಿರುತ್ತಾರೆ. ಅನೇಕ ಸಂಘ ಸಂಸ್ಥೆಗಳಿಂದ ಸನ್ಮಾನಿಸಲ್ಪತ್ತಿರುತ್ತಾರೆ. ಇವರು ಹೆಂಡತಿ, ಮಕ್ಕಳು, ಅಪಾರ ಬಂಧು ಮಿತ್ರರನ್ನು ಅಗಲಿರುತ್ತಾರೆ.Read More
ಬಂಟ್ವಾಳ:ಹಿರಿಯ ಯಕ್ಷಗಾನ ಹಾಸ್ಯ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ ಎಂದು ತಿಳಿದು ಬಂದಿದೆ.ಇಂದಿನಿಂದ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಯಕ್ಷಗಾನ ಕಾರ್ಯಕ್ರಮದಲ್ಲಿ ಭಾಗವಹಿಸಲು ಆದಿತ್ಯವಾರ ಬೆಳಗ್ಗೆ ಇನ್ನಿತರ ಕಲಾವಿದರೊಂದಿಗೆ ಬೆಂಗಳೂರಿಗೆ ತೆರಳಿದ್ದ ಅವರಿಗೆ ಇಂದು ಮುಂಜಾನೆ ನಾಲ್ಕು ಗಂಟೆ ಸುಮಾರಿಗೆ ತೀವ್ರತರವಾದ ಹೃದಯಾಘಾತಕ್ಕೊಳಗಾದ ಅವರನ್ನು ಜೊತೆ ಕಲಾವಿದರು ತಕ್ಷಣ ಬೆಂಗಳೂರಿನ ಸ್ಥಳೀಯ ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆಗೆ ಸ್ಪಂಧಿಸದೇ ನಿಧನ ಹೊಂದಿದ್ದಾರೆ . ಬೆಂಗಳೂರಿನ ಆಸ್ಪತ್ರೆಯಲ್ಲಿರುವ ಮೃತ ದೇಹವನ್ನು ಆಂಬುಲೆನ್ಸ್ ಮೂಲಕ ಊರಿಗೆRead More
ಧರ್ಮಸ್ಥಳ ಗ್ರಾಮದ ಕನ್ಯಾಡಿಯ ಹಿರಿಯ ಕೃಷಿಕರು ಗ್ರಾಮದ ಗುತ್ತಿನ ಮನೆಯ ಮುಖ್ಯಸ್ಥರಾದ ಅಚ್ಯುತ್ತ ರಾವ್ ಮತ್ತಿಲ (81 ವರ್ಷ) ಇವರು ಅಕ್ಟೋಬರ್ 7,ಸೋಮವಾರ ರಾತ್ರಿ ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ದೈವಾದೀನರಾಗಿದ್ದಾರೆ. ಧರ್ಮಸ್ಥಳದ ರಥಬೀದಿಯ ಹಿರಿಯ ವ್ಯಾಪಾರಿಯಾಗಿದ್ದ ಇವರು ಎಲ್ಲರಿಗೂ ಮಾರ್ಗದರ್ಶಕರಾಗಿದ್ದರು.ಪತ್ನಿ ಅನ್ನಪೂರ್ಣ,ಮಕ್ಕಳಾದ ಗುರುರಾಜ್,ವಿದ್ಯಾಧರ್,ಶಶಿಧರ್ ಮತ್ತು ಮಗಳಾದ ಮಾಧವಿ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.ಮೃತರ ಸ್ವಗೃಹದಲ್ಲಿ ಅಂತಿಮ ದರ್ಶನಕ್ಕೆ ಮಂಗಳವಾರ ಬೆಳಿಗ್ಗೆ 11 ಗಂಟೆಯ ತನಕ ಅವಕಾಶವಿದೆ.Read More