• November 21, 2024

ಉಪ್ಪಿನಂಗಡಿ: ಭತ್ತ ನಾಟಿ – 2024 ಕಾರ್ಯಕ್ರಮ

 ಉಪ್ಪಿನಂಗಡಿ: ಭತ್ತ ನಾಟಿ – 2024 ಕಾರ್ಯಕ್ರಮ

 

ಉಪ್ಪಿನಂಗಡಿ : ಉಪ್ಪಿನಂಗಡಿ ವೇದಶಂಕರ ಶ್ರೀರಾಮ ಶಾಲೆಯ ನೇತೃತ್ವದಲ್ಲಿ ಮಕ್ಕಳಿಗೆ ಭತ್ತ ಬೇಸಾಯದ ಅನುಭವ ನೀಡುವ ಉದ್ದೇಶದಿಂದ, ಭತ್ತ ನಾಟಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಜುಲೈ 27 ರಂದು ಉಪ್ಪಿನಂಗಡಿಯ ಮುಳಿಯ ನಡೆಯಿತು

ಈ ಕಾರ್ಯಕ್ರಮವನ್ನು ಇಂದ್ರಪ್ರಸ್ಥ ವಿದ್ಯಾಲಯ ಉಪ್ಪಿನಂಗಡಿ ಇದರ ಆಡಳಿತ ಮಂಡಳಿಯ ಸದಸ್ಯರಾಗಿರುವ ಜಯಪ್ರಸಾದ್ ಕಡಮ್ಮಾಜೆ ಇವರು ಉದ್ಘಾಟಿಸಿದರು.

ಅಮೂಲ್ಯ ಗ್ಯಾಸ್ ಏಜೆನ್ಸಿ ಉಪ್ಪಿನಂಗಡಿಯ ಮಾಲಕರಾಗಿರುವ ಮಾಜಿ ಸೈನಿಕ ಚಂದಪ್ಪ ಮೂಲ್ಯ ಇವರು ಮಕ್ಕಳಿಗೆ ಭತ್ತ ಬೇಸಾಯದ ಅನಿವಾರ್ಯತೆಯ ಬಗ್ಗೆ ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುನಿಲ್ ಅಣಾವು ವಹಿಸಿದ್ದರು, ಕಾರ್ಯಕ್ರಮದಲ್ಲಿ ‌ ಮುಳಿಯ ಮನೆಯ ಹಿರಿಯರಾದ ಶ್ರೀಮತಿ ಕಲಾವತಿ ಹೆಗ್ಡೆ, ಶಾಲೆಯ ಸಂಚಾಲಕರಾದ ಯು ಜಿ ರಾಧ, ಉಪಾಧ್ಯಕ್ಷರಾದ ಶ್ರೀಮತಿ ಅನುರಾಧ ಆರ್ ಶೆಟ್ಟಿ, ಸದಸ್ಯರಾದ ಶ್ರೀ ಗುಣಕರ ಅಗ್ನಾಡಿ, ಜಯಂತ್ ಪೊರೋಳಿ, ಪೋಷಕ ಸಂಘದ ಅಧ್ಯಕ್ಷರಾದ ಶ್ರೀ ಉದಯ ಅತ್ರಮಜಲು, ಮಾತೃಭಾರತಿಯ ಅಧ್ಯಕ್ಷರಾದ ಶ್ರೀಮತಿ ಸಂಧ್ಯಾಪ್ರಭಾ, ಇಂದ್ರಪ್ರಸ್ಥ ವಿದ್ಯಾಲಯದ ಪ್ರಾಂಶುಪಾಲರಾದ ಶ್ರೀ ಎಚ್ ಕೆ ಪ್ರಕಾಶ್, ಶ್ರೀ ಸುಂದರ ಶೆಟ್ಟಿ, ಪ್ರಾಥಮಿಕ ವಿಭಾಗದ ಮುಖ್ಯಗುರುಗಳಾದ ಶ್ರೀಮತಿ ವಿಮಲ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ದೈವ ನರ್ತಕರಾದ ಶ್ರೀ ಕೂಸಪ್ಪ ಮಿತ್ತಿಲ, ಇಳಂತಿಲ, ಭತ್ತ ಕೃಷಿಕ ಚಿದಾನಂದ ಸಾಲ್ಯಾನ್ ಮತ್ತು ಶಾಲೆಗೆ ಭತ್ತ ಬೇಸಾಯ ಮಾಡಲು ತಮ್ಮ ಗದ್ದೆ ನೀಡಿ ಸಹಕರಿಸಿದ ಮುಳಿಯ ಮನೆಯ ಹಿರಿಯರಾದ ಕಲಾವತಿ ಹೆಗ್ಡೆ ಇವರನ್ನು ಗೌರವಿಸಲಾಯಿತು. ಗದ್ದೆಗೆ ಅತಿಥಿವರ್ಯರು ಹಾಲೆರೆದು, ನೇಜಿ ನೆಡುವ ಕೆಲಸಕ್ಕೆ ಚಾಲನೆ ನೀಡಿದರು.‌‌

ಇದೇ ಸಂದರ್ಭದಲ್ಲಿ ಮಕ್ಕಳಿಗೆ ಕೆಸರುಗದ್ದೆಯ ಓಟ, ಹಗ್ಗಜಗ್ಗಾಟ, ಕಂಬಳ ಓಟ ಸ್ಪರ್ಧೆಯನ್ನು ನಡೆಸಲಾಯಿತು. ಈ ಕಾರ್ಯಕ್ರಮಕ್ಕೆ ಇಂದ್ರಪ್ರಸ್ಥ ವಿದ್ಯಾಲಯದ ಪ್ರಾಥಮಿಕ ವಿಭಾಗದ ಪುಟಾಣಿ ಮಕ್ಕಳು ಮತ್ತು ಕಾಲೇಜು ವಿಭಾಗದ ವಿದ್ಯಾರ್ಥಿಗಳು ಆಗಮಿಸಿ, ಗದ್ದೆಯಲ್ಲಿ ಆಟವಾಡಿ ನೇಜಿನೆಟ್ಟು ಭತ್ತ ಬೇಸಾಯದ ಬಗ್ಗೆ ಅರಿತುಕೊಂಡರು.

ಹತ್ತನೇ ತರಗತಿಯ ವಿದ್ಯಾರ್ಥಿಗಳಾದ ಕು| ಅನ್ವಿ ಸ್ವಾಗತಿಸಿ, ಕು| ಶಿವಾನಿ ಮತ್ತು ಕು| ಭವಿಷ್ಯ ಕಾರ್ಯಕ್ರಮ ನಿರೂಪಿಸಿದರು, ಕು| ಯಶ್ವಿತ ವಂದಿಸಿದರು.

Related post

Leave a Reply

Your email address will not be published. Required fields are marked *

error: Content is protected !!