• September 21, 2024

ಕೊಳಂಬೆ ಪ್ರದೇಶದ ಕಳೆದ 5 ವರ್ಷಗಳ ಬೆಳವಣಿಗೆಯ ವೀಕ್ಷಣೆ: ಮೃತ್ಯುಂಜಯ ನದಿಗೆ ಹಾಲು ಸಮರ್ಪಣೆ: ವಯನಾಡು ದುರಂತದಲ್ಲಿ ಅಗಲಿದವರಿಗೆ ಶ್ರದ್ದಾಂಜಲಿ ಕಾರ್ಯಕ್ರಮ

 ಕೊಳಂಬೆ ಪ್ರದೇಶದ ಕಳೆದ 5 ವರ್ಷಗಳ ಬೆಳವಣಿಗೆಯ ವೀಕ್ಷಣೆ: ಮೃತ್ಯುಂಜಯ ನದಿಗೆ ಹಾಲು ಸಮರ್ಪಣೆ: ವಯನಾಡು ದುರಂತದಲ್ಲಿ ಅಗಲಿದವರಿಗೆ ಶ್ರದ್ದಾಂಜಲಿ ಕಾರ್ಯಕ್ರಮ

ಚಾರ್ಮಾಡಿ: 5 ವರ್ಷಗಳ ಹಿಂದೆ ಭಾರೀ ಮಳೆಗೆ ಕೊಳಂಬೆಯಲ್ಲಾದ ಪ್ರವಾಹಕ್ಕೆ ಸಿಲುಕಿ ನಲುಗಿದ ಕೊಳಂಬೆ ಜನರ ಕಷ್ಟಗಳಿಗೆ ಸ್ಪಂದಿಸಿ, ಅಲ್ಲಿಯ ಜನರಿಗೆ ವಾಸಿಸಲು ಯೋಗ್ಯವಾದ ಸೂರನ್ನು ನಿರ್ಮಿಸಿ, ಅಲ್ಲಿಯ ಪರಿಸರವನ್ನು ಮೊದಲಿನಂತೆ ಮಾಡಲು ಪ್ರಯತ್ನಿಸಿ ಅಲ್ಲಿಯ ಜನರಿಗೆ ಅದೇ ಪರಿಸರದಲ್ಲಿ ಬದುಕಲು ಯೋಗ್ಯವಾದ ವ್ಯವಸ್ಥೆಯನ್ನು ಮಾಡಿಕೊಟ್ಟವರು ಲಕ್ಷ್ಮೀ ಗ್ರೂಪ್ಸ್ ನ ಮಾಲಕರು, ಬದುಕು ಕಟ್ಟೋಣ ತಂಡದ ಸಂಚಾಲಕರು ಮೋಹನ್ ಕುಮಾರ್. ಇಂದು ಕೊಳಂಬೆ ಪ್ರದೇಶದ ಕಳೆದ 5 ವರ್ಷಗಳ ಬೆಳವಣಿಗೆಯ ವೀಕ್ಷಣೆಗೆ ತೆರಳಿ ಮೃತ್ಯುಂಜಯ ನದಿಗೆ ಹಾಲು ಸಮರ್ಪಣೆ ಮಾಡಲಾಯಿತು ಹಾಗೂ ಇದೇ ವೇಳೆ ವಯನಾಡ್ ನಲ್ಲಿ ಅಗಲಿದವರಿಗೆ ಶ್ರದ್ದಾಂಜಲಿ ಕಾರ್ಯಕ್ರಮ ಜರುಗಿತು.

ಅಂದು ಕೊಳಂಬೆಯಲ್ಲಾದ ಪ್ರವಾಹ ಅಲ್ಲಿಯ ಜನರನ್ನು ಊರು ಬಿಟ್ಟೆ ತೆರಳುವಂತೆ ಮಾಡಿತ್ತು ಆದರೆ ಅವರ ಮನವೊಲಿಸಲಾಯಿತು. ಜನರ ಕಷ್ಟಗಳಿಗೆ ಸ್ಪಂದಿಸಿದ ಬದುಕು ಕಟ್ಟೋಣ ತಂಡ ಸೂರುಗಳನ್ನು ಕೃಷಿ ಹೀಗೆ ಹಲವಾರು ವಿಧದಲ್ಲಿ ಸಹಾಯವಾಗಿ ನಿಂತ ಪರಿಣಾಮ ಇದೀಗ ನೆಮ್ಮದಿಯಲ್ಲಿ ಜೀವನ ಸಾಗಿಸುವಂತಾಗಿದೆ ಎಂದು ಮೋಹನ್ ಕುಮಾರ್ ತಿಳಿಸಿದರು.

ಪ್ರವಾಹ ಸಂತ್ರಸ್ತೆ ತನ್ನ ಅಭಿಪ್ರಾಯವನ್ನು ಹಂಚಿಕೊಂಡರು. ಸಹಾಯ ಮಾಡಿದವರನ್ನು ಎಂದಿಗೂ ಮರೆಯಬಾರದು ಎಂದು ಎಸ್ ಡಿಎಂ ಕಾಲೇಜಿನ ಎನ್ ಎಸ್ ಎಸ್ ಯೋಜನಾಧಿಕಾರಿ ಡಾ ಮಹೇಶ್ ಕುಮಾರ್ ಶೆಟ್ಟಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕರು ರಾಜೇಶ್ ಪೈ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಚೈತ್ರೇಶ್ ಇಳಂತಿಲ, ತಾ.ಪಂ ಮಾಜಿ ಸದಸ್ಯ ಶಶಿಧರ್ ಕಲ್ಮಂಜ, ಕೊಳಂಬೆ ಪರಿಸರದ ನಾಗರಿಕರು, ಕಿರಣ್ ದೊಂಡೋಲೆ, ಬದುಕು ಕಟ್ಟೋಣ ಬನ್ನಿ ತಂಡ ಮೊದಲಾದವರು ಭಾಗಿಯಾಗಿದ್ದರು

Related post

Leave a Reply

Your email address will not be published. Required fields are marked *

error: Content is protected !!