• October 18, 2024

ರತ್ನಗಿರಿ ಶ್ರೀ ಸನ್ಯಾಸಿ ಗುಳಿಗ ಕ್ಷೇತ್ರದ ಪುನ‌ರ್ ಪ್ರತಿಷ್ಠಾ ಕಾರ್ಯಕ್ರಮದಲ್ಲಿ ತುಳುನಾಡ ದೈವರಾಧಕರ ಮಹಾ ಸಮ್ಮೇಳನ “ಪರ್ವ”-2024 ವಿಶೇಷ ಕಾರ್ಯಕ್ರಮ: ಫೆ. 27 ರಿಂದ ಮಾ 2 ವರೆಗೆ ಸನ್ಯಾಸಿ ಗುಳಿಗ ಪುನ‌ರ್ ಪ್ರತಿಷ್ಠಾ ಕಾರ್ಯಕ್ರಮ

 ರತ್ನಗಿರಿ ಶ್ರೀ ಸನ್ಯಾಸಿ ಗುಳಿಗ ಕ್ಷೇತ್ರದ ಪುನ‌ರ್ ಪ್ರತಿಷ್ಠಾ ಕಾರ್ಯಕ್ರಮದಲ್ಲಿ ತುಳುನಾಡ ದೈವರಾಧಕರ ಮಹಾ ಸಮ್ಮೇಳನ “ಪರ್ವ”-2024 ವಿಶೇಷ ಕಾರ್ಯಕ್ರಮ:  ಫೆ. 27 ರಿಂದ ಮಾ 2 ವರೆಗೆ ಸನ್ಯಾಸಿ ಗುಳಿಗ ಪುನ‌ರ್ ಪ್ರತಿಷ್ಠಾ ಕಾರ್ಯಕ್ರಮ

 

ಗುರುವಾಯನಕೆರೆ: ರತ್ನಗಿರಿ ಶ್ರೀ ಸನ್ಯಾಸಿ ಗುಳಿಗ ಕ್ಷೇತ್ರದ ಪುನ‌ರ್ ಪ್ರತಿಷ್ಠಾ ಕಾರ್ಯಕ್ರಮದಲ್ಲಿ ತುಳುನಾಡ ದೈವರಾಧಕರ ಮಹಾ ಸಮ್ಮೇಳನ “ಪರ್ವ”-2024 ವಿಶೇಷ ಕಾರ್ಯಕ್ರಮ ನಡೆಯಲಿದೆಯೆಂದು ಸನ್ಯಾಸಿ ಗಳಿಗ ಕ್ಷೇತ್ರದ ಪುನ‌ರ್ ಪ್ರತಿಷ್ಠಾ ಮಹೋತ್ಸವದ ಕಾರ್ಯಕ್ರಮದ ಅಧ್ಯಕ್ಷ ಸಂಪತ್ ಬಿ ಸುವರ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದೇವರ ಆಶೀರ್ವಾದೊಂದಿಗೆ ದೈವದ ಅನುಗ್ರಹವಿರುವಂತಹ ಅತ್ಯಂತ ಶ್ರೇಷ್ಠವಾದ ಅಪರೂಪದ ಪರಂಪರೆ ನಮ್ಮ ಕರಾವಳಿಯ ತುಳುವರದು. ತುಳುನಾಡಿನ ದೈವರಾಧನೆಯ ಕುರಿತು ಅಧ್ಯಯನ ಮಾಡಿ ಮುಂದಿನ ತಲೆಮಾರಿಗೆ ತಿಳಿಸುವಂತ ವಿಶೇಷವಾದ ಪ್ರಯತ್ನ ಮಾಡುತ್ತಿದ್ದೇವೆ.
ತುಳುನಾಡಿನಲ್ಲಿ ಸುಮಾರು 1001 ದೈವಗಳಿವೆ. ಹಲವಾರು ಧಾರ್ಮಿಕ ಪಂಡಿತರು, ಪ್ರಸಿದ್ದ ವಿದ್ವಾಂಸರು, ಸಾಹಿತಿಗಳು ಅಧ್ಯಯನ ಮಾಡಿದ್ದಾರೆ.

ದೈವಗಳ ಪರಂಪಾರೀಕ ಹಿನ್ನಲೆ, ಕಾರಣಿಕ, ಮಹತ್ವ ವಿಚಾರ ಮುಂದಿನ ಜನಾಂಗಕ್ಕೆ ಗೊತ್ತಾಗಬೇಕಾದರೆ ಅದನ್ನು ಯುವ ಮನಸ್ಸುಗಳಿಗೆ ತಿಳಿಸುವ ಪ್ರಯತ್ನವಾಗಬೇಕು.

ದೈವ ನರ್ತಕರ ಸಮಾವೇಶ, ದೈವದ ಪರಿಚಾರಕರ ಸಮಾವೇಶ, ದೈವಸ್ಥಾನದ ಆಡಳಿತ ಮುಖ್ಯಸ್ಥರ ಸಮಾವೇಶ ನಡೆಸಿ ಅವರ ವಿಚಾರಧಾರೆಯನ್ನು ಪಡೆದು ಸರಕಾರಕ್ಕೆ ನಿರ್ಣಯ ಒಪ್ಪಿಸುವಂತ ವಿನೂತನ ಪ್ರಯತ್ನ ಮಾಡಲಿದ್ದೇವೆ.

ತುಳುನಾಡಿನ ದೈವಾರಾಧನೆಯ ಸಮಗ್ರ ಅಧ್ಯಯನ ಮತ್ತು ದೈವಾರಾಧನೆಯಲ್ಲಿ ತೊಡಗಿಸಿಕೊಂಡವರಿಗೆ ಗೌರವಾರ್ಪಣೆ ಮಾಡುವ ನಿಟ್ಟಿನಲ್ಲಿ ವಿಚಾರಗೋಷ್ಠಿಗಳು, ಸಂವಾದ ಕಾರ್ಯಕ್ರಮ, ದೈವ ನರ್ತಕರಿಗೆ, ದೈವ ಪರಿಚಾರಕರಿಗೆ, ದೈವಸ್ಥಾನ ಮುಖ್ಯಸ್ಥರಿಗೆ

ಗೌರವಾರ್ಪಣೆ ಮಾಡುವ ಆಶಯ ನಮ್ಮದಾಗಿದೆ.
ತುಳುನಾಡಿನ ದೈವರಾಧನೆಯನ್ನು ಜೀವನೋಪಾಯಕ್ಕಾಗಿ ಮಾಡಿದ ಅದೆಷ್ಟೋ ಕುಟುಂಬಗಳಿವೆ. ಅವರ ಬದುಕ ಅಗಿದೆ. ಅವರಿಗೆ ಮಾಸಶಾನ ಸಿಗುವಂತಬೇಕು.ದೈವರಾಧನೆ ಬಗೆಗೆ ಶಾಲೆಯ ಪಠ್ಯ ಪುಸ್ತಕಕ್ಕೆ ಸೇರ್ಪಡಿಸಿದರೆ ತುಳುನಾಡಿನ ಇತಿಹಾಸ, ಪರಂಪರೆ, ಜನಪದ ಹಿನ್ನಲೆ ಮುಂದಿನ ಜನಾಂಗಕ್ಕೆ ತಿಳಿಯುತ್ತದೆ. ಈ ಕಾರ್ಯಕ್ರಮಕ್ಕೆ ‘ಪರ್ವ’ ಎಂಬ ಹೆಸರಿಟ್ಟಿದ್ದೇವೆ. ಸನ್ಯಾಸಿ ಗುಳಿಗ ಪುನ‌ರ್ ಪ್ರತಿಷ್ಠಾ ಕಾರ್ಯಕ್ರಮವು ಫೆ. 27 ರಿಂದ ಮಾ 2 ವರೆಗೆ ನಡೆಯಲಿದೆಯೆಂದು ಸಂಪತ್ ಬಿ ಸುವರ್ಣ ತಿಳಿಸಿದ್ದಾರೆ.

Related post

Leave a Reply

Your email address will not be published. Required fields are marked *

error: Content is protected !!