• March 16, 2025

ಬೆಳ್ತಂಗಡಿಯಲ್ಲಿ ರಕ್ಷಿತ್ ಶಿವರಾಂ ಗೆಲುವು ನಿಶ್ಚಿತ- ಮಾಜಿ ಶಾಸಕ ವಸಂತ್ ಬಂಗೇರ ಭವಿಷ್ಯ

 ಬೆಳ್ತಂಗಡಿಯಲ್ಲಿ ರಕ್ಷಿತ್ ಶಿವರಾಂ ಗೆಲುವು ನಿಶ್ಚಿತ- ಮಾಜಿ ಶಾಸಕ ವಸಂತ್ ಬಂಗೇರ ಭವಿಷ್ಯ

 

ಬೆಳ್ತಂಗಡಿ:- ಕಾಂಗ್ರೆಸ್ ಪಕ್ಷ ಎಲ್ಲಾ ಸಮುದಾಯದವರಿಗೆ ನೀಡುತ್ತಿರುವ ಗ್ಯಾರೆಂಟಿಗಳಿಂದ ರಾಹ್ಯದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬರಲಿದೆ. ಸ್ಥಳೀಯ ಶಾಸಕರ ಅಧಿಕಾರ ದುರ್ಬಳಕೆ ಮಿತಿ ಮೀರಿ ಜನರೇ ಸೋಲಿಸಲು ತೀರ್ಮಾನಿಸಿದ್ದಾರೆ. ಯುವ ನಾಯಕ ರಕ್ಷಿತ್ ಶಿವರಾಂ ಗೆಲುವು ನಿಶ್ಚಿತ ಎಂದು ಮಾಜಿ ಶಾಸಕ ವಸಂತ್ ಬಂಗೇರ ವಿಸ್ವಾಸ ವ್ಯಕ್ತಪಡಿಸಿದ್ದಾರೆ.

ಪಡಂಗಡಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ಪರ ಮತಯಾಚನೆ ಮಾಡಿ ಮಾತ್ನಾಡಿದ ಬಂಗೇರರು, ನನ್ನ ಸುಧೀರ್ಘ ಅವಧಿಕಯಲ್ಲಿ ಈ ಮಟ್ಟದ ಭ್ರಷ್ಟಾಚಾರ ಎಂದೂ ನೋಡಿಲ್ಲ. ತಾಲೂಕಿನ ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ಮನವಿ ಮಾಡಿದರು.

ಇದೇ ವೇಳೆ ಡಿಸಿಸಿ ಅಧ್ಯಕ್ಷರಾದ ಹರೀಶ್ ಕುಮಾರ್ ಮಾತ್ನಾಡಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬರಬೇಕಾದರೆ ರಕ್ಷಿತ್ ಶಿವರಾಂ ಗೆಲ್ಲಬೇಕು. ಕರಾವಳಿ ಜಿಲ್ಲೆಗಳಲ್ಲಿ ಬದಲಾವಣೆಯ ಪರ್ವ ಶುರುವಾಗಿದೆ. ಅದು ಬೆಳ್ತಂಗಡಿ ತಾಕೂಲಿನಿಂದಲೇ ಶುರುವಾಗಲಿದೆ. ನಮ್ಮ ಕಾರ್ಯಕರ್ತರು ಪ್ರತಿ ಮನೆ ಮನೆಗೂ ತೆರಲಿ ಮತ ಹಾಕಿಸಬೇಕು ಎಂದು ಮನವಿ ಮಾಡಿದರು.

ಮತಯಾಚನೆ ವೇಳೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಶೇಖರ್ ಕುಕ್ಯಾಡಿ, ಮಾಜಿ ತಾಲೂಕು ಪಂಚಾಯಿತಿ ಸದಸ್ಯೆ ಸುಶೀಲಾ,
ಕುಕ್ಯಾಡಿ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಪದ್ಮನಾಭ್ , ಪಡಂಗಡಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಮ್ಯಾಕ್ಸಿನ್ ಕ್ರಾಸ್ದ, ಬಳಂಜೆ ಪಂಚಾಯಿತಿ ಸದಸ್ಯರು ರವೀಂದ್ರ ಬಿ ಅಮೀನ್, ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.

Related post

Leave a Reply

Your email address will not be published. Required fields are marked *

error: Content is protected !!