• September 13, 2024

ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ ‘ ದ ಮೂರನೇ ದಿನ : ಲೋಕಸಭೆಯಲ್ಲಿ ಪ್ಯಾಲೆಸ್ಟೈನಗೆ ಜಯಕಾರದ ಘೋಷಣೆ ಕೂಗುವ ಅಸಾದುದ್ದೀನ ಓವೈಸಿಯ ಸಂಸತ್‌ಸದಸ್ಯತ್ವ ರದ್ದುಗೊಳಿಸಿ – ವೈಶ್ಚಿಕ ಹಿಂದೂರಾಷ್ಟ್ರ ಮಹೋತ್ಸವದಲ್ಲಿ ಘೋಷಣೆ


ಲೋಕಸಭಾ ಸದಸ್ಯತ್ವ’ದ ಪ್ರಮಾಣ ವಚನ ಸ್ವೀಕರಿಸುವಾಗ ಜಯ ಭೀಮ, ಜಯಮೀಮ’,ಅಲ್ಲಾಹು ಅಕಬರ’ ಈ ಘೋಷಣೆಗಳೊಂದಿಗೆ ` ಜಯ ಫಿಲಿಸ್ತಾನ (ಪ್ಯಾಲೆಸ್ಟೈನ) ‘ ಎಂದೂ ಘೋಷಣೆ ಕೂಗಿದರು. ಭಾರತದ ಸಂವಿಧಾನದ ಅನುಚ್ಛೇದ ಕಲಂ 102 (A) ಪ್ರಕಾರ, ಸಂಸತ್ತಿನ ಯಾವುದೇ ಸದಸ್ಯರು ಬೇರೆ ಯಾವುದೇ ದೇಶವನ್ನು ಬೆಂಬಲಿಸುವುದು ಕಾನೂನುಬಾಹಿರವಾಗಿದ್ದು, ಅದರಂತೆ ಅವರ ಸದಸ್ಯತ್ವ ರದ್ದಾಗುತ್ತದೆ. ಭಾರತೀಯ ಸಂಸತ್ತಿನಲ್ಲಿ ಪ್ರಮಾಣ ವಚನ ಸ್ವೀಕರಿಸುವಾಗ, ಇತರ ದೇಶಕ್ಕೆ ನಿಷ್ಠೆಯನ್ನು ಹೊಂದಿರುವುದು ದೇಶದ್ರೋಹವಾಗಿದೆ. ಹಾಗೆಯೇ ಇದು ಭಾರತಕ್ಕೆ ಮಾಡಿದ ಅವಮಾನವಾಗಿದೆ. ಆದ್ದರಿಂದ ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದಲ್ಲಿ ಅಸದುದ್ದೀನ ಓವೈಸಿ ಅವರನ್ನು ತೀವ್ರವಾಗಿ ಖಂಡಿಸಿದ್ದಲ್ಲದೇ ಲೋಕಸಭೆ ಸಭಾಪತಿ ಮತ್ತು ಕೇಂದ್ರೀಯ ಸಂಸದೀಯ ವ್ಯವಹಾರಗಳ ಸಚಿವರಿಗೆ ಅಸದುದ್ದೀನ ಓವೈಸಿಯನ್ನು ಸಂಸತ್ತಿನ ಸದಸ್ಯತ್ವದಿಂದ ರದ್ದುಗೊಳಿಸುವ ಬೇಡಿಕೆ ಇಡಲು ಠರಾವು ಮಾಡಲಾಯಿತು. ಇಂದು ‘ಜೈ ಪ್ಯಾಲೆಸ್ಟೈನ್’ ಎಂದು ಹೇಳುವವರು ನಾಳೆ ‘ಜೈ ಹಮಾಸ್’, ಮತ್ತು ಅದಕ್ಕಿಂತ ಮುಂದೆ ಹೋಗಿ ‘ಜೈ ಪಾಕಿಸ್ತಾನ’ ಎಂದು ಹೇಳಲೂ ಹಿಂದೆಮುಂದೆ ನೋಡುವುದಿಲ್ಲ. ಆದುದರಿಂದ ಓವೈಸಿ ಅವರ ಮೇಲೆ ಚುನಾವಣೆಗೆ ಸ್ಪರ್ಧಿಸಲು ಶಾಶ್ವತ ನಿಷೇಧ ಹೇರಬೇಕು, ಎಂದೂ ಈ ಸಂದರ್ಭದಲ್ಲಿ ಆಗ್ರಹಿಸಲಾಯಿತು.

ಇದನ್ನು ‘ಹರ ಹರ ಮಹಾದೇವ’ ಜಯಘೋಷದೊಂದಿಗೆ ಎಲ್ಲ ಹಿಂದುತ್ವನಿಷ್ಠರು ಬೆಂಬಲಿಸಿದರು. ಇದರೊಂದಿಗೆ ಲೋಕಸಭೆಯಲ್ಲಿ ಲೋಕಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸುವಾಗ ಭಾಜಪ ಸಂಸದ ಶ್ರೀ. ಛತ್ರಪಾಲ ಗಂಗವಾರ ಇವರು ‘ಜಯ ಹಿಂದೂ ರಾಷ್ಟ್ರ, ಜಯ ಭಾರತ್’ ಎಂದು ಘೋಷಣೆ ಕೂಗಿದರು. ‘ಈ ಸಕಾರಾತ್ಮಕ ಕೃತಿಯನ್ನು ನಾವು ಸ್ವಾಗತಿಸುತ್ತೇವೆ’ ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ರಮೇಶ ಶಿಂದೆ ಅವರು ಈ ಸಂದರ್ಭದಲ್ಲಿ ಹೇಳಿದರು.

ದೇವಸ್ಥಾನಗಳ ಸ್ವಚ್ಛತೆಯ ಮೂಲಕ ಹೊಸ ಯುವಕರು ಧರ್ಮಕಾರ್ಯದೊಂದಿಗೆ ಜೋಡಿಸಲ್ಪಟ್ಟರು!
ಚಕ್ರವರ್ತಿ ಸೂಲಿಬೆಲೆ, ಸಂಸ್ಥಾಪಕ ಅಧ್ಯಕ್ಷರು, ಯುವಾ ಬ್ರಿಗೇಡ್, ಬೆಂಗಳೂರು

ಯುವಕರನ್ನು ಸೆಳೆಯಲು ಕರ್ನಾಟಕದ ದೇವಸ್ಥಾನದ ಬಳಿ ಇರುವ ಕೆರೆಗಳನ್ನು ಸ್ವಚ್ಛಗೊಳಿಸುವ ಅಭಿಯಾನವನ್ನು ನಾವು ಪ್ರಾರಂಭಿಸಿದೆವು. ಇದರಡಿಯಲ್ಲಿ ಸುಮಾರು 250 ಕ್ಕೂ ಹೆಚ್ಚು ಕೆರೆಗಳನ್ನು ಸ್ವಚ್ಛಗೊಳಿಸಿದೆವು. ಇದರಿಂದ ದೇವಸ್ಥಾನಕ್ಕೆ ಬರುವ ಭಕ್ತರ ಶ್ರದ್ಧೆ ಹೆಚ್ಚಾಯಿತು. ಮುಂದಿನ ಹಂತದಲ್ಲಿ ನಾವು ನದಿಗಳ ಸ್ವಚ್ಛತಾ ಅಭಿಯಾನವನ್ನು ಕೈಗೆತ್ತಿಕೊಂಡೆವು. ಈ ಅಭಿಯಾನದ ಮೂಲಕ ಕರ್ನಾಟಕದಲ್ಲಿರುವ 9-10 ನದಿಗಳನ್ನು ಸ್ವಚ್ಛತೆ ಮಾಡಲಾಯಿತು. ನದಿಗಳನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ ಸ್ಥಳೀಯ ಹಿಂದೂಗಳು ಭಾಗವಹಿಸಿದ್ದರು. ನದಿಗಳನ್ನು ಸ್ವಚ್ಛಗೊಳಿಸಿದ ನಂತರ ಅಲ್ಲಿ ಆರತಿಯನ್ನು ಪ್ರಾರಂಭಿಸಲಾಯಿತು. ಪ್ರಸ್ತುತ, ಕರ್ನಾಟಕದ 5-6 ನದಿಗಳ ಸ್ಥಳಗಳಲ್ಲಿ ಪ್ರತಿ ವರ್ಷ ಆರತಿ ನಡೆಯುತ್ತಿದೆ. ಇದಾದ ನಂತರ ನಾವು ದೇವಸ್ಥಾನಗಳ ಸ್ವಚ್ಛತೆಯನ್ನು ಆರಂಭಿಸಿದೆವು. ದೇವಸ್ಥಾನಗಳ ಸ್ವಚ್ಛತೆಯ ಮೂಲಕ ಅನೇಕ ಹೊಸ ಯುವಕರು ಧರ್ಮಕಾರ್ಯದೊಂದಿಗೆ ಜೋಡಿಸಲ್ಪಟ್ಟರು. ಈ ಅಭಿಯಾನದ ಮೂಲಕವೂ ಅನೇಕ ಯುವಕರು ಧರ್ಮಕಾರ್ಯದೊಂದಿಗೆ ಜೋಡಿಸಲ್ಪಟ್ಟರು’, ಎಂದು ಬೆಂಗಳೂರಿನ ಯುವ ಬ್ರಿಗೇಡ್ ಸಂಸ್ಥಾಪಕರಾದ ಶ್ರೀ. ಚಕ್ರವರ್ತಿ ಸೂಲಿಬೆಲೆಯವರು ಹೇಳಿದರು. ಅವರು ಗೋವಾದ ಫೋಂಡಾದಲ್ಲಿ ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿದ್ದ ‘ಹಿಂದುತ್ವದ ಕಾರ್ಯದಲ್ಲಿ ಯುವಕರ ಸಹಭಾಗಿತ್ವ’ ಈ ವಿಷಯದ ಕುರಿತು ಮಾತನಾಡುತ್ತಿದ್ದರು.

ಇಂದು ಎಲ್ಲರೂ ಕಥಾನಕ ಯುದ್ಧದಲ್ಲಿ ಭಾಗವಹಿಸಬಹುದು ! – ಶ್ರೀ. ಸಂತೋಷ ಕೆಂಚಾಂಬ , ಸಂಸ್ಥಾಪಕರು , ರಾಷ್ಟ್ರ ಧರ್ಮ ಸಂಘಟನೆ, ಬೆಂಗಳೂರು

‘ನೆರೆಟಿವ್‌ ವಾರ್’ (ಸುಳ್ಳು ಕಥೆಗಳನ್ನು ಹರಡುವ ಯುದ್ಧ) ಇದು ಹೊಸದೇನಲ್ಲ. ೧೮ ನೇ ಶತಮಾನದಲ್ಲಿಯೂ ಭಾರತದ ಬಗ್ಗೆ ತಪ್ಪು ಕಲ್ಪನೆಗಳನ್ನು ಇತರ ದೇಶಗಳಲ್ಲಿ ಹರಡಲಾಗಿತ್ತು. ಇಂದು ‘ವಾಟ್ಸ್ ಆಪ್’ ಜಗತ್ತಿನ ಅತಿ ದೊಡ್ಡ ‘ವಿಶ್ವವಿದ್ಯಾಲಯ’ವಾಗಿದೆ. ಇಂದು ಜಗತ್ತಿನ ಮುಖ್ಯ ಪ್ರಸಾರಮಾಧ್ಯಮಗಳ ಪ್ರಾಬಲ್ಯ ಇಲ್ಲದಂತಾಗಿ, ಸಾಮಾಜಿಕ ಮಾಧ್ಯಮಗಳ ಪ್ರಾಬಲ್ಯ ಹೆಚ್ಚಾಗಿದೆ. ಇಂದು ಸಾಮಾನ್ಯ ಜನರು ಹೋರಾಟ, ಘಟನೆ, ಯಾವುದೇ ಒಳ್ಳೆಯ ಕೆಟ್ಟ ಪ್ರಸಂಗಗಳಲ್ಲಿ ಮೊದಲು ಮೊಬೈಲ್‌ಅನ್ನು ಹೊರಗೆ ತೆಗೆಯುತ್ತಾರೆ. ಇಂದು ಎಲ್ಲರೂ ಪತ್ರಕರ್ತರಾಗಿದ್ದಾರೆ. ‘ನೆರೆಟಿವ್ ವಾರ್’ ಬಹಳ ಮಹತ್ವದ್ದಾಗಿದೆ. ಇಂದು ಎಲ್ಲರೂ ಈ ನೆರೆಟಿವ್‌ ವಾರ್.ದಲ್ಲಿ ಖಂಡಿತವಾಗಿಯೂ ಪಾಲ್ಗೊಳ್ಳಬಹುದು ಎಂಬ ಬೆಂಗಳೂರಿನ ‘ರಾಷ್ಟ್ರ ಧರ್ಮ ಸಂಘಟನೆಯ ಸಂಸ್ಥಾಪಕರಾದ ಶ್ರೀ. ಸಂತೋಷ ಕೆಂಚಾಂಬ ಇವರು ಪ್ರತಿಪಾದಿಸಿದರು. ಅವರು ವೈಶ್ವಿಕ ಹಿಂದೂ ಮಹೋತ್ಸವದಲ್ಲಿ ‘ಸಾಮಾಜಿಕ ಮಾಧ್ಯಮಗಳಲ್ಲಿ ಹಿಂದೂವಿರೋಧಿ ಪ್ರಸಾರವನ್ನು ಎದುರಿಸುವುದು ಹೇಗೆ?’ ಈ ಕುರಿತು ಅವರು ಮಾತನಾಡುತ್ತಿದ್ದರು.

ಮುಸಲ್ಮಾನರ ಮೇಲೆ ಅನ್ಯಾಯವಾಗುತ್ತಿದೆಯೆಂದು ಕಾಂಗ್ರೆಸ್ ಸುಳ್ಳು ಕಥೆ ಕಟ್ಟಿ ಹಬ್ಬಿಸಿತು ! – ಡಾ.ಎಸ್.ಆರ್. ಲೀಲಾ, ಕರ್ನಾಟಕ ವಿಧಾನ ಪರಿಷತ್ತಿನ ಮಾಜಿ ಸದಸ್ಯೆ, ಬೆಂಗಳೂರು
ಸದ್ಯ ಭಾರತದಲ್ಲಿ ಸ್ವಾತಂತ್ರ್ಯವಿಲ್ಲ, ಎನ್ನುವ ನರೆಟಿವ್ ವನ್ನು ಹರಡಲಾಗುತ್ತಿದೆ. ಕಾಂಗ್ರೆಸ್ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟಿತು’, ಎನ್ನುವ ನರೆಟಿವ್ ವನ್ನು ಮೊದಲಿನಿಂದಲೂ ರೂಪಿಸಲಾಗಿದೆ. ಇದು ಸಂಪೂರ್ಣ ತಪ್ಪಾಗಿದೆ. ಕಾಂಗ್ರೆಸ್ ನಮಗೆ ಸ್ವಾತಂತ್ರ್ಯ ದೊರಕಿಸಿಕೊಡಲಿಲ್ಲ, ಬದಲಾಗಿ ದೇಶದ ವಿಭಜನೆಯನ್ನು ಮಾಡಿದೆ. ಕಾಂಗ್ರೆಸ ಮತ್ತು ಮುಸ್ಲಿಂ ಲೀಗ ಭಾರತದ ವಿಭಜನೆಗೆ ಹೊಣೆಯಾಗಿದೆ. ಅವರು ಹಿಂದೂಗಳ ಹತ್ಯೆಗಳಾಗುವಂತೆ ಮಾಡಿದರು. ಭಾರತದಲ್ಲಿ ಮುಸಲ್ಮಾನರ ಮೇಲೆ ಅನ್ಯಾಯವಾಗುತ್ತಿದೆ, ಎಂದು ಸುಳ್ಳು ನರೆಟಿವ್ ವನ್ನು ಕಾಂಗ್ರೆಸ್ ಹಬ್ಬಿಸಿದೆ. ಈ ಅಪಪ್ರಚಾರದ ವಿರುದ್ಧ ಪ್ರತಿದಾಳಿ ನಡೆಸುವ ‘ನರೆಟಿವ್’ಅನ್ನು ನಮಗೆ ಸಿದ್ಧಪಡಿಸಬೇಕಾಗಬಹುದು ಎಂದು ಕರ್ನಾಟಕ ವಿಧಾನ ಪರಿಷತ್ತಿನ ಮಾಜಿ ಸದಸ್ಯೆ ಮತ್ತು ಲೇಖಕಿ ಡಾ. ಎಸ್.ಆರ್. ಲೀಲಾ ಇವರು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಅಧಿವೇಶನದ ನೇರ ಪ್ರಸಾರ ಹಿಂದೂ ಜನಜಾಗೃತಿ ಸಮಿತಿಯ ಸಂಕೇತಸ್ಥಳ HinduJagruti.org ಮೂಲಕ ಹಾಗೆಯೇ HinduJagruti ಈ `ಯು-ಟ್ಯೂಬ್’ ಚಾನೆಲ ಮೂಲಕವೂ ಮಾಡಲಾಗುತ್ತಿದೆ.

Related post

Leave a Reply

Your email address will not be published. Required fields are marked *

error: Content is protected !!