ಅಕ್ಬರ್ ಬೆಳ್ತಂಗಡಿ ಪರವಾಗಿ ಎಸ್‌ಡಿಪಿಐ ಪಕ್ಷದ ಕಾರ್ಯಕರ್ತರಿಂದ ಕ್ಷೇತ್ರವ್ಯಾಪ್ತಿಯಲ್ಲಿ ಬಿರುಸಿನ ಮತಯಾಚನೆ
ಬೆಳ್ತಂಗಡಿ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ‘ನನ್ನ ಮತ ನಮ್ಮ ಅಸ್ತಿತ್ವಕ್ಕೆ’ ಎಂಬ ಧ್ಯೇಯದೊಂದಿಗೆ ಅಭ್ಯರ್ಥಿ ಅಕ್ಬರ್ ಬೆಳ್ತಂಗಡಿ ಪರ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪಕ್ಷದ ಕಾರ್ಯಕರ್ತರಿಂದ ಮನೆ ಮನೆ ಪ್ರಚಾರ ಕಾರ್ಯಕ್ರಮ ನಡೆಯಿತು.
ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಬೂತ್ ಗಳಲ್ಲಿ ಪಕ್ಷದ ಅಭ್ಯರ್ಥಿ, ನಾಯಕರು ಮತ್ತು ಕಾರ್ಯಕರ್ತರಿಂದ ಮನೆ ಮನೆಗೆ ತೆರಳಿ ಮತದಾರರ ಬಳಿ ಮತಯಾಚನೆ ನಡೆಯಿತು.
ಅಭ್ಯರ್ಥಿ ಅಕ್ಬರ್ ಬೆಳ್ತಂಗಡಿ ಉಜಿರೆ ಗ್ರಾಮ ವ್ಯಾಪ್ತಿಯಲ್ಲಿ ಮತಯಾಚನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಹೊಸ ಬದಲಾವಣೆಯಿಂದ ಬೆಳ್ತಂಗಡಿ ಅಭಿವೃದ್ಧಿ ಸಾಧ್ಯ. ಅದಕ್ಕೆ ನಮ್ಮ ಪಕ್ಷ ಸನ್ನದ್ಧವಾಗಿದೆ. ಜನರ ಹಿತ ಕಾಯುವುದೇ ನಮ್ಮ ಗುರಿಯಾಗಿದ್ದು, ಜನಪರ ಆಡಳಿತ ನೀಡಲು ನಾವು ಬದ್ಧರಾಗಿದ್ದೇವೆ ಎಂದು ತಿಳಿಸಿ, ಕ್ಷೇತ್ರದ ಅಭಿವೃದ್ದಿಗಾಗಿ ಎಸ್‌ಡಿಪಿಐ ಬೆಂಬಲಿಸಿ ಮತ ನೀಡಿ ಎಂದು ಕೋರಿದರು.
ಪಕ್ಷದ ಮುಖಂಡರಾದ ನವಾಝ್ ಕಟ್ಟೆ, ನಿಜಾಮ್ ಗೇರುಕಟ್ಟೆ, ಫಝಲ್ ಉಜಿರೆ, ಹನೀಫ್ ಪುಂಜಾಲಕಟ್ಟೆ, ನಿಸಾರ್ ಕುದ್ರಡ್ಕ, ಇನಾಸ್ ರೋಡ್ರಿಗಸ್, ಸಾದಿಕ್ ಲಾಯಿಲ, ಸಾಹುಲ್ ಉಜಿರೆ, ಹುಸೈನ್ ಲಾಡಿ, ರಫೀಕ್ ಕನ್ನಡಿಕಟ್ಟೆ, ಅಶ್ರಫ್ ಚಾರ್ಮಾಡಿ ಪಕ್ಷದ ಪಂಚಾಯತ್ ಸದಸ್ಯರುಗಳು, ಬ್ಲಾಕ್ ಸಮಿತಿ ನಾಯಕರು, ಗ್ರಾಮದ ಮುಖಂಡರು, ಬೂತ್ ಸಮಿತಿ ಪದಾಧಿಕಾರಿಗಳು, ಪಕ್ಷದ ಕಾರ್ಯಕರ್ತರು, ಹಿತೈಷಿಗಳು ಅಭ್ಯರ್ಥಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು.