ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಧರ್ಮಸ್ಥಳದಲ್ಲಿ ಜೂನಿಯರ್ ರೆಡ್ ಕ್ರಾಸ್ ವತಿಯಿಂದ ರಕ್ತದಾನಿಗಳ ದಿನಾಚರಣೆ
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಧರ್ಮಸ್ಥಳದಲ್ಲಿ ಜೂನಿಯರ್ ರೆಡ್ ಕ್ರಾಸ್ ವತಿಯಿಂದ ರಕ್ತದಾನಿಗಳ ದಿನಾಚರಣೆಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಅತಿಥಿಯಾಗಿ ಆಗಮಿಸಿದ್ದ ಡಾ.ಶಿಲ್ಪ ಹೆಗಡೆ ಹೆತ್ತವರಿಗೆ ರಕ್ತದಾನದ ಮಹತ್ವವನ್ನು ವಿದ್ಯಾರ್ಥಿಗಳ ಪೋಷಕರಿಗೆ ವಿವರಿಸಿದರು.ದಾನಿಗಳ ಪರವಾಗಿ ಸಹ ಶಿಕ್ಷಕರುಗಳಾದ ಶ್ರೀಮತಿ ಪ್ರೀತಿ, ಶ್ರೀಮತಿ ಆಶಾ ಕುಮಾರಿ, ಶ್ರೀಮತಿ ರಮಾ ರಾಜೇಶ್ ರಕ್ತದಾನದಿಂದ ಆಗುವ ಪ್ರಯೋಜನವನ್ನು ಹಾಗೂ ರಕ್ತದಾನ ಮಾಡಲು ಸಿಕ್ಕ ಪ್ರೇರೇಪಣೆಯನ್ನು ವಿವರಿಸಿದರು.
ಈ ಸಂದರ್ಭದಲ್ಲಿ ರಕ್ತದಾನ ಮಾಡಿದ ಹೆತ್ತವರನ್ನು ಗುರುತಿಸಿ ಅವರಿಗೆ ವಿದ್ಯಾರ್ಥಿಗಳೇ ತಯಾರಿಸಿರುವ ಗ್ರೀಟಿಂಗ್ ಕಾರ್ಡ್ ಬ್ಯಾಜ್ ಹಾಗೂ ಶಾಲಾ ಕೈ ತೋಟದಲ್ಲಿ ತಯಾರಾದ ಜೇನು ನೀಡಿ ಗೌರವಿಸಿ ಗುರುತಿಸಲಾಯಿತು.
ಹೆತ್ತವರಿಗೆ ಉಚಿತ ಬಿಪಿ ಹಾಗೂ ಶುಗರ್ ಪರೀಕ್ಷೆಯನ್ನು ನುರಿತ ವಿದ್ಯಾರ್ಥಿಗಳು ನಡೆಸಿಕೊಟ್ಟರು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪರಿಮಳ ಎಂ ವಿ ಅವರ ಮಾರ್ಗದರ್ಶನದಲ್ಲಿ ಮೂಡಿ ಬಂದ ಈ ಕಾರ್ಯಕ್ರಮವನ್ನು ಸಹಶಿಕ್ಷಕಿ ಶ್ರೀಮತಿ ಸೌಮ್ಯ ನಿರ್ವಹಿಸಿ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪರಿಮಳ ಎಂ ವಿ ಸ್ವಾಗತಿಸಿ, ಸಹ ಶಿಕ್ಷಕಿ ಶ್ರೀಮತಿ ಪ್ರಮೀಳಾ ಧನ್ಯವಾದವಿತ್ತರು.