ಬೆಳ್ತಂಗಡಿ : ದಲಿತ ವ್ಯಕ್ತಿಯನ್ನು ಮನಬಂದಂತೆ ಥಳಿಸಿ, ಬೆತ್ತಲೆಗೊಳಿಸಿ ತೋಟಕ್ಕೆ ಎಸೆದು ಹೋದ ಕಿಡಿಗೇಡಿಗಳು: ಶಿಬಾಜೆ ಗ್ರಾಮದಲ್ಲೊಂದು ಮನಕಲಕುವ ಘಟನೆ
ಶಿಬಾಜೆ: ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದ ಗುತ್ತುಮನೆ ಎಂಬಲ್ಲಿರುವ ಎಸಿ ಕುರಿಯನ್ ಎಂಬವರ ಬಾಬ್ತು ಮಾಲಿಕತ್ವದ ಸಾರ ಫಾರ್ಮ್ ತೋಟದಲ್ಲಿ ಕೆಲಸಕ್ಕಿದ್ದ ದಲಿತ ವ್ಯಕ್ತಿ ಶ್ರೀಧರ ಎಂಬಾತನಿಗೆ 4 ಜನ ಆರೋಪಿಗಳಾದ ತಿಮ್ಮಪ್ಪ ಪೂಜಾರಿ, ಲಕ್ಷ್ಮಣ ಪೂಜಾರಿ, ಕೆಕೆ ಆನಂದ ಗೌಡ ಹಾಗೂ ಮಹೇಶ್ ಎಂಬವರು ಕಿಬ್ಬೊಟ್ಟೆಗೆ ಮತ್ತು ಎದೆಗೆ ಕೈಯಿಂದ ಹೊಡೆದಿದ್ದಾರೆ. ತೋಟದ ಆಫೀಸ್‌ನ ಎದುರು ಇರುವ ಸಾರ್ವಜನಿಕ ಡಾಮಾರು ರಸ್ತೆಯ ಬದಿಯಲ್ಲಿ ಜೋರಾಗಿ ಬೊಬ್ಬೆ ಹಾಕಿತ್ತಿರುವುದು ಕೇಳಿ ಹೊರಗೆ ಬಂದ ಸಾರ ಫಾರ್ಮ್ ತೋಟದ ಮೇಲ್ಬಿಚಾರಕ ಹರೀಶ್ ಮುಗೇರ ಬಂದು ನೋಡಿದಾಗ ಶ್ರೀಧರ್ ಅಂಗಾತನೆ ಬಿದ್ದುಕೊಂಡಿದ್ದರು.
ತಕ್ಷಣ ಹರೀಶ್ ಮುಗೇರ ಇವರು ಅದೇ ತೋಟದಲ್ಲಿ ಕೆಲಸಕ್ಕೆ ಇದ್ದ ಟಿಸಿ ಅಬ್ರಾಹಂ ಮತ್ತು ಪರಮೇಶ್ವರ ಗೌಡರವರು ಅಲ್ಲಿಗೆ ಬರುವುದನ್ನು ನೋಡಿದ ಆರೋಪಿಗಳು ಅಲ್ಲಿಂದ ಹೊರಟು ಹೋಗಿದ್ದರು. ತೋಟದ ಮೇಲ್ವಿಚಾರಕರಾದ ಹರೀಶ್ ಮುಗೇರ ಇವರು ಹಲ್ಲೆಗೊಳಗಾದ ಶ್ರೀಧರ್ ಎಂಬಾತನನ್ನು ಉಪಚರಿಸಿ ತೋಟದ ಮನೆಗೆ ಕರೆದುಕೊಂಡು ಬಂದು ಊಟ ನೀಡಿ ಆತನು ರಾತ್ರಿ ಉಳಿದುಕೊಳ್ಳುವ ವಿಶ್ರಾಂತಿ ಕೊಠಡಿಗೆ ಕಳುಹಿಸಿಕೊಟ್ಟಿದ್ದಾರೆ. ನಂತರ ಡಿ.18 ರಂದು ಬೆಳಗ್ಗೆ ವಿಶ್ರಾಂತಿಯಲ್ಲಿದ್ದ ಶ್ರೀಧರ್ ನನ್ನು ಕೂಗಿ ಕರೆದಾಗ ಯಾವುದೇ ರೀತಿಯ ಪ್ರತಿಕ್ರಿಯೆ ನೀಡದೇ ಇದ್ದುದನ್ನು ಕಂಡು ಒಳ ಹೋಗಿ ನೋಡಿದಾಗ ಶ್ರೀಧರ್ ವಿಶ್ರಾಂತಿ ಕೊಠಡಿಯಲ್ಲಿ ಕಾಣಿಸುವುದಿಲ್ಲ. ಸುತ್ತ ಮುತ್ತ ಹುಡುಕಾಟ ನಡೆಸಿದಾಗ ಕೊಠಡಿಯಿಂದ ಸುಮಾರು 250-300 ಮೀಟರ್ ದೂರದಲ್ಲಿ ಅಡಿಕೆ ತೋಟದಲ್ಲಿ ಬೆತ್ತಲೆಯಾಗಿ ಅಂಗಾತನೆ ಬಿದ್ದುಕೊಂಡಿರುವುದನ್ನು ನೋಡಿದ ಹರೀಶ್ ಮುಗೇರ ರವರು ತೋಟದ ಮಾಲಿಕರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ನಂತರ ಹರೀಶ್ ಮುಗೇರ ಮತ್ತು ಎಜೆ ಜೋಯಿ ಎಂಬವರು ತೋಟವನ್ನು ಪರಿಶೀಲಿಸಿದಾಗ ತೋಟಕ್ಕೆ ಅಳವಡಿಸಿದ್ದ ತಂತಿ ಬೇಲಿಯನ್ನು ಕತ್ತರಿಸಿ ಈ ಮುಂಚೆ ಹಲ್ಲೆ ಮಾಡಿದ್ದ ಆರೋಪಿಗಳು ವಿಶ್ರಾಂತಿ ಕೊಠಡಿಯ ಬಳಿ ಬಂದು ಕೊಲೆ ಮಾಡಿ ತೋಟದ ಮಧ್ಯೆ ಹಾಕಿ ಹೋಗಿರುವುದಲ್ಲದೆ ಶ್ರೀಧರ್ ಬಳಿ ಇದ್ದ 9500 ರೂ ಗಳನ್ನು ಆರೋಪಿಗಳು ದೋಚಿಕೊಂಡು ಹೋಗಿದ್ದಾರೆ.
ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.