ಧರ್ಮಸ್ಥಳ: ಚಿರತೆ ದಾಳಿಗೆ ನರಳಿ ಪ್ರಾಣ ಬಿಟ್ಟ ಕರು: ಹೊಟ್ಟೆಯನ್ನೇ ಸೀಳಿದ ಚಿರತೆ
ಧರ್ಮಸ್ಥಳ: ಹಟ್ಟಿಯೊಂದಕ್ಕೆ ಚಿರತೆ ದಾಳಿ ನಡೆಸಿ ಕರುವಿನ ಹೊಟ್ಟೆಯ ಭಾಗವನ್ನೇ ಸೀಳಿ ಕೊಂದು ಹಾಕಿರುವ ಘಟನೆ ಏ.18 ರಂದು ಧರ್ಮಸ್ಥಳದ ನೇರ್ತಾನೆಯಲ್ಲಿ ನಡೆದಿದೆ.
ನೇರ್ತಾನೆ ಪಂದಮಕ್ಕಲ್ ಎಂಬಲ್ಲಿ ಮುಂಜಾನೆ ಹಟ್ಟಿಯೊಂದಕ್ಕೆ ಚಿರತೆ ದಾಳಿ ನಡೆಸಿದೆ. ಕಟ್ಟಿಹಾಕಿದ್ದ ಕರುವಿನ ಹೊಟ್ಟೆಯ ಭಾಗವನ್ನೇ ಸೀಳಿ ಎಳೆದು ಹಾಕಿದೆ.