• December 3, 2024

ಬೆಳ್ತಂಗಡಿ ಮುಳಿಯ ಜ್ಯುವೆಲ್ಸ್‌ನಲ್ಲಿ ಚಿನ್ನೋತ್ಸವ ಪ್ರಾರಂಭ: 20 ಸಾವಿರದ ಡೈಮಂಡ್ ಖರೀದಿಗೆ 5 ಕಾರು ಗೆಲ್ಲುವ ಸುವರ್ಣಾವಕಾಶ

 ಬೆಳ್ತಂಗಡಿ ಮುಳಿಯ ಜ್ಯುವೆಲ್ಸ್‌ನಲ್ಲಿ ಚಿನ್ನೋತ್ಸವ ಪ್ರಾರಂಭ: 20 ಸಾವಿರದ ಡೈಮಂಡ್ ಖರೀದಿಗೆ 5 ಕಾರು ಗೆಲ್ಲುವ ಸುವರ್ಣಾವಕಾಶ

 


ಬೆಳ್ತಂಗಡಿ: ಹತ್ತೂರಿನಲ್ಲಿ ಅತ್ಯಂತ ಜನಪ್ರಿಯವಾಗಿರುವ ಚಿನ್ನಾಭರಣಗಳ ಮಳಿಗೆ ಮುಳಿಯ ಜ್ಯುವೆಲ್ಸ್ ನಲ್ಲಿ ವರ್ಷಕ್ಕೆ 2 ಬಾರಿ ಚಿನ್ನೋತ್ಸವ ಆಚರಿಸುತ್ತೇವೆ. ಬೆಳ್ತಂಗಡಿ ಚಿನ್ನದಂತ ಊರು. ಮುಳಿಯ ಸಂಸ್ಥೆ ಆರು ವರ್ಷಗಳ ಹಿಂದೆ ಬೆಳ್ತಂಗಡಿಯಲ್ಲಿ ಪ್ರಾರಂಭಗೊಂಡಾಗ ನಮ್ಮನ್ನು ಅತ್ಯಂತ ಗೌರವದಿಂದ ಕಂಡ ಊರು. ಇಲ್ಲಿಯ ಜನರು ಅತ್ಯಂತ ಸಾತ್ವಿಕ ಮನಸ್ಸಿನವರು ಎಂದು ಮುಳಿಯ ಮಾರ್ಕೇಟಿಂಗ್ ಕನ್ಸಲ್ವೆಂಟ್ ವೇಣು ಶರ್ಮ ಅವರು ಹೇಳಿದರು.ಅವರು ಬೆಳ್ತಂಗಡಿ ಮುಳಿಯ ಚಿನ್ನೋತ್ಸವಕ್ಕೆ ಅ.7 ರಂದು ಚಾಲನೆ ನೀಡಿ ಮಾತನಾಡಿದರು.


80 ವರ್ಷಗಳ ಪರಂಪರೆಯಲ್ಲಿ ಮುಳಿಯ ಚಿನ್ನಾಭರಣಗಳಲ್ಲಿ ಶುದ್ಧತೆಯನ್ನು ಕಾಪಾಡಿಕೊಂಡು ಬಂದಿದೆ. ಗ್ರಾಹಕರಿಗೆ ಉತ್ತಮ ಸೇವೆ ನೀಡುವುದರೊಂದಿಗೆ ಸಂಸ್ಥೆ ಎತ್ತರಕ್ಕೆ ಬೆಳೆದಿದೆ. ವಿನೂತನ ಮತ್ತು ವಿಶಿಷ್ಠವಾದ ಡಿಸೈನ್ ನಮ್ಮಲ್ಲಿದ್ದು ಗ್ರಾಹಕರು ತಮ್ಮ ಇಷ್ಟದ ಚಿನ್ನಾಭರಣ ಪಡೆಯಬಹುದು ಎಂದರು.


ತಾ.ಪಂ ತರಭೇತಿ ಸಂಯೋಜಕಿ, ಸಂಪನ್ಮೂಲ ವ್ಯಕ್ತಿ ಸುಧಾಮಣಿ ಮಾತನಾಡಿ ಮುಳಿಯದಲ್ಲಿ ಮನೆಯ ವಾತವರಣ ಕಂಡಿದ್ದೇವೆ. ಇಲ್ಲಿ ಬರುವಾಗ ನಗುಮೊಗದ ಸೇವೆಯೊಂದಿಗೆ ಸ್ವಾಗತಿಸಿ ಸತ್ಕಾರ ನೀಡುವುದು ಬಹಳ ಅದ್ಭುತವಾಗಿದೆ. ಎಲ್ಲಿಯೂ ಸಿಗದ ಡಿಸೈನ್ ಮುಳಿಯದಲ್ಲಿ ಸಿಗುತ್ತದೆ. ಹೆಣ್ಮಕ್ಕಳಿಗೆ ಚಿನ್ನ ಇಷ್ಟ, ಸ್ಕಿಮ್ ಮಾಡಿದ್ದು ಗ್ರಾಹಕರಿಗೆ ಪ್ರಯೋಜನವಾಗಿದೆ. ಸಂಸ್ಥೆ ವ್ಯಾಪರದೊಂದಿಗೆ ಧಾರ್ಮಿಕ ಆಚರಣೆಗಳನ್ನು ಆಚರಿಸಿ, ಸಮಾಜಕ್ಕೆ ತನ್ನದೆ ಆದ ಕೊಡುಗೆಯನ್ನು ನೀಡುತ್ತಿದೆ. ಪ್ರತಿಭೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಮುಳಿಯ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಲಿ ಎಂದರು.
ಮೂಡಬಿದ್ರೆ ಜೈನ್ ಕಾಲೇಜಿನ ಶಾರ್ವರಿ ಜೈನ್ ಮಾತನಾಡಿ ಮುಳಿಯ ಸಿಬ್ಬಂದಿಗಳ ಸೇವೆ ಅದ್ಭುತವಾಗಿದೆ. ಎಲ್ಲಾ ಹಬ್ಬಗಳನ್ನು ಆಚರಿಸಿ ಸಂಸ್ಥೆಯು ಮಾದರಿಯಾಗಿದೆ. ಚಿನ್ನಾಭರಣದಲ್ಲಿ ತುಂಬ ಕಲೆಕ್ಷನ್ ಇದ್ದು ಗ್ರಾಹಕರು ಚಿನ್ನೋತ್ಸವದಲ್ಲಿ ಭಾಗವಹಿಸಿ ಎಂದರು.

ವೇದಿಕೆಯಲ್ಲಿ ಮುಳಿಯ ಎಕ್ಸಿಕ್ಯೂಟಿವ್ ಅಸಿಸ್ಟೆಂಟ್ ಶಿವಕೃಷ್ಣ ಮೂರ್ತಿ ಉಪಸ್ಥಿತರಿದ್ದರು. ಬೆಳ್ತಂಗಡಿ ಮುಳಿಯ ಜ್ಯುವೆಲ್ಸ್ ಮ್ಯಾನೇಜ‌ರ್ ಲೋಹಿತ್ ಕುಮಾರ್ ಸ್ವಾಗತಿಸಿದರು. ಸಮೀಕ್ಷಾ ಶಿರ್ಲಾಲು ಕಾರ್ಯಕ್ರಮ ನಿರೂಪಿಸಿದರು. ಮುಳಿಯದ ಉಪ ವ್ಯವಸ್ಥಾಪಕರು ದಿನೇಶ್ ವಂದಿಸಿದರು.


5 ಕಾರು ಗೆಲ್ಲುವ ಸುವರ್ಣವಕಾಶ:
ಮುಳಿಯ ಜ್ಯುವೆಲ್ಸ್‌ನಲ್ಲಿ ನಿಮ್ಮ ಆಯ್ಕೆಯ ಚಿನ್ನಾಭರಣ ಹಾಗೂ ಡೈಮಂಡ್ ಖರೀದಿಸಿ ಸಂಭ್ರಮಿಸಲು ಅವಕಾಶವಿದೆ. ರೂ. 20 ಸಾವಿರ ಮೊತ್ತದ ಡೈಮಂಡ್ ಆಭರಣ ಖರೀದಿಸಿ,

Related post

Leave a Reply

Your email address will not be published. Required fields are marked *

error: Content is protected !!