ಬೆಳ್ತಂಗಡಿ: ಕಾಂಗ್ರೆಸ್ ವತಿಯಿಂದ ಬಹಿರಂಗ ಪ್ರಚಾರ ಸಭೆ
ಬೆಳ್ತಂಗಡಿ: ಬಹಿರಂಗ ಪ್ರಚಾರ ಸಭೆಯ ಅಂತಿಮ ದಿನವಾದ ಇಂದು ಬೆಳ್ತಂಗಡಿ ಚರ್ಚ್ ರೋಡ್ ನಿಂದ ಬೆಳ್ತಂಗಡಿ ಬಸ್ ನಿಲ್ದಾಣದ ವರೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಕ್ಷಿತ್ ಶಿವರಾಂ ಹಾಗೂ ಚಿನ್ನಾರಿಮುತ್ತ ಖ್ಯಾತಿಯ ಚಲನಚಿತ್ರ ನಟ ವಿಜಯ ರಾಘವೇಂದ್ರ ಅವರು ನೂರಾರು ಕಾರ್ಯಕರ್ತರ ಜೊತೆಗೆ ಮತಯಾಚನೆ ನಡೆಸಿದರು.