• October 16, 2024

ಪೂಜ್ಯ ಡಾ ಡಿ ವೀರೇಂದ್ರ ಹೆಗ್ಗಡೆಯವರ ಕನಸಿನ ಕೂಸು ಶ್ರೀ ಧರ್ಮಸ್ಥಳ ಆಸ್ಪತ್ರೆ 11 ನೇ ವರ್ಷಕ್ಕೆ ಪಾದಾರ್ಪಣೆ, ಸನ್ಮಾನ ಕಾರ್ಯಕ್ರಮ

 ಪೂಜ್ಯ ಡಾ ಡಿ ವೀರೇಂದ್ರ ಹೆಗ್ಗಡೆಯವರ ಕನಸಿನ ಕೂಸು ಶ್ರೀ ಧರ್ಮಸ್ಥಳ ಆಸ್ಪತ್ರೆ 11 ನೇ ವರ್ಷಕ್ಕೆ ಪಾದಾರ್ಪಣೆ, ಸನ್ಮಾನ ಕಾರ್ಯಕ್ರಮ

 

ಧರ್ಮಸ್ಥಳ: ಪೂಜ್ಯ ಡಾ ಡಿ ವೀರೇಂದ್ರ ಹೆಗ್ಗಡೆಯವರ ಕನಸಿನ ಕೂಸು ಶ್ರೀ ಧರ್ಮಸ್ಥಳ ಆಸ್ಪತ್ರೆ ಇದೀಗ 11 ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ.

ಹಳ್ಳಿಯ ಜನತೆಯ ಆರೋಗ್ಯ ರಕ್ಷಣೆಯ ಕಾಲಜಿಯಿಂದ , ಗ್ರಾಮೀಣ ಜನತೆಯ ವೈದ್ಯಕೀಯ ಸೇವೆಗಾಗಿ 35 ಕೋಟಿಯ ಈ ಸುಸಜ್ಜಿತ ಆಸ್ಪತ್ರೆಯನ್ನು ಮೇ 1 2013 ರಲ್ಲಿ ಆರಂಭಿಸಿದ್ದು ಇದೀಗ 11ನೇ ವರ್ಣಕ್ಕೆ ಪಾದಾರ್ಪಣೆ ಗೈದಿದೆ.

ಪೂಜ್ಯ ಹೆಗ್ಗಡೆಯವರ ಮತ್ತು ಮಾತೃಶ್ರೀ ಹೇಮಾವತಿ ವಿ ಹೆಗ್ಗಡೆಯವರ ಆಶಯದಂತೆ, ಹರ್ಷೇಂದ್ರ ಕುಮಾರ್ ಅವರ ಮಾರ್ಗದರ್ಶನದಲ್ಲಿ ಸಾಮಾನ್ಯ ಆಸ್ಪತ್ರೆಯಾಗಿ ಆರಂಭಗೊಂಡು ಎಸ್ ಡಿಎಂ ಆಸ್ಪತ್ರೆ ಬಳಿಕ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಆರೋಗ್ಯ ಸೇವೆ ನೀಡುತ್ತ ಇದೀಗ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗುವ ಎಲ್ಲಾ ಅರ್ಹತರಯೊಂದಿಗೆ ಹಂತ ಹಂತವಾಗಿ ಬೆಳೆದು


ಜನಸಾಮಾನ್ಯರ ವಿಶ್ವಾಸಕ್ಕೆ ಪಾತ್ರವಾಗಿದೆ. ದಾನಪರಂಪರೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಹೆಸರುವಾಸಿಯಾಗಿದ್ದು, ಶ್ರೀ ಕ್ಷೇತ್ರದ ಚತುರ್ದಾನಗಳಲ್ಲಿ ಒಂದಾದ ಔಷಧ ದಾನವನ್ನು ಹೆಗ್ಗಡೆಯವರ ನಿರ್ದೇಶನದಂತೆ ಯಾವುದೇ ಆದಾಯವನ್ನು ಬಳಸದೆ ರೋಗಿಗಳಿಗೆ ಗರಿಷ್ಠ ಮಟ್ಟದ ವೈದ್ಯಕೀಯ ಸೇವೆಯನ್ನು ಗ್ರಾಮೀಣ ಜನತೆಗೆ ಕಡಿಮೆ ದರದಲ್ಲಿ ನೀಡುತ್ತಿದೆ.

24×7 ಸೇವೆಗಳು, ಪೂರಕ ವ್ಯವಸ್ಥೆಗಳು ಉಚಿತ ಆರೋಗ್ಯ ಶಿಬಿರಗಳು, ಪಾದಾಯಾತ್ರಿಗಳಿಗೆ ಉಚಿತ ವೈದ್ಯಕೀಯ ಸೇವೆಗಳು, ವಿಶೇಷ ವೈದ್ಯಕೀಯ ಸೇವೆಗಳು ಹೀಗೆ ಹಲವಾರು ಸೇವೆಗಳನ್ನು ನೀಡುತ್ತಾ ಬಂದಿದೆ ಈ ಆಸ್ಪತ್ರೆ.

ಕಾರ್ಯಕ್ರಮದಲ್ಲಿ ವ್ಯವಸ್ಥಾಪಕಾ ನಿರ್ದೇಶಕರಾದ ಎಂ. ಜನಾರ್ಧನ್, ವೈದ್ಯಕೀಯ ಅಧೀಕ್ಷಕರು ಡಾ|ದೇವೇಂದ್ರ ಕುಮಾರ್, ಮುಖ್ಯ ವೈದ್ಯಾಧಿಕಾರಿ ಡಾ| ಸಾತ್ವಿಕ್ ಜೈನ್ ಉಪಸ್ಥಿತರಿದ್ದರು.

ಇದೇ ವೇಳೆ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಚೈತ್ರೆಶ್ ಮತ್ತು ಕಾರ್ಯದರ್ಶಿಗಳಾದ ಗಣೇಶ್ ಬಿ ಹಾಗೂ ದೃಶ್ಯ ಮಾಧ್ಯಮದ ಅಧ್ಯಕ್ಷರಾದ ಬಾಲಕೃಷ್ಣ ಕಾರ್ಯದರ್ಶಿಯಾದ ಶರತ್ ಗೌಡ ಇವರಿಗೆ ಸನ್ಮಾನಿಸಲಾಯಿತು.

ನಾರಾಯಣ ಬಿ ನಿರೂಪಿಸಿದರು.

Related post

Leave a Reply

Your email address will not be published. Required fields are marked *

error: Content is protected !!