• September 13, 2024

ಬೆಳ್ತಂಗಡಿ: ತಾಲೂಕು ಆಡಳಿತ ಹಾಗೂ ಅಬಕಾರಿ ಇಲಾಖೆಯವರು ವ್ಯಾಪಕ ಭ್ರಷ್ಟಾಚಾರ ನಡೆಸಿದ್ದಾರೆ ಎಂಬ ಆರೋಪ: ಸುದ್ದಿಗೋಷ್ಠಿ

 ಬೆಳ್ತಂಗಡಿ: ತಾಲೂಕು ಆಡಳಿತ ಹಾಗೂ ಅಬಕಾರಿ ಇಲಾಖೆಯವರು ವ್ಯಾಪಕ ಭ್ರಷ್ಟಾಚಾರ ನಡೆಸಿದ್ದಾರೆ ಎಂಬ ಆರೋಪ: ಸುದ್ದಿಗೋಷ್ಠಿ

ಬೆಳ್ತಂಗಡಿ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರದಿಂದ ಮೂಡಾ, ವಾಲ್ಮೀಕಿ ನಿಗಮಗಳಲ್ಲಿ ಅವ್ಯವಹಾರ ನಡೆದಂತೆ ಬೆಳ್ತಂಗಡಿ ತಾಲೂಕಿನಲ್ಲೂ ತಾಲೂಕು ಆಡಳಿತ ಹಾಗೂ ಅಬಕಾರಿ ಇಲಾಖೆಯವರ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ಮಂಜುನಾಥ್ ಸಾಲ್ಯಾನ್ ತೆಕ್ಕಾರ್ ಹೇಳಿದರು.

ಅವರು ಇಂದು ಅಂಬೇಡ್ಕರ್ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ತಾಲೂಕುಕಾರ್ಯನಿರ್ವಹಣಾಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ ಗ್ಯಾರಂಟಿ ಫಲಾನುಭವಿಗಳ ಸಮಾವೇಶದಲ್ಲಿ 3200 ಜನ ಭಾಗವಹಿಸಿದ್ದರು. ಈ ಕಾರ್ಯಕ್ರಮ 2014 ಮಾರ್ಚ್ 9ರಂದು ಗುರುವಾಯನಕೆರೆಯ ಕಿನ್ಯಮ್ಮ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದು, ಈ ಕಾರ್ಯಕ್ರಮಕ್ಕೆ ತಾಲೂಕು ಆಡಳಿತ ಮಾಡಿದ ಖರ್ಚಿನ ವಿವರ ತಿಳಿಸಿ, ಈ ಎಲ್ಲಾ ಖರ್ಚುಗಳ ಪಾವತಿ ಯಲ್ಲಿ ನಿಯಮಗಳನ್ನು ಗಾಳಿಗೆ ತೂರಲಾಗಿದೆ ಸರ್ಕಾರವೆ ರೂಪಿಸಿದ ನಿಯಮಗಳನ್ನು ಸರ್ಕಾರವೇ ಉಲ್ಲಂಘಿಸಿದೆ ಆರ್ ಟಿ ಒ ಕಾಯಿದೆ ಪ್ರಕಾರ ಶಾಲಾ ಬಸ್ ಅನ್ನು ಬಾಡಿಗೆಗೆ ಕೊಡುವಂತಿಲ್ಲ ಇಲ್ಲಿ ಆರ್ ಟಿ ಒ ಶಾಲಾ ಬಸ್ ಗಳ ಮೇಲೆ ಕ್ರಮ ತೆಗೆದುಕೊಳ್ಳುವುದು ಅಥವಾ ತಹಶಿಲ್ದಾರರ ಕ್ರಮ ಕೈಗೊಳ್ಳುವುದಾ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ ಎಂದು ಹೇಳಿದರು.


ಗುರುವಾಯನಕೆರೆ ಕಿನ್ಯಮ್ಮ ಸಭಾಭವನದ ಆಸನ ಸಂಖ್ಯೆ ಗರಿಷ್ಠ 2000 ಇದ್ದು, ತಾಲೂಕು ಆಡಳಿತ ನೀಡಿದ ಸಂಖ್ಯೆ ವ್ಯಯಿಸಿದ ಖರ್ಚಿನಲ್ಲಿರುವ ಸಂಖ್ಯೆ ಮೊಬಲಗು ಯಾವುದು ಹೊಂದಾಣಿಕೆಯಾಗುತ್ತಿಲ್ಲ. ಈ ಎಲ್ಲಾ ಅವ್ಯವಹಾರ ಗಮನಿಸಿದಾಗ ಸರ್ಕಾರದ ಮೂಡಾ ವಾಲ್ಮೀಕಿ ಹಗರಣದಂತೆ ರಾಜ್ಯದ 224 ವಿಧಾನಸಭೆ ಕ್ಷೇತ್ರಗಳಲ್ಲೂ ಗ್ಯಾರೆಂಟಿ ಫಲಾನುಭವಿಗಳ ಸಮಾವೇಶದ ಹೆಸರಿನಲ್ಲಿ ಸರ್ಕಾರದ ಆಡಳಿತ ವ್ಯವಸ್ಥೆ ಲೂಟಿ ಹೊಡೆದಿದ್ದು ಸ್ಪಷ್ಟವಾಗಿ ಗೋಚರವಾಗುತ್ತಿದೆ. ಬೆಳ್ತಂಗಡಿಯ ಸಮಾವೇಶದ ಈ ಅವ್ಯವಹಾರದ ಕುರಿತು ತಹಶೀಲ್ದಾರರ ವಿರುದ್ಧ ಜಿಲ್ಲಾಧಿಕಾರಿಗಳಿಗೆ & ಲೋಕಾಯುಕ್ತರಿಗೆ ದೂರು ನೀಡಲಾಗುವುದು, ತಾಲೂಕಿನ ಅಬಕಾರಿ ಇಲಾಖೆಯಲ್ಲೂ ಅವ್ಯಾಹಿತವಾಗಿ, ನಿಯಮಬಾಹಿರವಾಗಿ ಮದ್ಯಮಾರಾಟ ದಂಧೆ ರಾಜಾರೋಷವಾಗಿ ನಡೆಯುತ್ತಿದೆ. ಈ ಅನೈತಿಕ ವ್ಯವಹಾರದಿಂದ ಅಧಿಕಾರಿಗಳ ಮೂಲಕ ಸರ್ಕಾರದ ಬೆಂಬಲದ ಮೂಲಕ ಕೆಲವು ಪುಡಾರಿಗಳು ಹಪ್ತಾ ವಸೂಲು ಮಾಡುತ್ತಿದ್ದಾರೆ,
ಸಿ.ಎಲ್ 7 ಸನ್ನದ್ದಿನಲ್ಲಿ ಕರ್ನಾಟಕ ಅಬಕಾರಿ ಕಾಯ್ದೆ ನಿಯಮದಡಿ ಕೊಠಡಿಯಲ್ಲಿ ತಂಗದೇ ಇರುವ ಗ್ರಾಹಕರಿಗೆ ಮದ್ಯವನ್ನು ಹೊರಗಡೆ ನೀಡುವ ಅವಕಾಶವಿರುವುದಿಲ್ಲ.ಬೆಳ್ತಂಗಡಿ ಅಬಕಾರಿ ನಿರೀಕ್ಷಕರ ಕಚೇರಿಯ ಅಂಕಿಅಂಶದ ಪ್ರಕಾರ ಹೊಟೆಲ್ ವೆಲ್ ವ್ಯೂ ಬೆಳ್ತಂಗಡಿ, ಹಳ್ಳಿಮನೆ ಉಜಿರೆ ಈ ಎರಡು ಪರವಾನಿಗೆ ಹೊಂದಿದ ಸಂಸ್ಥೆಗಳ ಕೊಠಡಿಗಳಲ್ಲಿ ತಂಗಿರುವ ಗ್ರಾಹಕರ ಸಂಖ್ಯೆಗೂ ಮಾರಾಟವಾದ ಮದ್ಯದ ವಿವರವನ್ನು ಗಮನಿಸಿದಾಗ ಬೆಚ್ಚಿ ಬೀಳಿಸುವ ಮಾಹಿತಿಗಳು ಕಂಡು ಬರುತ್ತಿವೆ.

ಅಬಕಾರಿ ಇಲಾಖೆಯ ಷರತ್ತುಗಳನ್ನು ಮೀರಿ ಮದ್ಯ ಮಾರಾಟ ಮಾಡಿ ಅಬಕಾರಿ ಕಾಯಿದೆಯನ್ನು ಉಲ್ಲಂಘನೆ ಮಾಡಿದ ಲೈಸೆನ್ಸ್‌ದಾರರ ವಿರುದ್ಧ ಅಬಕಾರಿ ಇಲಾಖೆ ಯವುದೇ ಕ್ರಮ ಕೈಗೊಳ್ಳದೆ ಇರುವ ಕುರಿತು ಅಬಕಾರಿ ಆಯುಕ್ತರು ಹಾಗೂ ಲೋಕಾಯುಕ್ತಕ್ಕೆ ದೂರು ನೀಡಲಗುವುದು.

ಮೇಲಿನ ಎರಡೂ ಪ್ರಕರಣಗಳನ್ನು ನಾವು ಗಂಭೀರವಾಗಿ ಪರಿಗಣಿಸಿ ಕಾನೂ ವ್ಯಾಪ್ತಿಯಲ್ಲಿ ಹೋರಾಟ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು

Related post

Leave a Reply

Your email address will not be published. Required fields are marked *

error: Content is protected !!