ಬೆಳ್ತಂಗಡಿ: ಸೇವೆ ಮತ್ತು ಆರ್ಥಿಕ ಸದೃಢತೆ ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾ. ಯೋಜನೆಯ ಮೂಲ ಮಂತ್ರ. ಆ ಮೂಲಕ ಪ್ರತೀ ಕುಟುಂಬದಲ್ಲಿ ಆರ್ಥಿಕ ಸುಸ್ಥಿರತೆ ತರುವ ಸಂಕಲ್ಪದೊಂದಿಗೆ ಹಣಕಾಸು ಸಂಸ್ಥೆಯೊಂದಿಗಿನ ಸಂಪರ್ಕ ಸೇತುವಾಗಿ ಗ್ರಾ. ಯೋಜನೆ ಕೆಲಸ ಮಾಡುತ್ತಿದೆ ಎಂದು ಉಡುಪಿ ವಿಭಾಗದ ಪ್ರಾದೇಶಿಕ ನಿರ್ದೇಶಕ ದುಗ್ಗೇ ಗೌಡ ಹೇಳಿದರು. ಪಡಂಗಡಿ ಪ್ರಾ.ಕೃ.ಪ.ಸಹಕಾರ ಸಂಘದ ಸಮೃದ್ದಿ ಸಭಾಭವನದಲ್ಲಿ ಸೆ 27ರಂದು ನಡೆದ,ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ ಗುರುವಾಯನಕರೆ ಇದರ ವ್ಯಾಪ್ತಿಯ ಪ್ರಗತಿ […]
ಮದ್ದಡ್ಕ: ಅ.2: ನಿವೃತ್ತಿ ಹೊಂದಿದ ಹೆಮ್ಮೆಯ ಯೋಧ ಮಂಜುನಾಥ ಹಾಗೂ ” ಕರ್ನಾಟಕ
ಮದ್ದಡ್ಕ: ಭಾರತೀಯ ಭೂಸೇನೆಯಲ್ಲಿ ಸುಧೀರ್ಘ 24 ವರ್ಷ ಭಾರತ ಮಾತೆಯ ಸೇವೆಗೈದು ವೃತ್ತಿಯಿಂದ ನಿವೃತ್ತಿ ಹೊಂದಿ, ತಾಯ್ನಾಡಿಗೆ ಆಗಮಿಸುತ್ತಿರುವ ಹೆಮ್ಮೆಯ ಯೋಧ ಮಂಜುನಾಥ ಇವರಿಗೆ ಹಾಗೂ ನಮ್ಮೂರ ಪ್ರೌಢಶಾಲೆ ಗುರುವಾಯನಕೆರೆಯ ಚಿತ್ರಕಲಾ ಶಿಕ್ಷಕ” ಕರ್ನಾಟಕ ರಾಜ್ಯದ ಅತ್ಯುತ್ತಮ ಶಿಕ್ಷಕ” ಪ್ರಶಸ್ತಿಯನ್ನು ಪಡೆದ ವಿಶ್ವನಾಥ ಗೌಡ(ವಿ.ಕೆ ವಿಟ್ಲ) ಇವರಿಗೆ ಅ.2 ರಂದು ಸಮುದಾಯ ಭವನ ಮದ್ದಡ್ಕದಲ್ಲಿ ನಾಗರಿಕ ಅಭಿನಂದನಾ ಸಮಾರಂಭವು ನಡೆಯಲಿದೆ. ತುಳುಕೂಟ ಬರೋಡ ಅಧ್ಯಕ್ಷ ಶಶಿಧರ ಬಿ ಶೆಟ್ಟಿ ಸಭಾಧ್ಯಕ್ಷತೆಯನ್ನು ವಹಿಸಲಿದ್ದು, ಕಾರ್ಕಳ ಅಂಕಣಕಾರರು ಆದರ್ಶ್ […]Read More
ಬೆಳ್ತಂಗಡಿಯಲ್ಲಿ ಕರ್ನಾಟಕ ದಲಿತ ಚಳುವಳಿ 50ರ ಸಂಭ್ರಮಾಚರಣೆ ಡಿಸೆಂಬರ್ 16ಕ್ಕೆ ಜರುಗಲಿದ್ದು, ವಿಚಾರ ಸಂಕೀರಣ, ಬೃಹತ್ ಮೆರವಣಿಗೆ, ಸಮಾವೇಶ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಬಿ.ಕೆ ವಸಂತ್ ಬೆಳ್ತಂಗಡಿ, ಎಸ್ ಬೇಬಿ ಸುವರ್ಣ ಸೋಣಂದೂರು ತಿಳಿಸಿದರು. •ಕರ್ನಾಟಕ ದಲಿತ ಚಳುವಳಿಗೆ ಐವತ್ತು ವರ್ಷ ತುಂಬಿದೆ. 70ರ ದಶಕದ ಆರಂಭದಲ್ಲಿ ಪ್ರೊ.ಬಿ.ಕೃಷ್ಣಪ್ಪ ಅವರ ನಾಯಕತ್ವ ಮತ್ತು ನೇತೃತ್ವದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಎಂಬ ಹೆಸರಿನಲ್ಲಿ ರಾಜ್ಯದಲ್ಲಿ ಜನ್ಮ ತಾಳಿದ ದಲಿತ ಚಳುವಳಿಗೆ ಇದೀಗ ಭರ್ತಿ […]Read More
ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಜನ್ಮ ದಿನಾಚರಣೆ ಭಾರತೀಯ ಜನತಾ ಪಕ್ಷದ ಕಚೇರಿಯಲ್ಲಿ ನಡೆಯಿತು. ಹಿರಿಯರಾದ ವಿಧಾನ ಪರಿಷತ್ ಶಾಸಕರಾದ ಪ್ರತಾಪ್ ಸಿಂಹ ನಾಯಕ್ ರವರು ದೀನ್ ದಯಾಳ್ ಜಿಯವರ ಜೀವನ ಚರಿತ್ರೆಯನ್ನು ತಿಳಿಸಿದರು ಅವರ ಆದರ್ಶ ಗಳನ್ನು ಸಂಘಟನೆಗೆ ಹಾಕಿದ ಬುನಾದಿಯನ್ನು ಹೇಳಿದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸೀತಾರಾಮ್ ಬೆಳಾಲು, ಮಂಡಲ ಕಾರ್ಯದರ್ಶಿ ಗಿರೀಶ್ ಡೊಂಗ್ರೆ, ನಗರ ಮಹಾಶಕ್ತಿ ಕೇಂದ್ರ ಅಧ್ಯಕ್ಷರಾದ ರಾಜೇಶ್ ಪ್ರಭು, ನಗರ ಪಂಚಾಯತ್ ಸದಸ್ಯರಾದ ಶರತ್ ಕುಮಾರ್, […]Read More
ಉಜಿರೆ: ಸುವರ್ಣ ಸಂಭ್ರಮಾಚರಣೆಯಲ್ಲಿ ಶ್ರೀ ಧ.ಮಂ ಕಾಲೇಜು(ಸ್ವಾಯತ್ತ) ಉಜಿರೆಯ ಎನ್ ಎಸ್ ಎಸ್
ಸಾರ್ಥಕ ಸುವರ್ಣ ಸಂಭ್ರಮವನ್ನು ಆಚರಿಸಿರುವ ಉಜಿರೆ ಶ್ರೀ ಧ.ಮಂ. ಕಾಲೇಜಿನ ಹೆಮ್ಮೆಯ ವಿಭಾಗಗಳಲ್ಲೊಂದಾದ ಎನ್.ಎಸ್.ಎಸ್. ಘಟಕವು ಇದೇ ಬರುವ ಅಕ್ಟೋಬರ್ 5 ಶನಿವಾರದಂದು ಎನ್.ಎಸ್.ಎಸ್. ಘಟಕದ ಸುವರ್ಣ ಮಹೋತ್ಸವದ ಅಂಗವಾಗಿ ಹಿರಿಯ ಸ್ವಯಂಸೇವಕರ ಒಗ್ಗೂಡುವಿಕೆಯಲ್ಲಿ ‘ ಸುವರ್ಣ ಸಮ್ಮಿಲನ -ಇದು ಸುವರ್ಣ ಹೆಜ್ಜೆಗಳ ಅವಲೋಕನ ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಪ್ರಾಂಶುಪಾಲ ಡಾ.ಬಿ.ಕುಮಾರ ಹೆಗ್ಡೆ ಬೋರ್ಡ್ ರೂಮ್, ಶ್ರೀ ಧ. ಮಂ ಕಾಲೇಜು ಉಜಿರೆಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ನಂತರ ಮಾತನಾಡಿದ ಅವರು ಸುಮಾರು 750 […]Read More
ರಾಜಶ್ರೀ ಡಾ.ಡಿ ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದಗಳೊಂದಿಗೆ, ಶ್ರೀ ಡಿ ಹರ್ಷೇಂದ್ರ ಕುಮಾರ್ ಇವರ ಮಾರ್ಗದರ್ಶನದಲ್ಲಿ , ನಂದಗೋಕುಲ ಫ್ರೆಂಡ್ಸ್, ಜೋಡುಸ್ಥಾನ- ಧರ್ಮಸ್ಥಳ ಇವರ ವತಿಯಿಂದ, ನವರಾತ್ರಿ ಪ್ರಯುಕ್ತ 10ನೇ ವರ್ಷದ ಹುಲಿವೇಷ ಕುಣಿತ, ಅಮೃತವರ್ಷಿಣಿ ಧರ್ಮಸ್ಥಳದಲ್ಲಿ ಅಕ್ಟೋಬರ್ 9 ರಂದು ಸಂಜೆ 7 ಗಂಟೆಗೆ ನಡೆಯಲಿದೆ. ಕಾರ್ಯಕ್ರಮದ ನೇರಪ್ರಸಾರ ನಮನ ಚಾನೆಲ್ ನಲ್ಲಿ ಮೂಡಿಬರಲಿದೆRead More
ಚಂದ್ಕೂರು: ಅ.11-12 ರಂದು ಚಂದ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ: ಊದು
ಚಂದ್ಕೂರು: ಚಂದ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ನಡ ಲಾಯಿಲ ವತಿಯಿಂದ,ನವರಾತ್ರಿ ಮಹೋತ್ಸವ ದ ಪ್ರಯುಕ್ತ, ಅಕ್ಟೋಬರ್ 11 ಶುಕ್ರವಾರ ಚಂದ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ದ ಪ್ರಾಂಗಾಣದಲ್ಲಿ ಊದು ಪೂಜೆ ಹಾಗೂ ಶನಿವಾರ 12 ರಂದು ಹುಲಿ ಕುಣಿತ ಪ್ರದರ್ಶನವು ನಡೆಯಲಿದೆ. ಈ ಕಾರ್ಯಕ್ರಮ ದ ನೇರಪ್ರಸಾರ ನಮನ ಚಾನೆಲ್ ನಲ್ಲಿ ಮೂಡಿಬರಲಿದೆ.Read More
ಮೊಗ್ರು : ಸೆ 22 ಮೊಗ್ರು ಗ್ರಾಮದ ಜೈ ಶ್ರೀ ರಾಮ್ ಫ್ರೆಂಡ್ಸ್ ಕ್ಲಬ್ ರಿ. ಅಲೆಕ್ಕಿ ಮುಗೇರಡ್ಕ ಇದರ ಬೆಳ್ಳಿ ಹಬ್ಬದ ಸಂಭ್ರಮದಲ್ಲಿದೆ. ನೂತನವಾಗಿ ಜೈ ಶ್ರೀ ರಾಮ್ ಮಹಿಳಾ ಸಂಘ ರಚನೆ,ಪದಾಧಿಕಾರಿಗಳ ನೇಮಕ ಮಾಡಲಾಯಿತು.ಅಧ್ಯಕ್ಷರಾಗಿ ತೀರ್ಥ ಮುಂಡಾಜೆ,ಉಪಾಧ್ಯಕ್ಷರಾಗಿ ಶಶಿಪ್ರಭಾ ಕೊಂಬೇಡಿ, ಮಮತಾ ಕೆಲೆಂಜಿಮಾರು ಕಾರ್ಯದರ್ಶಿಯಾಗಿ ಭವ್ಯಾ ಗಣೇಶ್ ಕೇದಗೆದಕೋಡಿ,ಜೊತೆ ಕಾರ್ಯದರ್ಶಿಗಳಾಗಿ ಮಂಜುಶ್ರೀ ಊoತನಾಜೆ,ಸುಮ ಎರ್ಮಳ,ಕೋಶಾಧಿಕಾರಿಯಾಗಿ ಸವಿತಾ ಪದ್ಮುಂಜ,ಭವ್ಯ ಪರಕ್ಕಜೆಹಾಗೂ ಸಮಿತಿ ಸದಸ್ಯರ ನೇಮಕ ಮಾಡಲಾಯಿತು.ಮತ್ತು ಮುಂದಿನ ಶಾರದಾ ಪೂಜಾ ಮತ್ತು ಆಯುಧ ಪೂಜೆ […]Read More
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿ ಯಲ್ಲಿ ಹಿಂದಿ ದಿವಸ
ಬೆಳ್ತಂಗಡಿ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಿಂದಿ ದಿವಸ ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ, ಧರ್ಮಸ್ಥಳದ ಹಿಂದಿ ಶಿಕ್ಷಕಿ ಶ್ರೀಮತಿ ಮಮತಾ ಎನ್ ಹೊಳ್ಳ ಆಗಮಿಸಿ, ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಹಿಂದಿ ದಿವಸದ ಮಹತ್ವ, ಹಿಂದಿ ಭಾಷೆಯನ್ನು ಉಳಿಸಿ ಬೆಳೆಸುವುದು ಅದಕ್ಕೆ ನಮ್ಮೆಲ್ಲರ ಸಹಕಾರ ಮತ್ತು ಶ್ರಮ ಅಗತ್ಯವಿದೆ ಎಂದು ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು. ಹಿಂದಿ ಭಾಷಣ, ಹಿಂದಿ ಗೀತ ಗಾಯನ, ಹಿಂದಿ […]Read More
ಬಳಂಜ: ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಬಳಂಜ ಹಾಗೂ ಊರವರ ಸಹಕಾರದೊಂದಿಗೆ ಅ.6 ರಂದು ನಡೆಯುವ ಎರಡನೇ ವರ್ಷದ ಶಾರದೋತ್ಸವದ ಆಮಂತ್ರಣ ಪತ್ರಿಕೆಯನ್ನು ಪ್ರಗತಿಪರ ಕೃಷಿಕ,ನ್ಯಾಯವಾದಿ ಸತೀಶ್ ರೈ ಬಾರ್ದಡ್ಕ ಅವರು ಬಳಂಜ ಸಂಘದಲ್ಲಿ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು ಕಾರ್ಯಕ್ರಮದ ಯಶಸ್ಸಿಗೆ ಊರವರ ಕೂಡುವಿಕೆ ಮತ್ತು ಸಹಕಾರ ಮುಖ್ಯ.ಕಾರ್ಯಕ್ರಮ ಯಾವುದೇ ವಿಘ್ನವಿಲ್ಲದೆ ಅತ್ಯಂತ ಯಶಸ್ಸಿಯಾಗಿ ನಡೆಯಲಿ ಎಂದರು. ಕಾರ್ಯಕ್ರಮದಲ್ಲಿ ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಗೌರವಾಧ್ಯಕ್ಷ ಹೆಚ್.ಧರ್ಣಪ್ಪ ಪೂಜಾರಿ, ಅಧ್ಯಕ್ಷ […]Read More