ರೆಖ್ಯ: ಅಣ್ಣ- ತಮ್ಮ ನಡುವೆ ಜಗಳ: ಕತ್ತಿಯಿಂದ ಅಣ್ಣನಿಗೆ ಹಲ್ಲೆ ಮಾಡಿದ ತಮ್ಮ
ರೆಖ್ಯ: ಯಾವುದೋ ವೈಯಕ್ತಿಕ ಕಾರಣದಿಂದ ಅಣ್ಣ ತಮ್ಮಂದಿರ ನಡುವೆ ಜಗಳವುಂಟಾಗಿ ತಮ್ಮ ಅಣ್ಣನಿಗೆ ಕತ್ತಿಯಿಂದ ಹಲ್ಲೆ ಮಾಡಿರುವ ಘಟನೆ ಎ.5 ರಂದು ರಾತ್ರಿ ವೇಳೆ ರೆಖ್ಯ ಗ್ರಾಮದ ಪರ್ಕಳ ಎಂಬಲ್ಲಿ ನಡೆದಿದೆ.
ಒಂದೇ ಮನೆಯಲ್ಲಿ ವಾಸವಿದ್ದ ಇವರಿಬ್ಬರ ನಡುವೆ ನೆನ್ನೆ ರಾತ್ರಿ ಜಗಳ ನಡೆದಿದೆ. ಅಣ್ಣ ರಾಜಶೇಖರ್ ಹಲ್ಲೆಗೊಳಗಾದ ವ್ಯಕ್ತಿ. ತಮ್ಮ ಪ್ರಕಾಶ್ ಹಲ್ಲೆ ಮಾಡಿದ ವ್ಯಕ್ತಿ ಎಂದು ತಿಳಿಸದುಬಂದಿದೆ.
ಹಲ್ಲೆಗೊಳಗಾದ ಅಣ್ಣ ರಾಜಶೇಖರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಗಳಕ್ಕೆ ನಿಖರ ಕಾರಣ ತಿಳಿದುಬರಬೇಕಾಗಿದೆ.