ಚಾರ್ಮಾಡಿ: ರಾತ್ರಿ 12 ಗಂಟೆಯಾದರೂ ಮತಯಂತ್ರವನ್ನು ರವಾನಿಸದ ಚುನಾವಣಾಧಿಕಾರಿಗಳು: ಕಾರ್ಯಕರ್ತರಿಂದ ಆಕ್ರೋಶ: ಪೊಲೀಸರಿಂದ ಲಾಠಿ ಚಾರ್ಜ್
ಚಾರ್ಮಾಡಿ: ಬೆಳ್ತಂಗಡಿ ತಾಲೂಕಿನ ಚಾರ್ಮಾಡಿಯಲ್ಲಿ ರಾತ್ರಿ 12 ಗಂಟೆಯಾದರೂ ಮತಯಂತ್ರ ಕೊಂಡುಹೋಗದೇ ಇದ್ದ ಹಿನ್ನೆಲೆ, ಚಾರ್ಮಾಡಿ ಬೂತ್ ಸಂಖ್ಯೆ 21,22,23,24 ಮತಯಂತ್ರ ಕೆಟ್ಟುಹೋಗಿದ್ದ ಹಿನ್ನೆಲೆ ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರು ಗಲಾಟೆಯನ್ನು ಮಾಡಿದ ಘಟನೆ ಮೇ.10 ರಂದು ನಡೆದಿದೆ.
ಕಾರ್ಯಕರ್ತರು ಚುನಾವಣಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಕರೆಂಟ್ ಇಲ್ಲದ ಕಾರಣ ತೆಗೆದುಕೊಂಡು ಹೋಗಲು ಆಗಲಿಲ್ಲ ಎಂದು ಚುನಾವಣಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಪರಿಶೀಲನೆ ಬಳಿಕ ರಾತ್ರಿ 12ಗಂಟೆಗೆ ಮತಯಂತ್ರ ರವಾನೆ ಮಾಡಲಾಗಿದ್ದು, ಕಾರ್ಯಕರ್ತರನ್ನು ನಿಯಂತ್ರಣಕ್ಕೆ ತರಲಾಗದೇ ಪೊಲೀಸರು ಲಾಠಿ ಚಾರ್ಜ್ ಮಾಡುವ ಇದ್ದಾರೆ