ಶ್ರೀ. ಧ ಮ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಳೆ ದಿನ ಹಾಗೂ ಆಟಿಡೊಂಜಿ ದಿನ ಆಚರಣೆ
ತುಳುವರ ಪಾಲಿನ ವಿಶೇಷ ತಿಂಗಳು ಆಟಿ ಈ ತಿಂಗಳ ವೈಶಿಷ್ಟ್ಯಗಳು ,ವಿಶೇಷ ತಿನಿಸುಗಳು, ಆಟಿತಿಂಗಳಲ್ಲಿ ಆಟ ಆಡುವ ಆಟಗಳು, ಒಟ್ಟಾರೆಯಾಗಿ ತುಳುನಾಡಿನ ವಿಶೇಷತೆಯನ್ನು ಮಕ್ಕಳಿಗೆ ಪರಿಚಯಿಸಲು ಹಾಗೂ ಮಳೆ ಹಾಗೂ ಪ್ರಕೃತಿಯ ವೈಶಿಷ್ಟ್ಯವನ್ನು ಪರಿಚಯಿಸಲು ಶ್ರೀ ಧ ಮ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಳೆ ದಿನ ಹಾಗೂ ಆಟಿಡೊಂಜಿ ದಿನ ಆಚರಣೆ ಹಾಗೂ ಮಳೆ ದಿನ ಎನ್ನುವ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮವನ್ನು ಮುಂಡ್ರುಪಾಡಿ ಸರ್ಕಾರಿ ಶಾಲೆಯ ಶಿಕ್ಷಕಿ ಚಿತ್ರ ಪ್ರಭ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಮಕ್ಕಳು ಮಳೆ ಹಾಗೂ ಪ್ರಕೃತಿಯ ಸೌಂದರ್ಯವನ್ನು ವಿವರಿಸುತ್ತ ವಿವಿಧ ನೃತ್ಯ, ಸಮೂಹ ಗೀತೆ, ಪರಿಸರದ ಕಾಳಜಿ ಹಾಗೂ ಮಳೆಯ ಸೊಬಗನ್ನು ವರ್ಣಿಸಿದರು.
ಅದೇ ರೀತಿಯಾಗಿ ತುಳುನಾಡಿನ ವೈಶಿಷ್ಟ್ಯವನ್ನು ಸಾರುತ್ತ ತುಳು ಪದ್ಯಗಳು ಗಾದೆ ಮಾತುಗಳು ಒಗಟುಗಳು ನೃತ್ಯದ ಮೂಲಕ ತುಳುನಾಡಿನ ವೈವಿಧ್ಯತೆಯನ್ನು ವೇದಿಕೆಯಲ್ಲಿ ಪ್ರಸ್ತುತಪಡಿಸಿ ಆನಂದಿಸಿದರು. ಶಾಲೆಯ ಮುಖ್ಯೋಪಾಧ್ಯಾಯನಿ ಪರಿಮಳ ಎಂ. ವಿ ಅವರ ಮಾರ್ಗದರ್ಶನದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಮುಂಡ್ರುಪ್ಪಾಡಿ ಶಾಲೆಯ ಪುಟಾಣಿಗಳು , ಶಾಲೆ ಎಲ್ಲಾ ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮಕ್ಕೆ ಸಾಕ್ಷಿಗಳಾದರೂ. ಆದ್ಯ ಹಾಗೂ ಸಂಹಿತ ನಿರೂಪಿಸಿದ ಕಾರ್ಯಕ್ರಮದಲ್ಲಿ ಯಶ್ವಿಕ ವಂದನಾರ್ಪಣೆಗೈದರು.