• October 16, 2024

ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ರಕ್ಷಾ ಬಂಧನ ಆಚರಣೆ

 ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ರಕ್ಷಾ ಬಂಧನ ಆಚರಣೆ

 


ಸನಾತನ ಧರ್ಮದಲ್ಲಿ ರಕ್ಷಾ ಬಂಧನ ಹಬ್ಬವನ್ನು ಶ್ರಾವಣ ಹುಣ್ಣಿಮೆಯಂದು ಆಚರಿಸಲಾಗುತ್ತದೆ. ಈ ದಿನ ಸಹೋದರಿಯರು ತಮ್ಮ ಸಹೋದರರಿಗೆ ಆರತಿ ಬೆಳಗಿಸಿ, ಪ್ರೀತಿಯ ಪ್ರತಿಕವೆಂದು ರಾಖಿಯನ್ನು ಕಟ್ಟುತ್ತಾರೆ. ಸಹೋದರರು ಏನಾದರೂ ಒಂದು ವಸ್ತುವನ್ನು ಉಡುಗೊರೆಯಾಗಿ ನೀಡಿ ಆಶೀರ್ವಾದ ನೀಡುತ್ತಾರೆ. ಇದರ ಹಿಂದೆ ಸಹೋದರನ ಏಳಿಗೆಯಾಗಬೇಕು ಮತ್ತು ಸಹೋದರನು ಸಹೋದರಿಯ ರಕ್ಷಣೆಯನ್ನು ಮಾಡಬೇಕು ಎನ್ನುವ ಉದ್ದೇಶವಿರುತ್ತದೆ.

ಇಬ್ಬರಲ್ಲಿನ ಕೊಡುಕೊಳ್ಳುವ ಲೆಕ್ಕಾಚಾರ ಕಡಿಮೆಯಾಗಿ ಈಶ್ವರನತ್ತ ಪ್ರಯಾಣಿಸುವ ಅವಕಾಶವನ್ನು ಒದಗಿಸುತ್ತದೆ. ಹಾಗೂ ಈ ಹಬ್ಬವು ಇಬ್ಬಾಗವಾಗಿರುವ ಸಮಾಜವನ್ನು ಒಗ್ಗೂಡಿಸುವ ಒಂದು ಸಂಧಿಯಾಗಿದೆ. ಇದರಿಂದ ಕುಟುಂಬದಲ್ಲಿರುವ ಕಲಹ ಶಾಂತವಾಗುತ್ತದೆ. ಮನಸ್ತಾಪ ದೂರವಾಗುತ್ತದೆ ಮತ್ತು ಸಾಮೂಹಿಕ ಸಂಕಲ್ಪ ಶಕ್ತಿ ಕಾರ್ಯಗತವಾಗುತ್ತದೆ. ಈ ಉದ್ದೇಶದಿಂದ ಹಿಂದೂ ಜನಜಾಗೃತಿ ಸಮಿತಿಯು ಸಹೋದರರಿಗೆ ರಾಖಿಯನ್ನು ಕಟ್ಟುವ ಮುಖಾಂತರ ರಕ್ಷಾ ಬಂಧನ ಹಬ್ಬವನ್ನು ಆಚರಿಸಲಾಯಿತು.

ಈ ನಿಟ್ಟಿನಲ್ಲಿ ಮಾನ್ಯ ಶಾಸಕರು ಶ್ರೀ ಹರೀಶ್ ಪೂಂಜಾರವರಿಗೆ,ಪತ್ರಕರ್ತರಿಗೆ, ಹಿಂದುತ್ವನಿಷ್ಠರಿಗೆ ಹಾಗೂ ಧರ್ಮಪ್ರೇಮಿಗಳಿಗೆ ರಾಖಿ ಕಟ್ಟುವ ಮೂಲಕ ರಕ್ಷಾಬಂಧನದ ಶುಭಾಶಯವನ್ನು ಹೇಳಲಾಯಿತು.

Related post

Leave a Reply

Your email address will not be published. Required fields are marked *

error: Content is protected !!