• October 16, 2024

ಮಾಂಕಾಲ ತುಳು ಕನ್ನಡ ಚಲನಚಿತ್ರ ಬಿಡುಗಡೆಗೆ ಸಿದ್ದ

 ಮಾಂಕಾಲ ತುಳು ಕನ್ನಡ ಚಲನಚಿತ್ರ ಬಿಡುಗಡೆಗೆ ಸಿದ್ದ

 

ಮಹಾಲಕ್ಷ್ಮಿ ಪ್ರೊಡಕ್ಷನ್ ನ ಪ್ರಥಮ ಚಲನಚಿತ್ರ ಮಾಂಕಾಲ ಸತತವಾಗಿ 3 ವರ್ಷಗಳಿಂದ ಚಿತ್ರೀಕರಣ ಮುಗಿಸಿ ತೆರೆಗೆ ಬರಲು ಸಜ್ಜಾಗಿದೆ
ಸಂಜಯ್ ದಯಾನಂದ ಕಥೆ ಚಿತ್ರಕತೆ ನಿರ್ದೇಶನವಿರುವ ಈ ಐತಿಹಾಸಿಕ ಕಥಾಹಂದರವು ತುಳುನಾಡಿನ ಸಾಮಾಜಿಕ ಹಾಗೂ ಸಾಂಸ್ಕೃತಿಕ ಲೋಕದ ಅನಾವರಣ ಮಾಡಲಿದೆ ತುಳುನಾಡಿನ ದೈವಗಳು ಹಾಗೂ ಸಂಸ್ಕೃತಿಗೆ ಧಕ್ಕೆಯಾಗದಂತೆ ಸಾಮಾಜಿಕ ಜೀವನದ ತುಳುವರ ಏಳು ಬೀಳಿನ ಮಜಲುಗಳನ್ನು ಚಿತ್ರೀಸಿದೆ ಪೂರ್ಣಪ್ರಮಾಣದಲ್ಲಿ ಯುವ ಕಲಾವಿದರ ಸೇರ್ಪಡೆ ಹಾಗೂ ಭಾಗವಹಿಸುವಿಕೆ ಮುಂಬೈ ಹಾಗೂ ಮಹಾರಾಷ್ಟ್ರ ಭಾಗದ ಕಲಾವಿದರ ಸಮಾಗಮದಿಂದ ಚಿತ್ರಕತೆ ಅತ್ಯುತ್ತಮವಾಗಿ ಮೂಡಿ ಬಂದಿದೆ ಬಹುಪಾಲು ಚಿತ್ರೀಕರಣ ಮಹಾರಾಷ್ಟದ ರತ್ನಾಗಿರಿ ಹಾಗೂ ಮಂಗಳೂರು ಮಡಿಕೇರಿ ಭಾಗದಲ್ಲಿ ನಡೆದಿದೆ ನಾಯಕ ನಟರಾಗಿ ಸಂಜಯ್ ದಯಾನಂದ್ ಭರತ ರಾಜ್ ಬೆಂಗಳೂರು ನಾಯಕಿಯಾಗಿ ಮುಂಬೈನ ಸೋನಲ್ ಜಾಧವ ಹಾಗೂ ವರ್ಷಾ ನಾಯರ್ ಕಾಣಿಸಿಕೊಂಡಿದ್ದಾರೆ.


ಇನ್ನೊಂದು ವಿಶೇಷವೇನೆಂದರೆ ಚಿತ್ರೀಕರಣ ಸಂದರ್ಭದಲ್ಲಿ ಅನಿವಾರ್ಯ ಕಾರಣಗಳಿಂದ ಅರ್ಧಕ್ಕೆ ಕೈ ಬಿಟ್ಟ ಕಲಾವಿದರನ್ನು ಗ್ರಾಫಿಕ್ಸ್ ಹಾಗೂ ಅನಿಮೇಶನ್ ಮೂಲಕ ತೆರೆಯ ಮೇಲೆ ತರಲು ಪ್ರಯತ್ನಿಸಲಾಗಿದೆ ಈ ಪ್ರಕ್ರಿಯೆಗಳು ಯಶಸ್ವಿಯಾಗಿ 2 ವರ್ಷ ಕಾಲ ಸತತವಾಗಿ ನಡೆದಿದ್ದು ಇಂತಹ ಪ್ರಯತ್ನ ಕನ್ನಡ ಚಿತ್ರರಂಗದಲ್ಲಿ ಇದೇ ಮೊದಲು
ಬಹುಪಾಲು ತಂತ್ರಜ್ಞರು ತುಳುವರು ಹಾಗೂ ಕೇರಳ ಮೂಲದವರಾಗಿದ್ದು ವಿನೂತನವಾಗಿ ಚಿತ್ರೀಕರಣ ನಡೆದಿದೆ

ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮುಹೂರ್ತ ನಡೆದು 5 ವರ್ಷದ ನಂತರ ಇದೀಗ ಬಿಡುಗಡೆಗೆ ತಯಾರಾಗಿ ಸಿಬಿಎಫಸಿ ಪ್ರಕ್ರಿಯೆಗಳು ಮುಗಿದಿದ್ದು ಬಿಡುಗಡೆ ದಿನಾಂಕ ಇನ್ನಷ್ಟೇ ನಿಗದಿಯಾಗಬೇಕಿದೆ
ಛಾಯಾಗ್ರಾಹಕರಾಗಿ ಪುಣೆಯ ನೀಲೇಶ್ ಕಾರೆಕರ್ ಕಾರ್ಯ ನಿರ್ವಯಿಸಿದ್ದು ಗ್ರಾಫಿಕ್ಸ್ ಹಾಗೂ ವಿ ಎಫ್ ಎಕ್ಸ್ ಅನಿಮೋ ಪ್ರಕ್ರಿಯೆಗಳು ಮುಂಬೈ ನ ಬೋರಿವಿಲಿಯ ಸ್ಟುಡಿಯೋವೊಂದರಲ್ಲಿ ನಡೆದಿದೆ 3ಡಿ ಮ್ಯಾಕ್ಸ್ ಹಾಗೂ 3ಡಿ ಮಾಯಾ ಮೂಲಕ ಬಹುತೇಕ ಸೀನ್ ಗಳನ್ನು ಡೆವಲಪ್ ಮಾಡಲಾಗಿದೆ

ಕಲ್ಪನಾ ರವರ ಸಂಗೀತ ಹಾಗೂ ಚೇತನ್ ರವರ ಆರ್ಟ್ ಡೈರೆಕ್ಷನ್ ವಿಭಿನ್ನ ಅನುಭವ ನೀಡುವ ಕುತೂಹಲಕಾರಿ ದೃಶ್ಯಗಳನ್ನು ಪ್ರೇಕ್ಷಕರಿಗೆ ನೀಡಲಿದೆ
ಹೊಸ ತಂಡದ ಹೊಸ ಪ್ರಯತ್ನ ಕನ್ನಡ ತುಳು ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲಾಗಲು ಹೊರಟಿದೆ ಈ ನಮ್ಮ ಚಿತ್ರಕ್ಕೆ ಹರಸಿ ಹಾರೈಸಿ ಕನ್ನಡ ಚಿತ್ರಗಳನ್ನು ಥೀಯೇಟರ್ ನಲ್ಲೆ ನೋಡಿ ಆನಂದಿಸಿ ಚಿತ್ರರಂಗ ಉಳಿಸಿ ಬೆಳೆಸಿ ಹೊಸಬರಿಗೆ ಅವಕಾಶ ಕೊಡಿ

Related post

Leave a Reply

Your email address will not be published. Required fields are marked *

error: Content is protected !!