ಭಾರತೀಯ ಮಜ್ದೂರ್ ಸಂಘ ಕರ್ನಾಟಕ ರಾಜ್ಯ ಅಭ್ಯಾಸ ವರ್ಗಕ್ಕೆ ಸಂಸದರಾದ ಬ್ರಿಜೇಶ್ ಚೌಟ ಭೇಟಿ
ಬೆಳ್ತಂಗಡಿ : ಹೋಟೆಲ್ ಆದಿತ್ಯ ವ್ಯೂ ನಿಡ್ಲೆ ಧರ್ಮಸ್ಥಳದಲ್ಲಿ ಆಗಸ್ಟ್ 11 ರಂದು ನಡೆದ ಭಾರತೀಯ ಮಜ್ದೂರ್ ಸಂಘ ಕರ್ನಾಟಕ ರಾಜ್ಯ ಅಭ್ಯಾಸ ವರ್ಗಕ್ಕೆ ಮಂಗಳೂರು ಲೋಕಸಭಾ ಸಂಸದರಾದ ಬ್ರಿಜೇಶ್ ಚೌಟ ಹಾಗೂ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜಾ ರವರು ಭೇಟಿ ನೀಡಿ ಮಾತುಕತೆ ನಡೆಸಿದರು.
ಈ ಸಂದರ್ಭದಲ್ಲಿ ಅವರನ್ನು ಮಜ್ದೂರು ಸಂಘದ ವತಿಯಿಂದ ಅಭಿನಂದಿಸಿ ಗೌರವಿಸಲಾಯಿತು.