ಬೆಳ್ತಂಗಡಿ ತಾಲೂಕಿನ ಮುಂಡಾಜಿ ಗ್ರಾಮದ ಕಾಪು ನಿವಾಸಿ ಸುಜಾತ ಎಂಬ ಗರ್ಭಿಣಿ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ ಬಳಿಕ ರಕ್ತಸ್ರಾವ ಉಂಟಾಗಿ ಸಾವನ್ನಪ್ಪಿದ ಘಟನೆ ನಡೆದಿದೆ ಬದ್ಯಾರು ಖಾಸಗಿ ಆಸ್ಪತ್ರೆಯಲ್ಲಿ ಎರಡನೇ ಹೆರಿಗೆಗೆ ದಾಖಲಾಗಿದ್ದ ಸುಜಾತ ರವರಿಗೆ ವೈದ್ಯರು ಆಪರೇಷನ್ ಮಾಡಿದ್ದು ನಂತರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಬಳಿಕ ಸುಜಾತರಿಗೆ ವಿಪರೀತ ರಕ್ತಸ್ರಾವ ಉಂಟಾಗಿದೆ ತಕ್ಷಣ ವೈದ್ಯರು ಮಂಗಳೂರು ಆಸ್ಪತ್ರೆಗೆ ಸಾಗಿಸಲು ಸಲಹೆ ನೀಡಿದ್ದಾರೆ ಅದರಂತೆ ಮನೆಯವರು ಆಂಬುಲೆನ್ಸ್ ಮೂಲಕ ಮಂಗಳೂರು ಆಸ್ಪತ್ರೆಗೆ […]
ಹಿರಿಯ ನಾಟಕಕಾರ, ನಿರ್ದೇಶಕ, ವಜ್ರನೇತ್ರ ಪತ್ರಿಕೆ ಸಂಪಾದಕ, ರತ್ನಾಕರ ರಾವ್ ಕಾವೂರುರವರು (81) ಇಂದು ಬೆಳಿಗ್ಗೆ ಸ್ವಗೃಹದಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಸಾಮಾಜಿಕ, ಪೌರಾಣಿಕ, ಆಧ್ಯಾತ್ಮಿಕ, ನವ್ಯ ಮತ್ತು ಐತಿಹಾಸಿಕ ಹೀಗೆ ಐದು ಬಗೆಯ ನಾಟಕ ರಚನೆಯಲ್ಲಿ ಅವರದ್ದು ಗಮನಾರ್ಹ ಸಾಧನೆಯಾಗಿತ್ತು. ವಜ್ರನೇತ್ರ ಎಂಬ ಕನ್ನಡ ಪತ್ರಿಕೆಯ ಮೂಲಕ ಸಾಮಾಜಿಕ ಸಮಸ್ಯೆಗಳನ್ನು ಬಿಂಬಿಸಿ ಸರಕಾರದ ಗಮನ ಸೆಳೆಯುತ್ತಿದ್ದ ಅವರು ಸುಧೀರ್ಘ 60 ವರ್ಷಗಳ ಕಾಲ ಸರಸ್ವತಿಯ ಸೇವೆಗೈದಿದ್ದರು. ‘ನಾಟಕ ಕಲಾ ರತ್ನ’ ಬಿರುದಾಂಕಿತ ರತ್ನಾಕರ ರಾವ್ […]Read More
ಬೆಳ್ತಂಗಡಿ: ಇಲ್ಲಿನ ಶ್ರೀ ಗುರುದೇವ ಪದವಿ ಕಾಲೇಜಿನ ಉಪನ್ಯಾಸಕಿ ಮಲ್ಲಿಕಾ (40 ವರ್ಷ) ಅವರು ಅನಾರೋಗ್ಯದಿಂದ ಇಂದು ನಿಧನರಾಗಿದ್ದಾರೆ . ಇಂದು ಬೆಳಗ್ಗೆ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದರಿಂದ ಅವರನ್ನು ಬೆಳ್ತಂಗಡಿಯ ಆಸ್ಪತ್ರೆಯಿಂದ ಕ್ಕೆ ಕರೆದೊಯ್ಯಲಾಗಿತ್ತು ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು ಆದರೆ ಚಿಕಿತ್ಸೆ ಸಲ್ಲಿಸದೆ ಮಲ್ಲಿಕಾ ಮೃತಪಟ್ಟಿದ್ದಾರೆ. ಇವರು ಬೆಳ್ತಂಗಡಿ ಶ್ರೀ ಗುರುದೇವ ಪದವಿ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮೃತರು ಪತಿ, ತಂದೆ, ತಾಯಿ ಹಾಗೂ ಬಂಧು ವರ್ಗದವರನ್ನ […]Read More
ಕಾಸರಗೋಡು: ಮಂಗಳೂರು ಕಾಸರಗೋಡು ರಾಷ್ಟ್ರೀಯ ಹೆದ್ದಾರಿ ಮುಗ್ರಾಲ್ ಪುತ್ತೂರು ಬನ್ನಿಕುನೆಂಬಲ್ಲಿ ಆಟೋರಿಕ್ಷ ಮತ್ತು ಸ್ಕೂಟರ್ ನಡುವೆ ಜುಲೈ 10ರಂದು ಅಪಘಾತ ನಡೆದಿದೆ ಅಪಘಾತದಲ್ಲಿ ಜುಲೈ 17ರಂದು ಮದುವೆ ನಿಗದಿಯಾಗಿದ್ದ ಯುವಕನೊಬ್ಬ ಬಕ್ರಿದ್ ಹಬ್ಬದಂದೆ ಬಲಿಯಾಗಿರುವ ಘಟನೆ ಕಾಸರಗೋಡಿನಲ್ಲಿ ನಡೆದಿದೆ. ಮೃತಪಟ್ಟ ವ್ಯಕ್ತಿ ಮುಟ್ಟ ತ್ತೋಡಿ ಹಿದಾಯತ್ ನಗರದ ಮೊಹಮ್ಮದ್ ಆಶ್ರಫ್ ತನ್ನ ಸಹೋದರ ಜೊತೆಗೂಡಿ ಚಿಕ್ಕಮ್ಮನ ಮನೆಗೆ ತೆರಳಿ ಮರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಜೊತೆಯಲ್ಲಿದ್ದ ಸಹೋದರ ಇರ್ಫಾನ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಇಬ್ಬರನ್ನು ಆಸ್ಪತ್ರೆಗೆ […]Read More
ಮಂಗಳೂರಿನ ಖ್ಯಾತ ಜೈನ ಮನೆತನದ ಜಯವರ್ಮರಾಜ್ ಬಳ್ಳಾಲ್ ಅವರ ಸುಪತ್ರ ರಾಹುಲ್ ವರ್ಮಾ ಬಳ್ಳಾಲ್ ಅವರು ಇಂದು ನಸುಕಿನ ವೇಳೆಯಲ್ಲಿ ವಿಧಿವಶರಾಗಿದ್ದಾರೆ. ಅವರು ದ.ಕ ಮತ್ತು ಉಡುಪಿ ಜಿಲ್ಲೆಯ ಸುಪ್ರಸಿದ್ದ ಜೈನಮನೆತನದ ಹೆಮ್ಮೆಯ ಕುಡಿ. ಅಗರ್ಭ ಶ್ರೀಮಂತರಾದರೂ ಅವರು ಹೃದಯಶ್ರೀಮಂತಿಕೆಯ ಮೂಲಕವೆ ಎಲ್ಲರ ಪ್ರೀತಿ, ವಾತ್ಸಲ್ಯಕ್ಕೆ ಪಾತ್ರರಾದವರು. ವಿವಿಧ ಉದ್ಯಮಗಳಲ್ಲಿ ತೊಡಗಿಕೊಂಡು ಯಶಸ್ವಿ ಉದ್ಯಮಿ ಎನಿಸಿಕೊಂಡವರು. ಕೃಷಿ, ತೋಟಗಾರಿಕೆ, ಹೈನುಗಾರಿಕೆಯ ಬಗ್ಗೆ ಅಪಾರವಾದ ಪ್ರೀತಿಯನ್ನಿಟ್ಟು ಅದನ್ನು ಮುನ್ನಡೆಸಿಕೊಂಡು ಹೋದವರು. ತನ್ನ ಕುಟುಂಬದಿಂದ ಬಳುವಳಿಯಾಗಿ ಬಂದಿರುವ ದಾನ, […]Read More