• September 21, 2024

ಬೆಳ್ತಂಗಡಿ: ಬಿಜೆಪಿ ಪ್ರಣಾಳಿಕೆ ಬಿಡುಗಡೆ: ಪ್ರಣಾಳಿಕೆಯಲ್ಲಿ ಏನಿದೆ?

 ಬೆಳ್ತಂಗಡಿ: ಬಿಜೆಪಿ ಪ್ರಣಾಳಿಕೆ ಬಿಡುಗಡೆ: ಪ್ರಣಾಳಿಕೆಯಲ್ಲಿ ಏನಿದೆ?

ಬೆಳ್ತಂಗಡಿ: ಭಾರತೀಯ ಜನತಾ ಪಾರ್ಟಿಯ ಪ್ರಣಾಳಿಕೆಯು ಮೆ.5 ರಂದು ಬೆಳ್ತಂಗಡಿ ಬಿಜೆಪಿ ಕಚೇರಿಯಲ್ಲಿ ಬಿಡುಗಡೆಗೊಂಡಿತು.

ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದರು.

ಬಿಜೆಪಿ ಪ್ರಣಾಳಿಕೆ ಇಂತಿದೆ

1) ನಗರದ ಪ್ರಮುಖ ರಸ್ತೆಗಳನ್ನು ಸೌಂದರೀಕರಣಗೊಳಿಸಲಾಗುವುದು.
2) ಸುಸಜ್ಜಿತ ಸಂತೆ ಮಾರುಕಟ್ಟೆ ಪ್ರಾಂಗಾಣ ಅಭಿವೃದ್ಧಿಗೊಳಿಸುವುದು
3) ಸುಸಜ್ಜಿತ ರಿಕ್ಷಾ ಪಾರ್ಕಿಂಗ್ ವ್ಯವಸ್ಥೆ
4) ಗೂಡ್ಸ್, ಟೆಂಪೋ ರಿಕ್ಷಾ ಪಾರ್ಕಿಂಗ್ ವ್ಯವಸ್ಥೆ
5) ನಿವೇಶನರಹಿತರಿಗೆ ನಿವೇಶನವನ್ನು ಒದಗಿಸುವುದು
6) ನಗರದ ಎಲ್ಲಾ ವಸತಿರಹಿತರಿಗೆ ವಸತಿಯನ್ನು ಒದಗಿಸುವುದು
7) ನಗರದ ಪ್ರತೀ ಮನೆಗಳಿಗೆ 12 ಗಂಟೆ ಕುಡಿಯುವ ನೀರಿನ ವ್ಯವಸ್ಥೆ
8) ನಗರದ ಪ್ರಮುಖ ಕೆರೆಗಳ ಅಭಿವೃದ್ಧಿ
9) ನಗರದ ಆಯ್ದ ಭಾಗದಲ್ಲಿ ಚಿಣ್ಣರ ಪಾರ್ಕ್ ನಿರ್ಮಾಣ
10) ಸಾಲು ಮರದ ತಿಮ್ಮಕ್ಕ ಟ್ರೀ ಪಾರ್ಕನ್ನು 2 ನೇ ಹಂತದ ಕಾರ್ಯಯೋಜನೆಯಾಗಿ ಅಭಿವೃದ್ಧಿ ಗೊಳಿಸುವುದು
11) ಸರಕಾರಿ ಮಾದರಿ ಶಾಲೆಗಳನ್ನು ಅಭಿವೃದ್ಧಿ ಗೊಳಿಸುವುದು
12) ನಗರದ ಹೈಟೆಕ್ ಸ್ಮಶಾನ ನಿರ್ಮಾಣ
13) ನಗರದಲ್ಲಿ ಒಳಚರಂಡಿ ವ್ಯವಸ್ಥೆಯನ್ನು ನಿರ್ಮಾಣ ಮಾಡುವುದು

ಪ್ರಣಾಳಿಕೆ ಬಿಡುಗಡೆ ವೇಳೆ ಮುಗುಳಿ ನಾರಾಯಣ ಭಟ್, ಜಯಾನಂದ ಗೌಡ, ಜಯಂತ್ ಕೋಟ್ಯಾನ್, ರಜನಿ ಕುಡ್ವ, ಮೊದಲಾದವರು ಉಪಸ್ಥಿತರಿದ್ದರು.

Related post

Leave a Reply

Your email address will not be published. Required fields are marked *

error: Content is protected !!