• December 21, 2024

ಶ್ರೀ ಧ. ಮಂ. ಆಂ. ಮಾ ಶಾಲೆ, ಧರ್ಮಸ್ಥಳದಲ್ಲಿ ಆರರಿಂದ ಹತ್ತನೇ ತರಗತಿ ವಿಧ್ಯಾರ್ಥಿಗಳ ಪೋಷಕರ ಸಭೆ

 ಶ್ರೀ ಧ. ಮಂ. ಆಂ. ಮಾ ಶಾಲೆ, ಧರ್ಮಸ್ಥಳದಲ್ಲಿ ಆರರಿಂದ ಹತ್ತನೇ ತರಗತಿ ವಿಧ್ಯಾರ್ಥಿಗಳ ಪೋಷಕರ ಸಭೆ

 


ಧರ್ಮಸ್ಥಳ: ಶ್ರೀ. ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಧರ್ಮಸ್ಥಳದಲ್ಲಿ ಆರರಿಂದ ಹತ್ತನೇ ತರಗತಿಯ ವಿದ್ಯಾರ್ಥಿಗಳ ಪೋಷಕರ ಸಭೆ ಇಂದು ನಡೆಯಿತು.

ಈ ಸಭೆಗೆ ಮುಖ್ಯ ಅತಿಥಿಗಳಾಗಿ ಬೋಧಿ ಕೌನ್ಸಿಲಿಂಗ್ ಸೆಂಟರ್ ಉಜಿರೆ ಇದರ ನಿರ್ದೇಶಕರಾಗಿರುವ, ಕೌನ್ಸಿಲರ್, ಯು ಟ್ಯೂಬರ್ ಮೋಟಿವೇಶನಲ್ ಸ್ಪೀಕರ್ ಸೈಕಾಲಜಿಸ್ಟ್ ,ಆರ್ಟಿಸ್ಟ್ ಆಗಿರುವ ಶ್ರೀಯುತ ಸ್ಮಿತೇಶ್ ಬಾರ್ಯ ಇವರು ಆಗಮಿಸಿದ್ದರು.ಹೆತ್ತವರು ಮಕ್ಕಳಿಗಾಗಿ ಬಹಳಷ್ಟು ತ್ಯಾಗಗಳನ್ನು ಮಾಡುತ್ತಾರೆ.ವಿದ್ಯಾರ್ಥಿಗಳಿಗೆ ಕಲಿಕೆಗೆ ಪೂರಕವಾದ ವಾತಾವರವನ್ನು ಸೃಷ್ಟಿ ಮಾಡಬೇಕು.ಅವರಿಗಾಗಿ ಆಸ್ತಿ ಮಾಡಬೇಡಿ ಅವರನ್ನೇ ಆಸ್ತಿಯನ್ನಾಗಿ ಮಾಡಿ.ಮಕ್ಕಳು ನಾವೇನು ಹೇಳುತ್ತೇವೆ ಅದನ್ನು ಮಾಡಲ್ಲ ನಾವೇನು ಮಾಡುತ್ತೇವೆಯೋ ಅದನ್ನೇ ಮಾಡುತ್ತಾರೆ.ಮಕ್ಕಳು ನಮ್ಮನ್ನು ಗಮನಿಸುತ್ತಾರೆ.ಹಾಗಾಗಿ ಎಚ್ಚರಿಕೆವಹಿಸಬೇಕು.ಮಕ್ಕಳನ್ನು ಯಾರಿಗೂ ಹೋಲಿಸುವುದು ಬೇಡ.ಹೀಗೆ ಮಾಡಿದಾಗ ನಮ್ಮ ಮಕ್ಕಳ ಆತ್ಮವಿಶ್ವಾಸ ಕಡಿಮೆ ಆಗುತ್ತದೆ,ಹೆತ್ತವರೇ ಅವರಿಗೆ ವಿಲನ್ ಆಗುತ್ತಾರೆ.ನಮ್ಮ ಮನೆಯ ಮಗು ಅದ್ಭುತ.ಪ್ರತಿ ಮಗುವಿಗೂ ಅದರದ್ದೇ ಆದ ಸಾಮರ್ಥ್ಯ ಇದೆ ಎಂದು ಹತ್ತು ಹಲವಾರು ಉದಾಹರಣೆಗಳ ಮುಖಾಂತರ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಅನೇಕ ವಿಚಾರಗಳನ್ನು ತಿಳಿಸಿದರು.

ತದನಂತರ ಶಾಲೆಯ ಆಗುಹೋಗುಗಳನ್ನು ಹೆತ್ತವರ ಕರ್ತವ್ಯವನ್ನು ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪರಿಮಳ.ಎಂ.ವಿ ವಿವರಿಸಿದರು.

ತದನಂತರ ಶಿಕ್ಷಕರು ಹೆತ್ತವರಿಗೆ ತಮ್ಮ ಪರಿಚಯವನ್ನು ತಿಳಿಸಿದರು. ಈ ಕಾರ್ಯಕ್ರಮವನ್ನು ಶಾಲಾ ಸಹಶಿಕ್ಷಕಿ ಶ್ರೀಮತಿ ಅನ್ನಪೂರ್ಣ ನಿರೂಪಿಸಿ,ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ.ಪರಿಮಳ ಎಂ.ವಿ.ಸ್ವಾಗತಿಸಿ, ಶ್ರೀಮತಿ ಸನ್ಮತಿ ಅತಿಥಿಗಳ ಪರಿಚಯ ನೀಡಿ, ಶ್ರೀಮತಿ. ಅಂಜು ಧನ್ಯವಾದ ಇತ್ತರು.

Related post

Leave a Reply

Your email address will not be published. Required fields are marked *

error: Content is protected !!