ಕಲ್ಮಂಜ: ಮಣ್ಣುಬಿದ್ದು ಮುಚ್ಚಿಹೋದ ಮದಿಮಾಲ್ ಕಟ್ಟೆ ಅಂಗನವಾಡಿ ಶೌಚಾಲಯದ ಗುಂಡಿ: ಪುಟಾಣಿ ಮಕ್ಕಳಿಗೆ ಇಲ್ಲದಾಯಿತು ಶೌಚಾಲಯ ವ್ಯವಸ್ಥೆ

ಕಲ್ಮಂಜ: ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದ ಮದಿಮಾಲ್ ಕಟ್ಟೆ ಎಂಬಲ್ಲಿ ಇರುವಂತಹ ಅಂಗನವಾಡಿ ಕೇಂದ್ರದಲ್ಲಿ ಒಂದು ಶೌಚಾಲಯವಿದ್ದು ಈ ಶೌಚಾಲಯದ ಹೊರಭಾಗದಲ್ಲಿ ಇರುವಂತಹ ಪಿಟ್ (ಗುಂಡಿ) ಸಂಪೂರ್ಣವಾಗಿ ಜಖಂ ಗೊಂಡು ಕಸ ಕಡ್ಡಿಗಳಿಂದ ತುಂಬಿ ಅದರ ಮೇಲೆ ಮಣ್ಣು ಬಿದ್ದು ಗುಂಡಿ ಸಂಪೂರ್ಣವಾಗಿ ಮುಚ್ಚಿ ಹೋಗಿದೆ.
ಈ ಕಾರಣಕ್ಕಾಗಿ ಪುಟಾಣಿ ಮಕ್ಕಳಿಗೆ ಶೌಚಾಲಯ ವ್ಯವಸ್ಥೆ ಇಲ್ಲದಂತಾಗಿದೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನಹರಿಸಿ ಸಮಸ್ಯೆಯನ್ನು ಪರಿಹರಿಸಬೇಕಾಗಿದೆ.