ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಧರ್ಮಸ್ಥಳದಲ್ಲಿ ವಿವಿಧ ಸಂಘಗಳ ಉದ್ಘಾಟನಾ ಸಮಾರಂಭ
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಧರ್ಮಸ್ಥಳದಲ್ಲಿ ವಿವಿಧ ಸಂಘಗಳ ಉದ್ಘಾಟನಾ ಸಮಾರಂಭ ಇಂದು ನೆರವೇರಿತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಸಾಹಿತಿ ಕವಿ ಹಾಗೂ ಪ್ರಸೂತೀ ತಜ್ಞೆಯಾಗಿ ಪ್ರವೃತ್ತಿಯಲ್ಲಿ ವೈದ್ಯರಾಗಿರುವ ಶ್ರೀಮತಿ ವೀಣಾ ಎನ್ ಸುಳ್ಯ ಇವರು ಆಗಮಿಸಿದ್ದರು. ಈ ಕಾರ್ಯಕ್ರಮ ದೀಪ ಪ್ರಜ್ವಾಲನೆಯೊಂದಿಗೆ ಹಾಗೂ ಅಣಕು ರಾಕೆಟ್ ಉಡಾವಣೆಯೊಂದಿಗೆ ಚಾಲನೆ ಪಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಶಾಲೆಯಲ್ಲಿ ಸಂಘಗಳ ಮಹತ್ವ ಅದರಿಂದ ವಿದ್ಯಾರ್ಥಿಗಳಿಗೆ ಆಗುವ ಪ್ರಯೋಜನ ವಿದ್ಯಾರ್ಥಿಗಳು ಅದನ್ನು ಹೇಗೆ ಸದುಪಯೋಗಪಡಿಸಿಕೊಳ್ಳಬೇಕು ಎಂದು ಎಂಬಿತ್ಯಾದಿ ವಿಚಾರಗಳನ್ನು ತಿಳಿಹೇಳಿದರು.
ವಿದ್ಯಾರ್ಥಿಗಳು ತಮ್ಮ ತಮ್ಮ ಸಂಘಗಳ ವಾರ್ಷಿಕ ಯೋಜನೆಯನ್ನು ನಾಟಕ,ನೃತ್ಯ,ಕವನವಾಚನ,ಮೈಮ್ ಶೊ, ಪಿಪಿಟಿ ಪ್ರದರ್ಶನ,ವಾರ್ತೆ ವಾಚನ ಇತ್ಯಾದಿಗಳ ಮುಖಾಂತರ ವಿಶಿಷ್ಟವಾಗಿ ವಿವರಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪರಿಮಳ ಎಂ ವಿ ಶಾಲಾ ಸಂಘಗಳ ಕುರಿತು ಸಂಕ್ಷಿಪ್ತ ಮಾಹಿತಿ ನೀಡಿದರು.ಈ ದಿನ ಶಾಲೆ ಹಬ್ಬದ ವಾತಾವರಣದೊಂದಿಗೆ ಕಂಗೊಳಿಸುತ್ತಿತ್ತು.ಈ ಕಾರ್ಯಕ್ರಮಕ್ಕೆ ಶ್ರೀಯುತ ಪಾಲಚಂದ್ರ ವೈ,ಶ್ರೀಯುತ ಲಕ್ಷ್ಮಿನಾರಾಯಣ,ದೇವಳದ ಪಾರುಪತ್ಯಗಾರರಾದ ಶ್ರೀಯುತ ಲಕ್ಷ್ಮೀನಾರಾಯಣರಾವ್, ಶಾಲಾ ಸಂಚಾಲಕರಾದ ಶ್ರೀಯುತ ಅನಂತಪದ್ಮನಾಭ ಭಟ್ ಆಗಮಿಸಿ ಕಾರ್ಯಕ್ರಮವನ್ನು ಚಂದಗಾಣಿಸಿದರು. ನಾಟಕದೊಂದಿಗೆ ಆರಂಭವಾದ ಈ ಕಾರ್ಯಕ್ರಮ ನಾಟಕದ ಮುಖಾಂತರವೇ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿ ಧನ್ಯವಾದ ಅರ್ಪಿಸಿದ್ದು ಈ ಕಾರ್ಯಕ್ರಮದ ವಿಶೇಷವಾಗಿತ್ತು. ಶಾಲಾ ಶಿಕ್ಷಕರಿಂದ ಹಾಗೂ ವಿದ್ಯಾರ್ಥಿಗಳು ಈ ಕಾರ್ಯಕ್ರಮಕ್ಕೆ ಸಾಕ್ಷಿಗಳಾದರು.