• December 22, 2024

ಸನಾತನ ಆಶ್ರಮದಲ್ಲಿ ಸ್ವಾಮಿ ಗೋವಿಂದದೇವ ಗಿರಿಜಿ ಮತ್ತು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಭಾವಪೂರ್ಣ ಭೇಟಿ

 ಸನಾತನ ಆಶ್ರಮದಲ್ಲಿ ಸ್ವಾಮಿ ಗೋವಿಂದದೇವ ಗಿರಿಜಿ ಮತ್ತು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಭಾವಪೂರ್ಣ ಭೇಟಿ

 

ಭಾರತವನ್ನು ವಿಶ್ವದಲ್ಲಿಯೇ ಅತ್ಯುನ್ನತ ಸ್ಥಾನಕ್ಕೆ ತರುವಲ್ಲಿ ‘ಸನಾತನ ಆಶ್ರಮ’ದ ಕೊಡುಗೆ ಬಹಳ ದೊಡ್ಡದಾಗಿರುತ್ತದೆ ! – ಪ.ಪೂ. ಸ್ವಾಮಿ ಗೋವಿಂದದೇವ ಗಿರಿಜಿ

  ಸನಾತನ ಸಂಸ್ಥೆಯ ಆಶ್ರಮಕ್ಕೆ ಬಂದು, ಈ ಪುಣ್ಯಭೂಮಿಯಲ್ಲಿ ಉಪಸ್ಥಿತರಿದ್ದು, ಅದನ್ನು ಸಂಪೂರ್ಣವಾಗಿ ವೀಕ್ಷಿಸಿದಾಗ ನನಗೆ ಬಹಳ ಸಂತೋಷವಾಯಿತು.  'ಸನಾತನ ಆಶ್ರಮ' ಗೋವಾ ಮಾತ್ರವಲ್ಲ, ಸುತ್ತಮುತ್ತಲಿನ ಪ್ರದೇಶಗಳನ್ನು 'ತಪೋಭೂಮಿ' ಮಾಡುವಲ್ಲಿ ಮಹತ್ತರವಾದ ಕೊಡುಗೆಯನ್ನು ನೀಡಿದೆ.  ಈ ಆಶ್ರಮದಲ್ಲಿರುವ ಶಕ್ತಿಯಿಂದಾಗಿ ಜನರ ಮನಃಸ್ಥಿತಿಯಲ್ಲಿ ಕಳೆದ 25 ವರ್ಷಗಳಲ್ಲಿ  ಆಗಿರುವಂತಹ ಬಹಳಷ್ಟು ಬದಲಾವಣೆಗಳನ್ನು ನಾವು ಅನುಭವಿಸುತ್ತಿದ್ದೇವೆ.  ಈಗ ಈ ಶಕ್ತಿಯು  ಇನ್ನೂ ವೇಗವಾಗಿ ಕೆಲಸ ಮಾಡುತ್ತಿದೆ ಎನ್ನುವುದು ಗಮನಕ್ಕೆ ಬರುತ್ತಿದೆ.  ಆದ್ದರಿಂದ ನನಗೆ ವಿಶ್ವಾಸವಿದೆ ಮುಂಬರುವ ವರ್ಷಗಳಲ್ಲಿ ನಮ್ಮ ಭಾರತ ದೇಶವು ಇಡೀ ವಿಶ್ವದಲ್ಲಿಯೇ ಅತ್ಯುನ್ನತ ಸ್ಥಾನವನ್ನು ತಲುಪುತ್ತದೆ ಮತ್ತು ಈ ಕಾರ್ಯದಲ್ಲಿ ಈ 'ಸನಾತನ ಆಶ್ರಮ'  ಕೊಡುಗೆ ಬಹುದೊಡ್ಡದಾಗಿರಲಿದೆ ಎಂದು 'ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ನ್ಯಾಸ'ದ ಕೋಶಾಧಿಕಾರಿ ಪ.ಪೂ.ಗೋವಿಂದದೇವ ಗಿರಿಜಿ ಇವರು ಗೋವಾದ ಸನಾತನ ಸಂಸ್ಥೆಯ ಆಶ್ರಮಕ್ಕೆ ಭೇಟಿ ನೀಡಿದ ನಂತರ ಗೌರವೋದ್ಗಾರ ತೆಗೆದರು. 

  ಈ ಸಂದರ್ಭದಲ್ಲಿ   ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ.  ಜಯಂತ ಬಾಳಾಜಿ ಆಠವಲೆಯವರನ್ನು  ಪ.ಪೂ.  ಸ್ವಾಮಿ ಗೋವಿಂದದೇವ ಗಿರಿಜಿ ಇವರು ಸನಾತನ ಸಂಸ್ಥೆಯ ಆಶ್ರಮದಲ್ಲಿ ಭಾವಪೂರ್ಣ ಭೇಟಿ ಮಾಡಿದರು.

ಸನಾತನ ಆಶ್ರಮಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಪ.ಪೂ. ಸ್ವಾಮೀಜಿಯವರು ನಾವು ಭಾರತವನ್ನು ಮೊದಲಿನಂತೆ ಶ್ರೇಷ್ಠ ರಾಷ್ಟ್ರವನ್ನಾಗಿ ಮಾಡಲು ಬಯಸುತ್ತೇವೆ; ಆದರೆ ಭಾರತವು ವಿಶ್ವಗುರುವಿನ ಸ್ಥಾನವನ್ನು ಅಷ್ಟು ಸುಲಭವಾಗಿ ತಲುಪಲು ಆಗುವುದಿಲ್ಲ. ಇದಕ್ಕಾಗಿ ಎಲ್ಲಿಂದಲಾದರೂ ಶಕ್ತಿಯ ಅಗತ್ಯವಿರುತ್ತದೆ. ಮುಂಬಯಿಯ ಭಾಭಾ ಪರಮಾಣು ವಿದ್ಯುತ್ ಕೇಂದ್ರವು ಶಕ್ತಿಯನ್ನು ಉತ್ಪಾದಿಸುತ್ತದೆ ಮತ್ತು ನಾವು ಆ ಶಕ್ತಿಯನ್ನು ಭಾರತದಾದ್ಯಂತ ಬಳಸುತ್ತೇವೆ. ಹಾಗೆಯೇ ಈ ‘ಸನಾತನ ಆಶ್ರಮ’ ವು ಆಧ್ಯಾತ್ಮಿಕ ಶಕ್ತಿಯನ್ನು ಉತ್ಪಾದಿಸುತ್ತಿದೆ. ಈ ಶಕ್ತಿಯು ಆಕಾಶದಲ್ಲಿ ಹರಡಿ, ಜನರ ಮನಸ್ಸಿನ ಮೇಲೆ ಪ್ರಭಾವ ಬೀರಿ ಹಿಂದೂ ರಾಷ್ಟ್ರದ ನಿರ್ಮಾಣಕ್ಕಾಗಿ ಕಾರ್ಯ ಮಾಡುತ್ತಿದೆ.

  ವಿವಿಧ ಮಹಾತ್ಮರು ವಿವಿಧ ಸ್ಥಳಗಳಲ್ಲಿ ತಪಸ್ಸು ಮಾಡಿದ್ದರಿಂದ, ಕಾಲಾಂತರದಲ್ಲಿ ಅದರ ಪ್ರಭಾವವು ಧರ್ಮವನ್ನು ಜಾಗೃತಗೊಳಿಸುತ್ತದೆ ಮತ್ತು ಭಾರತವನ್ನು ವಿಶ್ವ ಕಲ್ಯಾಣಕ್ಕೆ ಸಮರ್ಥಗೊಳಿಸುತ್ತದೆ ಹಾಗೆಯೇ ಸನಾತನ ಆಶ್ರಮವು ಈ ರಾಷ್ಟ್ರಕ್ಕೆ ಶಕ್ತಿಯನ್ನು  ನೀಡುವ ಊರ್ಜ್ವೆಯ ಕೇಂದ್ರ ಬಿಂದು ವಾಗಿದೆ.    ಈ ಕೇಂದ್ರಕ್ಕೆ ನಾನು ಅತ್ಯಂತ ಗೌರವಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ.  ಈ ಶಕ್ತಿಯ ಮೂಲ ಪ್ರವಾಹ ಪೂಜನೀಯ  ಡಾ.  ಜಯಂತ ಆಠವಲೆಯವರು ಆಗಿರುವುದು ಅವರ ದರ್ಶನದಿಂದ  ಕಂಡುಬಂದಿತು.  ಅವರ ವ್ಯಕ್ತಿತ್ವ ನನಗೆ ಬಹಳ ಸಂತೋಷ ಮತ್ತು ಪ್ರಭಾವಿತಗೊಳಿಸಿದೆ.  ನಾನು ಅವರಿಗೂ ಅತ್ಯಂತ ಶ್ರದ್ಧೆಯಿಂದ  ನಮಿಸುತ್ತೇನೆ. 

ನಾನು ಎಲ್ಲರಿಗೂ ಗೀತೆಯನ್ನು ಕಲಿಸುತ್ತೇನೆ. ಆ ಗೀತೆಯನ್ನು ಸನಾತನ ಆಶ್ರಮದಲ್ಲಿ ಆಚರಿಸ್ಲಪಡುತ್ತಿರುವುದು ಕಂಡುಬಂದಿತು. ಛತ್ರಪತಿ ಶಿವಾಜಿ ಮಹಾರಾಜರ ಯೋಜನಾ ಕೌಶಲ್ಯಗಳಂತಹ “ಮೈಕ್ರೋ ಮ್ಯಾನೇಜ್ಮೆಂಟ್ ” ‘ಸೂಕ್ಷ್ಮ ನಿರ್ವಹಣೆ’, ಸನಾತನ ಆಶ್ರಮದಲ್ಲಿ ನೋಡಲು ಸಿಗುತ್ತದೆ. ”ಮೈಕ್ರೋ ಮ್ಯಾನೇಜ್ಮೆಂಟ್’ ಕಲಿಯಲು ಯೋಗ್ಯವಾಗಿದೆ ಎಂದೂ ಸ್ವಾಮೀಜಿಯವರು ಹೇಳಿದರು.

Related post

Leave a Reply

Your email address will not be published. Required fields are marked *

error: Content is protected !!