• November 21, 2024

ಧರ್ಮಸ್ಥಳ ಕ್ಷೇತ್ರದಲ್ಲಿ ಲಕ್ಷದೀಪೋತ್ಸವದ ಸಂಭ್ರಮ: ಸಾಹಿತ್ಯ ಸಮ್ಮೇಳನ

 ಧರ್ಮಸ್ಥಳ ಕ್ಷೇತ್ರದಲ್ಲಿ ಲಕ್ಷದೀಪೋತ್ಸವದ ಸಂಭ್ರಮ: ಸಾಹಿತ್ಯ ಸಮ್ಮೇಳನ

 

ಧರ್ಮಸ್ಥಳ: ಲಕ್ಷದೀಪೋತ್ಸವದ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಅಂತಿಮ ದಿನದ ಸಾಹಿತ್ಯ ಸಮ್ಮೇಳನವು ಕ್ಷೇತ್ರದ ಅಮೃತವರ್ಷಿಣಿ ಸಭಾಂಗಣದಲ್ಲಿ ಜರುಗಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಬೆಂಗಳೂರು ಚಲನಚಿತ್ರ ನಿರ್ದೇಶಕ ಡಿ ಶೇಷಾದ್ರಿಯವರು ನೆರವೇರಿಸಿ ಮಾತನಾಡಿ ಯಾವ ವ್ಯಕ್ತಿ ಸರಳವಾದ ಜೀವನ ನಡೆಸುತ್ತಾನೋ ಅವನೇ ಸಾಕ್ಷಾತ್ಕಾರ. ಅಂತಹ ಸಾಕ್ಷಾತ್ಕಾರವನ್ನು ಪೂಜ್ಯ ಖಾವಂದರಲ್ಲಿ ಕಾಣಬಹುದು. ಇತ್ತೀಚೆಗೆ ಸಿನೆಮಾದಲ್ಲೂ ಸಾಹಿತ್ಯ ಕ್ಷೇತ್ರ ಹಿಂದೆ ಉಳಿದಿದೆ. ಮುಂದಿನ ದಿನಗಳಲ್ಲಿ ಧರ್ಮಸ್ಥಳ ಕ್ಷೇತ್ರದಲ್ಲಿಯು ಸಿನಿಮಾ ಕ್ಷೇತ್ರದ ಉಳಿವಿಗಾಗಿ ಚಿತ್ರೋತ್ಸವ ಸಮ್ಮೇಳನ ನಡೆಯಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ ಹಿರಿಯ ಸಾಹಿತಿ ವಿದ್ವಾಂಸರು ಮೈಸೂರು ವಿದ್ವಾನ್ ಡಾ ಹೆಚ್ ವಿ ನಾಗರಾಜು ರಾವ್ ಮಾತನಾಡಿ ಸಾಹಿತ್ಯದ ಬಗ್ಗೆ ಅರಿವು ಮೂಡಿಸಲು ಇಂತಹ ಕಾರ್ಯಕ್ರಮಗಲನ್ನು ಮಾಡಿರುವುದು ಸಂತಸವಾಗುತ್ತಿದೆ. ಇಂತವರು ರಾಜ್ಯ ಸಭೆಗೆ ಆಯ್ಕೆಯಾಗಿರುವುದು ರಾಜ್ಯಸಭೆಗೆ ಹೆಚ್ಚಿದೆ ಗೌರವ ಎಂದು ಮಾತನಾಡಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಡಾ.ಡಿ ವೀರೇಂದ್ರ ಹೆಗ್ಗಡೆಯವರು ಸಾಹಿತ್ಯ ಬಗೆಗಿನ ಒಲವು ಮತ್ತು ಬದಲಾವಣೆಗಳನ್ನು ತಿಳಿಸುತ್ತ, ಸಾಹಿತ್ಯದಲ್ಲಿ ಅಭಿರುಚಿ ಮೂಡಬೇಕಾದರೆ ಸಾಹಿತಿಗಳು ಹಾಗೂ ಅವರ ಸಾಹಿತ್ಯದ ಪರಿಚಯ ಜನಸಾಮಾನ್ಯರಿಗೆ ತಿಳಿ ಹೆಳುವುದು ಮುಖ್ಯವಾಗಿದೆ. ಆದ್ದರಿಂದ ನಮ್ಮ ಹಿರಿಯರು ಲಕ್ಷದೀಪೋತ್ಸವದ ಸುಸಂದರ್ಭದಲ್ಲಿ ಲಲಿತಕಲಾ ಗೋಷ್ಠಿ, ಸರ್ವಧರ್ಮ , ಸಾಹಿತ್ಯ ಸಮ್ಮೇಳನಗಳ ಆಯೋಜನೆ ಮಾಡುವ ಮೂಲಕ ಭಕ್ತಾಧಿಗಳಿಗೂ ಕಲೆ ಹಾಗೂ ಸಾಹಿತ್ಯ ಪ್ರೆಮಿಗಳಿಗೂ ಪ್ರೋತ್ಸಾಹ ಹಾಗೂ ಪ್ರೆರಣೆ ನೀಡಿರುತ್ತಾರೆ. ಇಂದು ಕ್ಷೇತ್ರಕ್ಕೆ ಭಕ್ತಾಧಿಗಳು ಅನ್ನಸಂತರ್ಪಣೆಯನ್ನು ನೀಡಿದ್ದಾರೆ. ವಾದ್ಯ ಗೋಷ್ಠಿಗಳಲ್ಲಿ 333 ತಮಡಗಳಿಂದ 1600 ಗಾನ ಸ್ವರ ಹಿಮ್ಮೇಳ ತಂಡಗಳು, 70 ಬ್ಯಾಂಡ್ ತಮಡಗಳು, 33 ಶಂಖ ಸ್ವರಗಳು, 191 ವಿವಿಧ ವೇಷಧಾರಿಗಳು ಭಾಗವಹಿಸಿದ್ದಾರೆ. ಲಕ್ಷಕ್ಕೂ ಅಧಿಕ ಭಕ್ತರು ಇಲ್ಲಿಯವರೆಗೆ ಬಂದು ಹೋಗಿದ್ದಾರೆ ಎಂದು ಮೆಚ್ಚುಗೆಯ ಮಾತನ್ನಾಡಿದರು.

ಈ ಸಂದರ್ಭದಲ್ಲಿ ಧರ್ಮದರ್ಶನ ಕೃತಿ ಬಿಡುಗಡೆಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ಶ್ರೀ ಸತ್ಯೇಶ್ ಬೆಂಗಳೂರು, ರವೀಂದ್ರ ಭಟ್ ಐನಕೈ ಬೆಂಗಳೂರು ಮತ್ತು ಗೀತಾ ವಸಂತ ತುಮಕೂರು ಇವರು ಉಪನ್ಯಾಸವನ್ನು ನೀಡಿದರು.

ಈ ಸಂದರ್ಭದಲ್ಲಿ ಎಸ್ ಡಿ ಎಮ ಸಿ ಕಾರ್ಯದರ್ಶಿ ಡಿ.ಹರ್ಷೇಂದ್ರ ಕುಮಾರ್, ಉಜಿರೆ ಪ್ರಾಧ್ಯಾಪಕರು ಶ್ರೀಧರ್ ಭಟ್ ಮತ್ತಿತರರು ಉಪಸ್ಥಿತರಿದ್ದರು.

ಉಪನ್ಯಾಸಕರಾದ ಡಾ ದಿವಾ ಕೊಕ್ಕಡ ವಂದನಾರ್ಪಣೆ ಗೈದರು.

Related post

Leave a Reply

Your email address will not be published. Required fields are marked *

error: Content is protected !!