ಆರಿಕೋಡಿ ಶ್ರೀ ಚಾಮುಂಡೇಶ್ವರಿ ದೇವಿಯ ಅಭಯದ ನುಡಿಯಂತೆ ಸೈನಿಕನಾಗಿ ದೇಶ ಸೇವೆಗೆ ಅರ್ಹರಾದ ಕೊಡಿಪಾಡಿಯ ಭವಿಷ್
ಆರಿಕೋಡಿ: 8 ವರ್ಷಗಳ ಐತಿಹ್ಯವಿರುವ, ರಾಜ್ಯದ ಮೂಲೆ ಮೂಲೆಯಿಂದ ಭಕ್ತರು ಆಗಮಿಸಿ ತನ್ನ ಕಷ್ಟಗಳನ್ನು ಅಭಯದ ನುಡಿಯ ಮೂಲಕ ಪರಿಹಾರವನ್ನು ಕಂಡುಕೊಂಡು ಸುಖ ಜೀವನವನ್ನು ನಡೆಸುವ ಅದೆಷ್ಟೋ ಭಕ್ತರ ಮನದಾಳದ ಮಾತನ್ನು ಕೇಳುವ ಭಕ್ತರ ಆಲಯ ಆರಿಕೋಡಿ ಶ್ರೀ ಚಾಮುಂಡೇಶ್ವರಿ ತಾಯಿಯ ಸನ್ನಿಧಾನ.
ಅದೇ ರೀತಿ ಕಷ್ಟ ಎಂದು ಭಕ್ತರ ಪಾಲಿಗೆ ನೆರವಾಗುವ ಈ ದೇವಾಲಯಕ್ಕೆ ಆಗಮಿಸದ ಭಕ್ತರಿಲ್ಲ. ಅದೆಷ್ಟೋ ಭಕ್ತರ ಕಣ್ಣೀರೊರೆಸುವ ಕಾರ್ಯ ನಡೆಯುತ್ತಿದೆ ಈ ಸನ್ನಿಧಾನದಲ್ಲಿ. ಇಲ್ಲೊಬ್ಬರು ದೇಶಸೇವೆಗಾಗಿ ತನ್ನನ್ನು ತೊಡಗಿಸಿಕೊಳ್ಳಲು ಪರೀಕ್ಷೆಗಳನ್ನು ಎದುರಿಸಿದ್ದಾರೆ ಆದರೆ ಸರಿಯಾದ ಫಲಿತಾಂಶ ಸಿಗದೇ ಫಲಕ್ಕೆ ಪ್ರತಿಫಲ ದೊರಕದೇ ಇದ್ದಾಗ ತಾಯಿ ಆರಿಕೋಡಿ ಶ್ರೀ ಚಾಮುಂಡೇಶ್ವರಿ ದೇವಿಯ ಮೊರೆ ಹೋಗುತ್ತಾರೆ ಪುತ್ತೂರು ತಾಲೂಕಿನ ಕೊಡಿಪಾಡಿ ಗ್ರಾಮದ ಬಾಲಕೃಷ್ಣ ವೀಣಾ ದಂಪತಿಗಳ ಪುತ್ರ ಭವಿಷ್ ಇವರು.
ತನ್ನ ಕಷ್ಟವನ್ನು ಅಭಯದ ನುಡಿಯ ಮೂಲಕ ಕೇಳಿಕೊಂಡಾಗ ದೇಶ ಸೇವೆಗೆ ನೀವು ಅರ್ಹರಾಗುತ್ತೀರಿ ಎಂದು ಭರವಸೆಯನ್ನು ನೀಡಿದಾಗ, ಧೈರ್ಯದಿಂದ ಮುಂದಿನ ಪರೀಕ್ಷೆಯನ್ನು ಎದುರಿಸಿ, ದೇಶ ಸೇವೆಗೆ ಅರ್ಹರಾಗಿ ಸೈನಿಕನಾಗಿ ಇದೇ ಬರುವ 29 ರಂದು ಸೇರ್ಪಡೆಯಾಗುತ್ತಿದ್ದಾರೆ. ಸಕಲ ಕಷ್ಟಗಳನ್ನು ಪರಿಹರಿಸುವ ತಾಯಿಗೆ ಸೇವೆಯನ್ನು ಸಲ್ಲಿಸಿದ್ದಾರೆ ಈ ದಂಪತಿಗಳು