• September 21, 2024

ಮೇ. 27: ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಜನ್ಮ ದಿನದ ಅಂಗವಾಗಿ ಹಿಂದೂ ಏಕತಾ ಶೋಭಾಯಾತ್ರೆ

 ಮೇ. 27:    ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಜನ್ಮ ದಿನದ ಅಂಗವಾಗಿ ಹಿಂದೂ ಏಕತಾ ಶೋಭಾಯಾತ್ರೆ

ಮಂಗಳೂರು :ಸನಾತನ ಸಂಸ್ಥೆಯ ಸಂಸ್ಥಾಪಕರಾಗಿರುವ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರ್ ಜಯಂತ ಆಠವಲೆಯವರ ಜನ್ಮೋತ್ಸವದ ನಿಮಿತ್ತ, ದೇಶದಲ್ಲೆಡೆ ‘ಹಿಂದೂ ಏಕತಾ ಶೋಭಯಾತ್ರೆ’ಯನ್ನು ಹಮ್ಮಿಕೊಳ್ಳಲಾಗಿದೆ. ಇದರ ಅಂತರ್ಗತ ವಿವಿಧೆಡೆಗಳಲ್ಲಿ ಹಿಂದೂ ಏಕತಾ ಶೋಭಾಯಾತ್ರೆಯ ಆಯೋಜನೆ ಮಾಡಲಾಗಿದ್ದು ಮೇ 27 ಶನಿವಾರ ಸಾಯಂಕಾಲ 4.00 ಗಂಟೆಗೆ ಮಂಗಳೂರಿನ ಬಲ್ಮಠ ಜ್ಯೂಸ್ ಜಂಕ್ಷನ್ ನಿಂದ ಲಾಲ್ ಬಾಗ್ ನ ವರೆಗೆ ಹಿಂದೂ ಏಕತಾ ಶೋಭಯಾತ್ರೆಯು ಸಾಗಲಿದೆ.

ಸಮಸ್ತ ಹಿಂದೂ ಬಾಂಧವರು ಈ ಶೋಭಯಾತ್ರೆಯಲ್ಲಿ ಪಾಲ್ಗೊಂಡು ತಮ್ಮ ಧರ್ಮಕರ್ತವ್ಯವನ್ನು ನಿಭಾಯಿಸಬೇಕಾಗಿ ತಿಳಿಸಲಾಗಿದೆ.

ಸನಾತನ ಸಂಸ್ಥೆಯ ವತಿಯಿಂದ ಆಯೋಜಿಸಲಾಗಿರುವ ಈ ಅಭಿಯಾನವು ಶ್ರೀಹನುಮ ಜಯಂತಿಯಿಂದ ಪ್ರಾರಂಭವಾಗಿ ಅಕ್ಷಯ ತೃತೀಯ ಮತ್ತು ಅಕ್ಷಯ ತೃತೀಯದಿಂದ ಮೇ ತಿಂಗಳ ಕೊನೆಯ ವಾರದವರೆಗೂ ದೇಶದಾದ್ಯಂತ ನಡೆಯಲಿದೆ. ಜೊತೆಗೆ ಸಾಧನೆಯ ವಿಷಯದಲ್ಲಿ ಪ್ರವಚನ, ಸಾಮೂಹಿಕ ಪ್ರಾರ್ಥನೆ, ದೇವಸ್ಥಾನಗಳ ಸಾಮೂಹಿಕ ಸ್ವಚ್ಛತೆಯಂತಹ ಹಲವು ಉಪಕ್ರಮಗಳನ್ನು ಸಹ ನಡೆಸಲಾಗುತ್ತಿದೆ.

Related post

Leave a Reply

Your email address will not be published. Required fields are marked *

error: Content is protected !!