ಶಿವಮೊಗ್ಗದಲ್ಲಿ ನಡೆದ ಕರ್ನಾಟಕ ರಾಜ್ಯಮಟ್ಟದ ವಕೀಲರ ಹಾರ್ಡ್ ಬಾಲ್ 20-20 ಕ್ರಿಕೆಟ್ ಪಂದ್ಯಕೂಟದಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಬೆಳ್ತಂಗಡಿ ವಕೀಲರ ತಂಡ

ಶಿವಮೊಗ್ಗ : ಶಿವಮೊಗ್ಗ ವಕೀಲರ ಸಂಘ ಆಯೋಜಿಸಿರುವ ಕರ್ನಾಟಕ ರಾಜ್ಯಮಟ್ಟದ ವಕೀಲರ ಹಾರ್ಡ್ ಬಾಲ್ 20-20 ಕ್ರಿಕೆಟ್ ಪಂದ್ಯಕೂಟದಲ್ಲಿ ಬೆಳ್ತಂಗಡಿ ವಕೀಲರ ತಂಡವು ಬೆಂಗಳೂರು ಮೈಸೂರು ಮತ್ತು ಫೈನಲ್ ಪಂದ್ಯಕೂಟದಲ್ಲಿ ಶಿವಮೊಗ್ಗ ತಂಡವನ್ನು ಸೋಲಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
ಕ್ರೀಡಾಕೂಟವು 17 ಮತ್ತು 18ನೇ ತಾರೀಕಿನಂದು ಶಿವಮೊಗ್ಗದ ಕರ್ನಾಟಕ ರಾಜ್ಯ ಕ್ರಿಕೆಟ್ ಅಕಾಡೆಮಿ ಮೈದಾನದಲ್ಲಿ ನಡೆದಿದ್ದು ಹುಬ್ಬಳ್ಳಿ ಶಿವಮೊಗ್ಗ ಮೈಸೂರು ಬೆಂಗಳೂರು ಮಲೆನಾಡು ವಕೀಲರ ತಂಡಗಳು ಭಾಗವಹಿಸಿದ್ದವು.
ಬೆಳ್ತಂಗಡಿ ವಕೀಲರ ತಂಡದ ಪರವಾಗಿ ವಕೀಲರಾದ ನವಾಜ್ ಶರೀಫ್ ,ಯಶವಂತ್ ,ಮುರಳಿಧರ್, ತೇಜಸ್, ಅಭಿಮನ್ಯು ,ಅಭಯ್ ವಿಜಯ್ ಮಟ್ಮಾರಿ ,ಗಣೇಶ್ ಅರವಿಂದ್, ಜಗದೀಶ್ ,ಸುಮಂತ್ ಗೌರಿಶಂಕರ್ ,ಹರ್ಷಿತ್ ಹಾಗೂ ಮುಸ್ತಫ ಭಾಗವಹಿಸಿದ್ದರು.
ಉತ್ತಮ ದಾಂಡಿಗನಾಗಿ ತೇಜಸ್ ಉತ್ತಮ ಎಸೆತಗಾರನಾಗಿ ಯಶವಂತ್ ಹಾಗೂ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ಅಭಿಮನ್ಯು ಪಡೆದುಕೊಂಡರು