ಆರಿಕೋಡಿ: ಪವಾಡವನ್ನೇ ಮೆರೆಯುತ್ತಿದೆ ಆರಿಕೋಡಿ ಶ್ರೀ ಚಾಮುಂಡೇಶ್ವರಿ ದೇವಿ ಸನ್ನಿಧಾನ: ಮಕ್ಕಳ ಭಾಗ್ಯವನ್ನೇ ಕಳೆದುಕೊಂಡವರ ಬಾಳಿಗೆ ಬೆಳಕಾದ ಚಾಮುಂಡೇಶ್ವರಿ ತಾಯಿಯ ಕಾರ್ಣಿಕ
ಆರಿಕೋಡಿ: ಕಡಬ ತಾಲೂಕಿನ ಆಲಂತಾಯ ಪರಿಸರದ ಮೋನಪ್ಪಗೌಡ ಮತ್ತು ಪದ್ಮಾವತಿ ಎಂಬುವವರು ಕೆಲವು ವರ್ಷಗಳ ಹಿಂದೆ ಮದುವೆಯಾಗಿದ್ದು, ಅವರ ದಾಂಪತ್ಯ ಜೀವನದಲ್ಲಿ ಮಕ್ಕಳ ಭಾಗ್ಯ ಒದಗಿ ಬರಲಿಲ್ಲ. ಹಲವಾರು ಹರಕೆಗಳನ್ನು ನೀಡಿದರೂ ಸಹ ಪ್ರಯೋಜನ ಸಿಗದೇ ಇದ್ದಾಗ, ಆ ಸಂದರ್ಭದಲ್ಲಿ ಪ್ರಸಿದ್ಧ ಕ್ಷೇತ್ರವಾದ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿಗೆ ಬಂದು ದೇವಿ ಚಾಮುಂಡೇಶ್ವರಿ ಅಮ್ಮನವರ ಅಭಯದ ನುಡಿಯಲ್ಲಿ ವಿಚಾರಣೆ ಮಾಡಿದರು.
ಆ ಸಂದರ್ಭದಲ್ಲಿ ಸಮಸ್ಯೆಯನ್ನು ಪರಿಹಾರ ಮಾಡಿ ನಿಮ್ಮ ದಾಂಪತ್ಯದಲ್ಲಿ ಒಂದು ವರ್ಷದ ಒಳಗಡೆ ಮಕ್ಕಳ ಭಾಗ್ಯ ಒದಗಿ ಬರುತ್ತದೆ ಎಂದು ಶ್ರೀದೇವಿ ಅಭಯ ಕೊಟ್ಟಳು. ಕೊಟ್ಟ ಮಾತಿನ ಪ್ರಕಾರವಾಗಿ ಅವರ ದಾಂಪತ್ಯದ ಜೀವನದಲ್ಲಿ ಗಂಡು ಮಗುವಿನ ಜನನವಾಯಿತು. ಅವರ ಕತ್ತಲೆಯನ್ನು ದೂರ ಮಾಡಿದ ಶ್ರೀದೇವಿ ಚಾಮುಂಡೇಶ್ವರಿ ಅಮ್ಮನವರಿಗೆ ವಿಶೇಷವಾಗಿ ಪೂಜೆಯನ್ನು ಸಲ್ಲಿಸಿದರು.